ಬೆಂಗಳೂರು: – ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಕ್ಕೆ ಬಿಜೆಪಿ ನಾಯಕರಾದ ಸಿ ಸಿ ಮುನಿಕೃಷ್ಣ ಅವರನ್ನು ಮುಖ್ಯ ಮಂತ್ರಿ ಬಿ ಎಸ್ ಯಡಿಯೂರಪ್ಪ ನೇಮಕ ಮಾಡಿದ್ದರು.
ನಿಗಮದ ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವ ಸಿ ಸಿ ಮುನಿಕೃಷ್ಣ ಸಪ್ತಸ್ವರ ದೊಂದಿ ಗೆ ಮಾತನಾಡುತ್ತಾ ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಕಳೆದ 30 ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ನಾನು ಮಾಡಿದ ಸೇವೆಯನ್ನು ಪರಿಗಣಿಸಿ ಪಕ್ಷ ನನಗೆ ಈ ಅವಕಾಶ ನೀಡಿದೆ. ಅಂಬೇಡ್ಕರ್ ನಿಗಮದಲ್ಲಿ ಹಲವಾರು ಯೋಜನೆಗಳು ಇವೆ,ಈ ಯೋಜನೆ ಸರಿಯಾದ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ನನಗೆ ಅವಕಾಶ ನೀಡಿದ ಪಕ್ಷ ಎಲ್ಲಾ ನಾಯಕರಿಗು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಕೃತಜ್ಞತೆ ಸಲ್ಲಿಸಿದರು.
ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ ದ ಹಿನ್ನೆಲೆ :
ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ದಿಗಾಗಿ “ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭವೃದ್ದಿ ನಿಗಮ ” ವನ್ನು 1975ನೇ ಸಾಲಿನಲ್ಲಿ ಸ್ಥಾಪಿಸಲಾಯಿತು.ನಿಗಮವು 1956ರ ಕಂಪನಿ ಕಾಯ್ದೆಯಡಿ ಸ್ಥಾಪಿಸಲಾಯಿತು.ನಂತರ ನಿಗಮವನ್ನು 13.10.2005ರಲ್ಲಿ “ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ” ಎಂದು ಮರು ನಾಮಕರಣ ಮಾಡಲಾಗಿತ್ತು.
ಸಿ .ಸಿ. ಮುನಿಕೃಷ್ಣ ಅವರ ಮಾತು ಕೇಳಲು ಇಲ್ಲಿ ಕ್ಲಿಕ್ ಮಾಡಿ……