IMG 20201205 145105 scaled

ಅಂಘಟಿತ ವಿಶ್ವಕರ್ಮರನ್ನು ಗುರುತಿಸಿ ಸದಸ್ಯತ್ವ ನೊಂದಣಿ…!

STATE Genaral

ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ ನೂತನ ಸಾರಥಿ; ಅಂಘಟಿತ ವಿಶ್ವಕರ್ಮರನ್ನು ಗುರುತಿಸಿ ಸದಸ್ಯತ್ವ ನೊಂದಣಿ

ಬೆಂಗಳೂರು- ವಿಶ್ವಕರ್ಮ ಅಭಿವೃದ್ದಿ ನಿಗಮದಡಿ ವಿಶ್ವಕರ್ಮ ಜನಾಂಗಗಳಲ್ಲಿ ಕಮ್ಮಾರಿಕೆ, ಶಿಲ್ಪಕಲೆಗಳಲ್ಲಿ ತೊಡಗಿರುವ ಅಸಂಘಟಿತ ಕುಶಲ ಕರ್ಮಿಗಳನ್ನು ಗುರುತಿಸಿ ಸದಸ್ಯತ್ವ ನೀಡುವ ಮೂಲಕ ನಿಗಮದಡಿ ದೊರೆಯುವ ಸವಲತ್ತುಗಳನ್ನು ಅವರಿಗೆ ನೀಡಲಾಗುವುದು ಎಂದು ವಿಶ್ವ ಕರ್ಮ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷ ಬಾಬು ಪತ್ತಾರ್ ಹೇಳಿದ್ದಾರೆ.

ಸಪ್ತಸ್ವರ ದೊಂದಿಗೆ  ಮಾತನಾಡಿದ ಅವರು, ಭದ್ರತೆ ಇಲ್ಲದಿರುವ ಅಸಂಘಟಿತ ಕೆಲಸಗಾರರನ್ನು ಗುರುತಿಸಿ ಅವರಿಗೆ ಬಸ್‍ಪಾಸ್ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗುವುದು. ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಅರಿವು ಎಂಬ ನೂತನ ಯೋಜನೆಯನ್ನು ನಿಗಮದಡಿ ಆರಂಭಿಸಲಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ನೇರಸಾಲ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ವಿಶ್ವಕರ್ಮ ಜನಾಂಗಗಳ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ವಿಶ್ವಕರ್ಮ ಭವನಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಬಾಬು ಪತ್ತಾರ್ ಸಂಪೂರ್ಣ ಮಾತು ಇಲ್ಲಿದೆ ಕ್ಲಿಕ್ ಮಾಡಿ ಕೇಳಿ