IMG 20201206 WA0024

ಪಾವಗಡ: ಡಾ.ಬಿ.ಆರ್. ಅಂಬೇಡ್ಕರ್ ಅವರ 64 ನೇ ಮಹಾ ಪರಿನಿರ್ವಾಣ ದಿನ ಆಚರಣೆ…!

DISTRICT NEWS ತುಮಕೂರು

 

ಪಾವಗಡ: –  ದಲಿತಪರ ಸಂಘಟನೆಗಳ ಆಶ್ರಯದಡಿ ಡಾ.ಬಿ.ಆರ್. ಅಂಬೇಡ್ಕರ್ ಅವರ 64 ನೇ ಮಹಾ ಪರಿನಿರ್ವಾಣ ದಿನವನ್ನು ಪಟ್ಟಣ ಹೊರವಲಯದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆಸಲಾಯಿತು.

ಇನ್ನು ಪಟ್ಟಣದ ಟೋಲ್ಗೇಟ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ಹಾರ ಹಾಕಿ ಗೌರವ ಸೂಚಿಸಿ ಆನಂತರ ಅಂಬೇಡ್ಕರ್ ರವರಿಗೆ ಜೈಕಾರದ ಘೋಷಣೆ ಕೂಗುತ್ತ ತುಮಕೂರು ಮಾರ್ಗದಲ್ಲಿರುವ ಅಂಬೇಡ್ಕರ್ ಭವನದವರೆಗೂ ಮೆರವಣಿಗೆ ಸಾಗಿದರು.

IMG 20201206 WA0025

ಇದೇ ವೇಳೆ ಹೋರಾಟಗಾರ ದಿವಂಗತ ಜಯಣ್ಣನವರ ಪುಣ್ಯ ಸ್ಮರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂತಕ ಕೊಟ್ಟಶಂಕರ್ ರವರು ಅಂಬೇಡ್ಕರ್ ವ್ಯಕ್ತಿಯಲ್ಲ ಅದೊಂದು ಭವ್ಯ ಶಕ್ತಿ.ಸದಾ ದೀನದಲಿತರ ಆರ್ತನಾದವನ್ನ ಅರಿತು ಅವರ ಬದುಕಿನ ಆಸರೆಗೆ ಹೋರಾಡಿದ ಜನಸೇವಕನನ್ನು ಪೂಜಿಸುವುದಲ್ಲ ಅನುಸರಿಸುವುದು ಅನಿವಾರ್ಯ ಎಂದರು.
ಅಷ್ಟೇ ಅಲ್ಲದೆ ಮಹಿಳೆಯರ ಹಕ್ಕೋತ್ತಾಯಕ್ಕೆ ಶ್ರಮಿಸಿದವರು. ಯಾವಾಗ ಬಿಲ್ ಸಫಲತೆ ಕಾಣಲ್ವೊ ಆ ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಏಕೈಕ ವ್ಯಕ್ತಿ ಅದು ಅಂಬೇಡ್ಕರ್ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ ತುಳಿತಕ್ಕೆ ಒಳಗಾದ ಸಮುದಾಯದ ಜನರು ಮೊದಲು ಸಂಘಟಿತರಾಗಿ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವ ಎಚ್ಚರವಹಿಸಬೇಕಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಬಸವಲಿಂಗಪ್ಪ ಮಾತನಾಡಿದರು.
ಮುಖಂಡರಾದ
ತಾ.ಪಂ.ಅಧ್ಯಕ್ಷೆ ಮಾಳಮ್ಮ ಸುಬ್ಬರಾಯಪ್ಪ, ಉಗ್ರ ನರಸಿಂಹಪ್ಪ, ಎಸ್ ಹನುಮಂತರಾಯಪ್ಪ, ಎಂಕೆ ನಾರಾಯಣಪ್ಪ, ಪ್ರಾಂಶುಪಾಲರಾದ ಬಸವಲಿಂಗಪ್ಪ , ಶಿವಕುಮಾರ್ ಸಾಕೆಲ್, ಟಿ.ಎನ್ ಪೇಟೆ ರಮೇಶ್ ,ಲಿಂಗಣ್ಣ ಜಂಗಮರಹಳ್ಳಿ, ಆರ್ ಟಿ.ಖಾನ್ , ಡಿ.ಎಸ್.ಎಸ್ ತಿಪ್ಪೇಸ್ವಾಮಿ , ಪೆದ್ದನ್ನ, ಮಂಜು ನಲಿಗಾನಹಳ್ಳಿ, ವಳ್ಳೂರು ನಾಗೇಶ್ ,ಧನಂಜಯ್, ಗಂಗಯ್ಯ ಹಲವರು ಇದ್ದರು

ವರದಿ: ನವೀನ್ ಕಿಲಾರ್ಲಹಳ್ಳಿ*