ಶಿವಮೊಗ್ಗ: ಶಿವಮೊಗ್ಗ ಬಳಿ ಇರುವ ಹುಣಸೋಡು ಬಳಿ ಇರುವ ಜಲ್ಲಿ ಕ್ರಷರ್ ಬಳಿ ಜಲಿಟಿನ್ ಕಡ್ಡಿಗಳು ಸ್ಫೋಟ ವಾಗಿದೆ.
ಸ್ಫೋಟ ರಾ ತ್ರಿ 10:30 ರ ಸಂದರ್ಭದಲ್ಲಿ ಸಂಭವಿಸಿದೆ.ಜಲ್ಲಿ ಕ್ರಷರ್ ಬಳಿ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಡೈನಾಮೆಟ್ ಸ್ಪೋಟಿಸಿದ ಪರಿಣಾಮ ಬಿಹಾರ ಮೂಲದ ಕಾರ್ಮಿಕರು ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಕಲ್ಲು ಗಣಿಗಾರಿಕೆಗಾಗಿ ಲಾರಿಯಲ್ಲಿ ತಂದಿದ್ದ 50 ಡೈನಾಮೆಟ್ ಬಾಕ್ಸ್ ಗಳು ಸ್ಪೋಟಗೊಂಡು ಈ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಆರು ಕ್ಕೂ ಹೆಚ್ಚು ಮಂದಿ ಬಿಹಾರಿ ಕಾರ್ಮಿಕರು ಸಾವನ್ನಪ್ಪಿರ ಬಹುದು ಎನ್ನಲಾಗುತ್ತಿದೆ.,20 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು.ತನಿಖೆ ಗೆ ಸರ್ಕಾರ ಆದೇಶಿಸಿದೆ. ಮೃತ ದೇಹಗಳು ಚಿದ್ರವಾದ ಕಾರಣ ಸಾವಿನ ಸಂಖ್ಯೆ ಪತ್ತೆ ಹಚ್ಚಲು ಇಲ್ಲಿಯವರೆಗೂ ಜಿಲ್ಲಾಡಳಿತಕ್ಕೆ ಆಗಿಲ್ಲ ತನಿಖೆ ಮುಂದುವರೆದಿದೆ.
ಕಾರ್ಮಿಕರ ದೇಹಗಳು ಗುರುತು ಸಿಗಲಾರದಷ್ಟು ಛಿದ್ರವಾಗಿವೆ. ಸ್ಥಳದಲ್ಲಿದ್ದ ಯಾರೂಬ್ಬರು ಬದುಕುಳಿದಿರುವ ಸಾಧ್ಯತೆ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುತ್ತ ಮುತ್ತ ಮನೆಗಳಿಗೆ ಹಾನಿ,
ಡೈನಾಮೆಟ್ ಸ್ಫೋಟದಿಂದ ಭೂಕಂಪನದ ಅನುಭವಾಯ್ತು ಎನ್ನುತ್ತಾರೆ ಸ್ಥಳೀಯರ. ಬಂಡೆ ಬ್ಲಾಸ್ ಮೊದಲಿನಿಂದಲು ನಡೆಯುತ್ತಿತ್ತು. ಈಗ ಸ್ಫೋಟ ವಾಗಿದೆ. ಹಾನಿ ಒಳಗಾದ ಮನೆಗಳಿಗೆ ಪರಿಹಾರ ನೀಡಬೇಕು ಎಂದು ಸ್ಥಳೀಯ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮುಖ್ಯ ಮಂತ್ರಿ ಯಡಿಯೂರಪ್ಪ . ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಶಿವಮೊಗ್ಗದಲ್ಲಿ ಸಂಭವಿಸಿರುವ ಜೀವಹಾನಿಯಿಂದ ದುಃಖಿತವಾಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ಬಾಧಿತರಿಗೆ ಎಲ್ಲ ಸಾಧ್ಯ ನೆರವನ್ನೂ ಒದಗಿಸುತ್ತಿದೆ: ಪ್ರಧಾನಮಂತ್ರಿ @narendramodi
ಮುಖ್ಯಮಂತ್ರಿ ಬಿಎಸ್ ವೈ
ಶಿವಮೊಗ್ಗದ ಬಳಿ ನಿನ್ನೆ ರಾತ್ರಿ ಸಂಭವಿಸಿದ ಭಾರಿ ಅನಾಹುತದಲ್ಲಿ ಅನೇಕ ಮಂದಿ ಸಾವನ್ನಪ್ಪಿರುವ ಕುರಿತಂತೆ ಮುಖ್ಯಮಂತ್ರಿ @BSYBJP ರವರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದೊಂದು ಆಘಾತಕಾರಿ, ದುರದೃಷ್ಟಕರ ಘಟನೆ ಎಂದಿರುವ ಮುಖ್ಯಮಂತ್ರಿಗಳು, ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿ, ಕುಟುಂಬದವರಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. (1/2)