IMG 20210122 WA0023

ಪಾವಗಡ: ನೂತನ ಗೃಹ ಉಪಯೋಗಿ ವಸ್ತುಗಳ ಮಳಿಗೆ ಆರಂಭ…!

DISTRICT NEWS ತುಮಕೂರು

ವೈ.ಎನ್.ಹೊಸಕೋಟೆ ಗ್ರಾಮದ ಜೆ.ಅಚ್ಚ ಮ್ಮನಹಳ್ಳಿ ರಸ್ತೆಯಲ್ಲಿ ಶುಕ್ರವಾರ ಗೃಹ ಉಪಯೋಗ ವಸ್ತುಗಳ ನೂತನ    ಚಿನ್ಮಯಿ ಎಂಟರ್ಪ್ರೈಸಸ್ ಮಳಿಗೆಯನ್ನು  ಪಾವಗಡ ಶಾಸಕ ವೆಂಕಟರಮಣಪ್ಪ ಉದ್ಘಾಟಿಸಿದರು.
ನಂತರ   ಮಾತನಾಡಿ  ಅವರು ದಿನನಿತ್ಯ ಬೇಕಾಗುವ ಗೃಹಪಯೋಗಿ ವಸ್ತುಗಳು ಹಳ್ಳಿಯಿಂದ ತಾಲೂಕು ಕೇಂದ್ರಕ್ಕೆ ಹೋಗಿ ತರಬೇಕಾಗಿತ್ತು ಈ ಮಳಿಗೆಯೂ ಪ್ರಾರಂಭವಾಗಿರುವುದರಿಂದ ಈ ಭಾಗದ ಜನತೆ ತಾಲೂಕು ಕೇಂದ್ರಕ್ಕೆ ಹೋಗುವುದು ತಪ್ಪುತ್ತದೆ ಹಾಗೂ ಟಿವಿ, ಫ್ರಿಡ್ಜ್, ವಾಷಿಂಗ್, ಮಿಷನ್, ಫ್ಯಾನ್, ಏರ್ ಕೂಲರ್, ಮಿಕ್ಸಿ, ಗ್ರೈಂಡರ್, ವಿವಿಧ ಬಗೆಯ ಮನೆ ಬಳಕೆಗೆ ಬೇಕಾಗುವ ವಸ್ತುಗಳು ಇಲ್ಲೇ ದೊರೆಯುವುದರಿಂದ ಜನತೆಗೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು.IMG 20210123 WA0006

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಿ.ಸಿ.ನಾಗರಾಜ್ ಜಿಪಂ ಸದಸ್ಯರಾದ ಗೌರಮ್ಮತಿಮ್ಮಪ್ಪ, ತಾ.ಪಂ. ಸದಸ್ಯ ಸೊಗಡುವೆಂಕಟೇಶ್, ಸಣ್ಣರೆಡ್ಡಿ, ಮುಖಂಡರಾದ ಎಸ್.ಶಿವಪ್ರಸಾದ್,ತಿಮ್ಮಜ್ಜ, ಮಾನಂ ವೆಂಕಟಸ್ವಾಮಿ, ಎಸ್. ಟಿ. ನಾಗರಾಜ್, ಜಿ.ಬಿ. ಸತ್ಯನಾರಾಯಣ ಶಿವಕುಮಾರ ಸಕೇಲ್, ಬಿ. ಹೊಸಹಳ್ಳಿ ನಾಗರಾಜ್, ದುಗ್ಗಿ ವೆಂಕಟೇಶ್, ಚಂದ್ರನಾಯ್ಕ, ಜ್ಯೋತಿ ತಿಪ್ಪೇಸ್ವಾಮಿ, ಶಿವು, ಚೈತನ್ಯ ಪ್ರಭು, ಮಾಲಿಂಗಪ್ಪ, ಎ.ಒ.ನಾಗರಾಜ್, ಶಂಶುದ್ದಿನ್, ಡಿಸಿಸಿ ಬ್ಯಾಂಕ್ ಸೀನಪ್ಪ, ಮಾಲೀಕರಾದ ಟಿ. ಉಮೇಶ್,ಟಿ. ದಿನೇಶ್ ಭಾಗವಹಿಸಿದ್ದರು.