IMG 20210122 WA0025

ಪಾವಗಡ: ದೆಹಲಿ ಯ ರೈತರ ಹೋರಾಟ ಬೆಂಬಲಿಸಿ ಧರಣಿ…!

DISTRICT NEWS ತುಮಕೂರು

ಪಾವಗಡ. ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಗಣರಾಜ್ಯೋತ್ಸವದ ದಿನವಾದ ಜನವರಿ 26ರಂದು ಬೆಂಗಳೂರಿನಲ್ಲಿ ದೊಡ್ಡಮಟ್ಟದ ಪರ್ಯಾಯ ಪರೇಡ್ ನಡೆಸಲು ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ ಮತ್ತು ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿ ‘ಸಂಯುಕ್ತ ಹೋರಾಟ- ಕರ್ನಾಟಕ’ ಮುಂದಾಗಿದೆ ಹೋರಾಟ ಬೆಂಬಲಿಸಿ ಪಾವಗಡ ಘಟಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ಪೂಜಾರಪ್ಪ ಅವರ ನೇತೃತ್ವದಲ್ಲಿ ಸುಮಾರು 100 ಕ್ಕೂ ಹೆಚ್ಚು ರೈತರು 26ರಂದು ಬೆಂಗಳೂರಿಗೆ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು,

ರೈತ ವಿರೋಧಿ, ಕಾರ್ಮಿಕ ವಿರೋಧಿ,  ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ಅನೇಕ ದಿನಗಳಿಂದ ಹೋರಾಟ ನಡೆಯುತ್ತಿದೆ ರೈತ ಸಂಘಟನೆಗಳ ವೇದಿಕೆಯಾಗಿರುವ ‘ಸಂಯುಕ್ತ ಕಿಸಾನ್ ಮೋರ್ಚಾ’ ಕರೆಯ ಮೇರೆಗೆ ರೈತ ಮತ್ತು ಕಾರ್ಮಿಕರ ಪರೇಡ್ ನಡೆಸಲಾಗುತ್ತಿದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಕಂಪೆನಿಗಳ ಪರವಾಗಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ.ಹೊಸದಾಗಿ ಜಾರಿಗೊಳಿಸಿರುವ  ಕಾಯ್ದೆಗಳನ್ನು ಕೈಬಿಡಲೇಬೇಕು .

ಎಪಿಎಂಸಿ ಉಳಿಸಬೇಕು. ಅನೇಕ ದಶಕಗಳಿಂದ ಅರ್ಜೀ ಹಾಕಿ ಕಾಯುತ್ತಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಾಗೂ ತಲೆ ಮೇಲೊಂದು ಸೂರು ಕಟ್ಟಿಕೊಂಡಿರುವ ಬಡಜನರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು  ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾದ ಅನಿಲ್ ಕುಮಾರ್. ವಿಜಯನರಸಿಂಹ. ಮಂಜುನಾಥ್. ಅಶ್ವಥಪ್ಪ. ಅಂಜಿನಪ್ಪ. ಪಾತಣ್ಣ. ಹನುಮಂತರಾಯಪ್ಪ. ನರಸಪ್ಪ. ಅಂಜಿನಪ್ಪ. ಹಾಗೂ ಇನ್ನೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು

ವರದಿ ಬುಲೆಟ್ ವೀರಸೇನ ಯಾದವ್