images

ಪಾವಗಡ: ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಮೇಲೆ  ಎ.ಸಿ.ಬಿ ದಾಳಿ…!

DISTRICT NEWS ತುಮಕೂರು

ಪಾವಗಡದ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಛೇರಿ ಮೇಲೆ  ಎ.ಸಿ.ಬಿ ದಾಳಿ .   

 ಪಾವಗಡ: ಸರ್ಕಾರವು ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಗೆ ತಂದಿದ್ದು,  ಫಲಾನುಭವಿಗಳಿಗೆ ಯೋಜನೆ ಹಣ ನೀಡಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶಿವಕುಮಾರ್  ಬೇಡಿಕೆ ಇಟ್ಟಿದ್ದು ಇಂದು ಹಣ ನೀಡುವಾಗ ಎಸಿಬಿ ಬಲೆಗೆ    ಬಿದ್ದ ಘಟನೆ ಪಾವಗಡ ಟೌನ್ ನ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ. ತಾಲೂಕಿನ ಕಡಪಲಕೆರೆ ಗ್ರಾಮದ ಪಿ. ಹರೀಶ್ ಎಂಬುವವರು ಅಂತರ್ಜಾತಿ ವಿವಾಹವಾಗಿದ್ದರು. ಇಲಾಖೆ ಪ್ರೋತ್ಸಾಹ ಧನದ ಬಾಂಡ್ ನೀಡಲು 5 ಸಾವಿರ ರೂ ಲಂಚ ನೀಡಬೇಕು ಎಂದು ಪ್ರಥಮ ದರ್ಜೆ ಸಹಾಯಕ ಶಿವಕುಮಾರ್ ಬೇಡಿಕೆ ಇಟ್ಟಿದ್ದರು. ಹರೀಶ್ ಈ ಬಗ್ಗೆ ಬ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದರು.  ಫಲಾನುಭವಿ ಹರೀಶ್ 5 ಸಾವಿರ ಹಣ ನೀಡಲು ಹೋದಾಗ ಕಚೇರಿಯ ಕಂಪ್ಯೂಟರ್ ಆಪರೇಟರ್ ವೇಣು ಅವರಿಗೆ ಲಂಚದ ಹಣ ಸ್ವೀಕರಿಸುವಂತೆ ಶಿವಕುಮಾರ್ ತಿಳಿಸಿದ್ದಾರೆ. ಕಂಪ್ಯೂಟರ್ ಆಪರೇಟರ್ ವೇಣು ಲಂಚದ ಹಣ ಪಡೆಯುವಾಗ ಬ್ರಷ್ಟಾಚಾರ ನಿಗ್ರಹ ಧಳದ ಅಧಿಕಾರಿಗಳು ಧಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಬ್ರಷ್ಟಾಚಾರ ನಿಗ್ರಹ ದಳದ ಡಿವೈ ಎಸ್ ಪಿ ಎಸ್. ಮಲ್ಲಿಕಾರ್ಜುನ ಚುಕ್ಕಿ ನೇತೃತ್ವದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ಎನ್ ವೀರೇಂದ್ರ, ಎಸ್ ವಿಜಯಲಕ್ಷ್ಮಿ, ಸಿಬ್ಬಂದಿ ಡಿ.ನರಸಿಂಹರಾಜು, ಕೆ.ಪಿ.ಶಿವಣ್ಣ, ಎಂ.ಚಂದ್ರಶೇಖರ್, ಎಲ್.ನರಸಿಂಹರಾಜು, ಗಿರೀಶ್ ಕುಮಾರ್, ರಮೇಶ್, ಮಹೇಶ್ ಕುಮಾರ್ ಧಾಳಿಯಲ್ಲಿ ಭಾಗವಹಿಸಿದ್ದಾರೆ.

ವರದಿ: ಶ್ರೀನಿವಾಸುಲು ಎ