ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟ
ದೇವನಹಳ್ಳಿ: ನಗರದ ಅಂಬೇಡ್ಕರ್ ಭವನದ ಆಡಿಟೋರಿಯಂನಲ್ಲಿ ದೇವನಹಳ್ಳಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷರ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಣೆಯನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಮೀಸಲಾತಿಯನ್ನು ನೂತನ ತಂತ್ರಾಂಶದ ಮೂಲಕ ಅಧಿಕೃತವಾಗಿ ಪ್ರಕಟಿಸಲಾಯಿತು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ದೇವನಹಳ್ಳಿ ತಾಲೂಕಿನಲ್ಲಿ ಬರುವ ೨೪ ಗ್ರಾಪಂಗಳಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಗ್ರಾಪಂನ ಎಲ್ಲಾ ಸದಸ್ಯರು ಶಾಂತಿಯುತವಾಗಿ ಕುಳಿತುಕೊಂಡು ಪ್ರಕ್ರಿಯೆಯ ಎಲ್ಲಾ ಅಂಶಗಳನ್ನು ತಿಳಿಸಿಕೊಡಲಾಯಿತು. ೧೯೯೩ ರಿಂದ ೨೦೧೫ರವರೆಗೆ ಇರುವ ಮೀಸಲಾತಿಗಳನ್ನು ಎಲ್ಲಾ ಕಡೆಗಳಲ್ಲಿ ತಿಳಿಸಿಕೊಡಲಾಗಿತ್ತು. ಚುನಾವಣಾ ಆಯೋಗ ಸಿದ್ಧ ಪಡಿಸಿದ ತಂತ್ರಾಂಶವನ್ನು ಬಳಸಿಕೊಂಡು ಮೀಸಲಾತಿ ಪ್ರಕ್ರಿಯೆಯನ್ನು ನಡೆಸಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಸುಸ್ಸಜ್ಜಿತವಾಗಿ ನಡೆಸಿಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ೭ ದಿನದೊಳಗಾಗಿ ಚುನಾವಣಾಧಿಕಾರಿಗಳನ್ನು ನೇಮಿಸಿ, ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆಯ ದಿನಾಂಕವನ್ನು ನಿಗಧಿಪಡಿಸಿಕೊಡಲಾಗುತ್ತದೆ ಎಂದು ಹೇಳಿದರು.
ಈ ವೇಳೆಯಲ್ಲಿ ಅಪರಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್, ತಹಶೀಲ್ದಾರ್ ಅನಿಲ್ ಕುಮಾರ್ ಅರೋಲಿಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಡಿ.ವಸಂತಕುಮಾರ್, ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ತಹಶೀಲ್ದಾರ್ ರಾಜೀವಲೋಚನಾ, ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಿರಸ್ಥೆದಾರ್ ಪ್ರಕಾಶ್, ತಾಲೂಕು ಚುನಾವಣಾ ಶಿರಸ್ಥೆದಾರ್ ಮಂಜುನಾಥ್, ಮತ್ತಿತರರು ಇದ್ದರು.
೨೪ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮೀಸಲಾತಿ ಈ ರೀತಿ ಇದೆ.
ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ
೧. ವಿಶ್ವನಾಥಪುರ ಗ್ರಾಪಂಗೆ ಹಿಂದುಳಿದ ವರ್ಗ-ಎ (ಮಹಿಳೆ) ಸಾಮಾನ್ಯ
೨. ಗೊಡ್ಲುಮುದ್ದೇನಹಳ್ಳಿ ಗ್ರಾಪಂಗೆ ಹಿಂದುಳಿದ ವರ್ಗ-ಎ (ಮಹಿಳೆ) ಸಾಮಾನ್ಯ
೩. ಚನ್ನರಾಯಪಟ್ಟಣ ಗ್ರಾಪಂಗೆ ಹಿಂದುಳಿದ ವರ್ಗ-ಬಿ ಹಿಂದುಳಿದ ವರ್ಗ-ಎ (ಮಹಿಳೆ)
೪. ಕನ್ನಮಂಗಲ ಗ್ರಾಪಂಗೆ ಸಾಮಾನ್ಯ ಹಿಂದುಳಿದ ವರ್ಗ-ಬಿ
೫. ವೆಂಕಟಗಿರಿಕೋಟೆ ಗ್ರಾಪಂಗೆ ಸಾಮಾನ್ಯ ಪರಿಶಿಷ್ಟ ಜಾತಿ (ಮಹಿಳೆ)
೬. ಕೋರಮಂಗಲ ಗ್ರಾಪಂಗೆ ಸಾಮಾನ್ಯ ಪರಿಶಿಷ್ಟ ಪಂಗಡ (ಮಹಿಳೆ)
೭. ಆವತಿ ಗ್ರಾಪಂಗೆ ಸಾಮಾನ್ಯ ಪರಿಶಿಷ್ಟ ಜಾತಿ (ಮಹಿಳೆ)
೮. ಯಲಿಯೂರು ಗ್ರಾಪಂಗೆ ಸಾಮಾನ್ಯ ಸಾಮಾನ್ಯ ಮಹಿಳೆ
೯. ನಲ್ಲೂರು ಗ್ರಾಪಂಗೆ ಸಾಮಾನ್ಯ ಪರಿಶಿಷ್ಟ ಪಂಗಳ (ಮಹಿಳೆ)
೧೦. ಐಬಸಾಪುರ ಗ್ರಾಪಂಗೆ ಸಾಮಾನ್ಯ ಪರಿಶಿಷ್ಟ ಜಾತಿ (ಮಹಿಳೆ)
೧೧. ಕಾರಹಳ್ಳಿ ಗ್ರಾಪಂಗೆ ಸಾಮಾನ್ಯ(ಮಹಿಳೆ) ಹಿಂದುಳಿದ ವರ್ಗ-ಎ (ಮಹಿಳೆ)
೧೨. ಬಿದಲೂರು ಗ್ರಾಪಂಗೆ ಸಾಮಾನ್ಯ (ಮಹಿಳೆ) ಪರಿಶಿಷ್ಟ ಪಂಗಡ
೧೩. ಬಿಜ್ಜವಾರ ಗ್ರಾಪಂಗೆ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ
೧೪. ಹಾರೋಹಳ್ಳಿ ಗ್ರಾಪಂಗೆ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ
೧೫. ಗಂಗವಾರ ಚೌಡಪ್ಪನಹಳ್ಳಿ ಗ್ರಾಪಂಗೆ ಸಾಮಾನ್ಯ (ಮಹಿಳೆ) ಪರಿಶಿಷ್ಟ ಜಾತಿ
೧೬. ಕುಂದಾಣ ಗ್ರಾಪಂಗೆ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)
೧೭. ಬೆಟ್ಟಕೋಟೆ ಗ್ರಾಪಂಗೆ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)
೧೮. ಅಣ್ಣೇಶ್ವರ ಗ್ರಾಪಂಗೆ ಪರಿಶಿಷ್ಟ ಜಾತಿ ಸಾಮಾನ್ಯ (ಮಹಿಳೆ)
೧೯. ಕೊಯಿರ ಗ್ರಾಪಂಗೆ ಪರಿಶಿಷ್ಟ ಜಾತಿ (ಮಹಿಳೆ) ಸಾಮಾನ್ಯ
೨೦. ಚನ್ನಹಳ್ಳಿ ಗ್ರಾಪಂಗೆ ಪರಿಶಿಷ್ಟ ಜಾತಿ (ಮಹಿಳೆ) ಸಾಮಾನ್ಯ
೨೧. ಬೂದಿಗೆರೆ ಗ್ರಾಪಂಗೆ ಪರಿಶಿಷ್ಟ ಜಾತಿ (ಮಹಿಳೆ) ಸಾಮಾನ್ಯ
೨೨. ಆಲೂರುದುದ್ದನಹಳ್ಳಿ ಗ್ರಾಪಂಗೆ ಪರಿಶಿಷ್ಟ ಪಂಗಡ ಸಾಮಾನ್ಯ (ಮಹಿಳೆ)
೨೩. ಜಾಲಿಗೆ ಗ್ರಾಪಂಗೆ ಪರಿಶಿಷ್ಟ ಪಂಗಡ (ಮಹಿಳೆ) ಸಾಮಾನ್ಯ
೨೪. ಮಂಡಿಬೆಲೆ ಗ್ರಾಪಂಗೆ ಪರಿಶಿಷ್ಟ ಪಂಗಡ (ಮಹಿಳೆ) ಸಾಮಾನ್ಯ
ವರದಿ: ಲೋಕೇಶ್ -ದೇವನಹಳ್ಳಿ