IMG 20220401 171552 scaled

ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ಬೆಲೆ ಏರಿಕೆಯ ಬಿಸಿ..

DISTRICT NEWS ತುಮಕೂರು

ಯುಗಾದಿ ಹಬ್ಬದ ಸಂಭ್ರಮಾಚರಣೆಗೆ ಬೆಲೆ ಏರಿಕೆಯ ಬಿಸಿ..
ಪಾವಗಡ..ಕಳೆದೆರಡು ವರ್ಷಗಳಿಂದ ಕರೋನೋ ದಿಂದಾಗಿ ಚಂದ್ರಮಾನ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ ಈಗ ಕರೋನಾ ನಿಯಂತ್ರಣದಿಂದಾಗಿ, ಜನರು ಯುಗಾದಿ ಹಬ್ಬದ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಯುಗಾದಿಯ ದಿನದಂದು ಬಹಳ ವಿಜೃಂಭಣೆಯಿಂದ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಯುಗಾದಿಯ ದಿನದಂದು ಜನರು ತಮ್ಮ ಮನೆ ಮತ್ತು ಹತ್ತಿರದ ಪ್ರದೇಶವನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ತಮ್ಮ ಮನೆಯ ಪ್ರವೇಶದ್ವಾರವನ್ನು ಮಾವಿನ ಎಲೆಗಳಿಂದ ಅಲಂಕರಿಸುತ್ತಾರೆ. ಕುಟುಂಬದ ಸದಸ್ಯರು ಹೊಸ ಬಟ್ಟೆಯನ್ನು ಧರಿಸಿ ಬೆವು – ಬೆಲ್ಲವನ್ನು ಸವಿಯುತ್ತಾರೆ, ಯುಗಾದಿ ಹಬ್ಬಕ್ಕಾಗಿ  ಜನತೆ ಹೂವು , ಹಣ್ಣು, ನೂತನ ವಸ್ತ್ರಗಳನ್ನು ಕೊಂಡು ಕೊಳ್ಳುವುದರಲ್ಲಿ ಮಗ್ನರಾಗಿದ್ದರು., ಹಬ್ಬಕ್ಕೆ ಬೇಕಾದ ವಸ್ತುಗಳಾದ ಹೂವು, ಹಣ್ಣು, ಗಳ ಬೆಲೆಗಳು ಗಗನಕ್ಕೇರಿದ್ದು ಜನರ ಜೇಬಿಗೆ ಕತ್ತರಿ ಬಿದ್ದಂತಾಗಿತ್ತು, ಹೊಸ  ಬಟ್ಟೆಗಳನ್ನು  ಖರೀದಿಸುವಲ್ಲಿ ಜನರ ಮಗ್ನರಾಗಿದ್ದರು. ಅಂಗಡಿಗಳು ಗ್ರಾಹಕರಿಂದ ತುಂಬಿತ್ತು.  ಪಟ್ಟಣದ ರಸ್ತೆಗಳು ಕಿಕ್ಕಿರಿದಿದ್ದವು.ಹೂವಿನ ಬೆಲೆ ತಾರಕಕ್ಕೇರಿದೆ. ಚೆಂಡು ಹೂ ಒಂದು ಬಾರಿಗೆ 120 ರೂ, ಸೇವಂತಿಗೆ 140 ರೂ, ಕನಕಾಂಬರ, ಮಲ್ಲಿಗೆ 280 ರಿಂದ 300 ರೂ ಗೆ ಮಾರಾಟವಾಯಿತು. ಹಬ್ಬದ ಪ್ರಯುಕ್ತ ಕೆಲ ಹೊಸ ಅಂಗಡಿ ಮಳಿಗೆಗಳಲ್ಲಿ  ವಿಶೇಷ ರಿಯಾಯಿತಿಯನ್ನೂ ನೀಡಲಾಗಿತ್ತು.ಹಬ್ಬಕ್ಕೆ ಮಾವಿನ ತೋರಣ ಕಟ್ಟಿ, ಬೇವು ಬೆಲ್ಲವನ್ನು  ನೈವೇದ್ಯ ಮಾಡಿ ಹಂಚುವ ವಾಡಿಕೆ ಇರುವುದರಿಂದ ಮಾವಿನ ತೋಟಗಳಿಗೆ ಜನರು ಹೋಗಿ ಸಂಜೆಯಿಂದಲೇ ಮಾವಿನಎಲೆ, ಬೇವಿನ ಹೂವು ಬೇವಿನ ಎಲೆಗಳನ್ನು ಕಿತ್ತು ತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. . ನೂತನ ಪಂಚಾಂಗ ಕೊಂಡು ತಂದು ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಪುಸ್ತಕ ಮಳಿಗೆಗಳಲ್ಲಿ ಬಗೆ ಬಗೆಯ ಪಂಚಾಂಗಗಳನ್ನು ಜನತೆ ಕೊಂಡರು.ದೇಗುಲಗಳಲ್ಲಿ ಸಿದ್ದತೆ: ‘ಯುಗಾದಿಯು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷದ ಆರಂಭವಾಗಿದ್ದು,  ಧಾರ್ಮಿಕ ಹಬ್ಬವಾಗಿ ಆಚರಿಸಬೇಕು ಎಂದು ಮುಜರಾಯಿ ಇಲಾಖೆ ಸೂಚಿಸಿದೆ. ಅಲ್ಲದೇ, ಭಕ್ತರಿಗೆ ಬೇವು ಬೆಲ್ಲವನ್ನು ಪ್ರಸಾದ ರೂಪದಲ್ಲಿ ವಿತರಿಸಬೇಕು ಎಂಬ ಸೂಚನೆಯೂ ಇದೆ. ಈ ನಿಟ್ಟಿನಲ್ಲಿ ಪಟ್ಟಣದ ಶ್ರೀ ಶನೇಶ್ವರ ದೇವಾಲಯ, ಆಂಜನೇಯ ದೇವಾಲಯ, ಕನಕ ಪರಮೇಶ್ವರ ಸ್ವಾಮಿ ದೇವಾಲಯ, ಹಾಗೂ ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲ ಸೇರಿದಂತೆ ಪ್ರಮುಖ ದೇಗುಲಗಳಲ್ಲಿ ಶುಕ್ರವಾರದಿಂದಲೇ ಸಿದ್ದತೆ ನಡೆಸಲಾಗುತ್ತಿತ್ತು. ದೇಗುಲಗಳನ್ನು ಅಲಂಕರಿಸಿ, ವಿಶೇಷ ಪೂಜೆಗೆ ತಯಾರಿ ನಡೆಸಲಾಯಿತು. ಯುಗಾದಿ ಹಬ್ಬದ ಪ್ರಯುಕ್ತ ಸರ್ಕಾರಿ ಬಸ್ ಗಳ ಸಂಖ್ಯೆ ಹೆಚ್ಚಾಗಿದ್ದು ಬೆಂಗಳೂರು, ತುಮಕೂರು ಸೇರಿದಂತೆ ಕೆಲಸಗಳಿಗಾಗಿ ಬೇರೆಡೆಗೆ ವಲಸೆ ಹೋಗಿದ್ದ ಜನತೆ ಪಟ್ಟಣ, ಗ್ರಾಮಗಳಿಗೆ ಹಿಂದಿರುಗಿದ್ದರಿಂದ ಬಸ್ ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದುದು ಸಾಮಾನ್ಯವಾಗಿತ್ತು, ಕೆಲವರು ಬಸ್ಗಳಲ್ಲಿ ಹೆಚ್ಚಿನ ರಶ್ ಇದ್ದುದರಿಂದ ತಮ್ಮ ಸ್ವಂತ ದ್ವಿಚಕ್ರ ವಾಹನದಲ್ಲಿ ಊರುಗಳಿಗೆ ಹೋಗುತ್ತಿರುವುದು ಸಾಮಾನ್ಯವಾಗಿತ್ತು, ಜೊತೆಗೆ ಖಾಸಗಿ ವಾಹನಗಳ ಓಡಾಟವೂ ಹೆಚ್ಚಾಗಿತ್ತು.

ವರದಿ: ಶ್ರೀನಿವಾಸುಲು ಎ