ಸಂಸ್ಕಾರ ಶಕ್ತಿಗೆ ಮಠಗಳು ಅಗತ್ಯ
ವೈ.ಎನ್.ಹೊಸಕೋಟೆ : ಮಾನವನಲ್ಲಿ ಸಂಸ್ಕಾರ ಶಕ್ತಿ ವರ್ಧನೆಗೆ ಮಠಗಳು ಅಗತ್ಯ ಎಂದು ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಐ.ಎ.ನಾರಾಯಣಪ್ಪ ತಿಳಿಸಿದರು.
ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಶುಕ್ರವಾರದಂದು ಶಾಲೆ ಮತ್ತು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮಿಗಳ 115 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಸಿದ್ದಗಂಗಾ ಮಠವು ಲಕ್ಷಾಂತರ ಜನರಿಗೆ ಅನ್ನ ವಿದ್ಯೆ ಮತ್ತು ಸಂಸ್ಕಾರವನ್ನು ಕೊಟ್ಟ ಕೇಂದ್ರ. ಇಲ್ಲಿ ಬೆಳೆದ ಪ್ರತಿಯೊಬ್ಬರಲ್ಲಿ ಸಂಸ್ಕಾರದ ಶ್ರೀಮಂತಿಕೆ ಇದೆ. ಅದಕ್ಕೆ ಪ್ರೇರಣಾ ಶಕ್ತಿ ಪರಮಪೂಜ್ಯರಾದ ಶ್ರೀ ಶಿವಕುಮಾರ ಸ್ವಾಮಿಗಳು. ಅವರ ನಡೆ ನುಡಿ ಮಾರ್ಗದರ್ಶನ ಇಡೀ ಮಾನವ ಸಮಾಜದ ಪ್ರಗತಿಯ ದಾರಿದೀಪವಾಗಿದೆ. ಶ್ರೀ ಸ್ವಾಮಿಗಳ ಸಂಕಲ್ಪಶಕ್ತಿಯಿಂದ ಮಠವು ಹೆಮ್ಮರವಾಗಿ ಬೆಳೆದು ಬೆಳಕಾಗಿದೆ. ಅಸಂಖ್ಯಾತ ವಿದ್ಯಾರ್ಥಿಗಳು ಇಲ್ಲಿ ಕಲಿತು ಭವಿಷ್ಯ ರೂಪಿಸಿಕೊಂಡಿದ್ದಾರೆ. ಪೂಜ್ಯರ ಈ ಋಣ ತೀರಿಸುವುದು ಸಾಧ್ಯವಿಲ್ಲದ ಮಾತು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಹೊ.ಮ.ನಾಗರಾಜು, ದೈಹಿಕ ಶಿಕ್ಷಕ ಫಕೃದ್ಧೀನ್ ಮಾತನಾಡಿದರು.
ಮುಖಂಡರಾದ ಬಿ.ಹೊಸಹಳ್ಳಿ ನಾಗರಾಜು, ಶಿಕ್ಷಕರಾದ ಗಿರಿಜಮ್ಮ, ಶ್ರೀದೇವಮ್ಮ, ನಿರ್ಮಲ, ಚಂದ್ರಕಳಾ, ಹೇಮಲತ, ಮಂಜುನಾಥ, ಎಲ್.ರಾಮಲಿಂಗಯ್ಯ ಇದ್ದರು.
ವರದಿ: ಸತೀಶ್