ಪಾವಗಡ: – ಹೆಲ್ಪ್ ಸೊಸೈಟಿ ವತಿಯಿಂದ ಪಾವಗಡ ತಾಲ್ಲೂಕಿನ ಅರ್.ಹೊಸಕೋಟೆ ಗ್ರಾಮದಲ್ಲಿ *ರಾಷ್ಟ್ರೀಯ* ಹೆಣ್ಣು ಮಗು ದಿನಾಚರಣೆ* ಯನ್ನು ಆಚರಿಸಲಾಯಿತು.
ಹೆಲ್ಪ್ ಸೊಸೈಟಿ ಅಧ್ಯಕ್ಷರಾದ *ಮಾನಂ* *ಶಶಿಕಿರಣ್* ಮಾತನಾಡಿ ಹೆಣ್ಣುಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಭಾರತ ದೇಶದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 2008ರಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಚಿಂತನೆ ಮಾಡಿತು. ‘ನಾರಿ ಮುನಿದರೆ ಮಾರಿ’ ”ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ “ಎಂಬ ನಮ್ಮ ಪಾರಂಪರಿಕ ಜ್ಞಾನ ನಮಗೆಲ್ಲರಿಗೂ ತಿಳಿದದ್ದೇ ಆಗಿದೆ, ಈ ಮಾತನ್ನು ಅನುಷ್ಠಾನಕ್ಕೆ ತರುವ ಅನಿವಾರ್ಯತೆ ನಮ್ಮ ದೇಶದಲ್ಲಿ ಹೆಚ್ಚಾಗಿದೆ.
ಹೆಣ್ಣು ಮಗುವಿನ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕು ಹೆಣ್ಣು ಭ್ರೂಣಹತ್ಯೆ ವರದಕ್ಷಿಣೆ ಅತ್ಯಾಚಾರ ನಡೆಯುತ್ತಿರುವುದು ವಿಷಾದದ ಸಂಗತಿ.ಹೆಣ್ಣು ಮಗುವಿನ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಿ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ನಾರಾಯಣಪ್ಪ ಜಗದೀಶ್ ಸಾಯಿರೆಡ್ಡಿ ಸಾಗರ್ ಶಿವ ಶಂಕರ ನಾಗೇಶ್ ರವಿ ಸುಬ್ಬರಾಯಪ್ಪ ರಘು ನಂದೀಶ್ ಸುಹಾಸ್ r ಹೊಸಕೋಟೆ ಗ್ರಾಮಸ್ಥರು ಇದ್ದರು