ಬೆಂಗಳೂರು ಏ ೨೫ :- ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೆ, ಇಂದು ಬಿಡುಗಡೆಯಾದ ಹೆಲ್ತ್ ಬುಲೆಟಿಲ್ ಪ್ರಕಾರ ರಾಜ್ಯದಲ್ಲಿ ಒಟ್ಟು೫೦೦ ಜನರಿಗೆ ಸೋಂಕು ತಗಲಿದೆ ಇಂದು ೨೬ ಜನರಿಗೆ ಸೋಂಕು ದೃಢಪಟ್ಟಿದೆ.
ತಮಿಳುನಾಡು,ಮಹಾರಾಷ್ಟ್ರದಲ್ಲಿ ಮಾದ್ಯಮದಲ್ಲಿ ಕೆಲಸ ಮಾಡುವವರಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ೨೩ ನೇ ತಾರೀಖಿನಿಂದ ರಾಜ್ಯಾಧ್ಯಂತ ಪರೀಕ್ಷೆ ಆರಂಭವಾಗಿದ್ದು ಬೆಂಗಳೂರಿನಲ್ಲಿ ಪ್ರಿಂಟ್ ಮತ್ತು ಎಲೆಕ್ಟಾನಿಕ್ ಮೀಡಿಯಾ ಸೇರಿ ೨೯೭ಜನರಿಗೆ ಟೆಸ್ಟ್ ಮಾಡಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ.
.ರಾಜ್ಯ ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮೆನ್ ಗೆ ಸೋಂಕಿರುವುದು ಧೃಢ ಪಟ್ಟಿದೆ. ಕರ್ನಾಟಕದಲ್ಲಿ ಇಲ್ಲಿಯವರೆಗೂ ಪತ್ರಕರ್ತರಿಗೆ ಸೋಂಕು ತಗುಲಿರಲಿಲ್ಲ. ಈಗ ಅವರ ಕುಟುಂಬ ಮತ್ತು ಅವರ ಜೊತೆ ವರದಿಗಾರಿಕೆ ತೆರಳಿದವರಿಗೆ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.
ಪಾದರಾಯಪುರ ಗಲಭೆ ಸೋಂಕಿಗೆ ಕಾರಣ…?
ಸೋಂಕು ಪೀಡಿತ ಕ್ಯಾಮರಾಮೆನ್ ಕೆಲದಿನಗಳ ಹಿಂದೆ ರೆಡ್ ಜೋನ್ ನಲ್ಲಿದ್ದ ಪ್ರದೇಶಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿದ್ದ ಎನ್ನಲಾಗಿದೆ.ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಗುರುತಿಸಾಗುತ್ತಿದೆ.
ಖಾಸಗಿ ಮಾದ್ಯಮದವರು ರೆಡ್ ಜೋನ್ ನಲ್ಲಿ ವರದಿಗಾಗಿ ಕಳುಹಿಸುವಾಗ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಳ್ಳಬೇಕಿದೆ.