ಪಾವಗಡ : ಕಲ್ಪತರು ನಾಡು ತುಮಕೂರು ಜಿಲ್ಲೆಯಾದ್ಯಂತ ಕರೋನ ವೈರಸ್ ಸೋಂಕಿತರ ಸಂಖ್ಯೆ ನಾಗಾಲೋಟದಿಂದ ಮುಂದುವರಿದಿದೆ. ಇದಕ್ಕೆ ಪಾವಗಡ ತಾಲ್ಲೂಕು ಸಹ ಹೊರತಾಗಿಲ್ಲ. ತಾಲೂಕಿನಲ್ಲಿ ಸಕ್ರಿಯ ಸೋಂಕಿತರ ಪ್ರಕರಣಗಳ ಸಂಖ್ಯೆ 1,090 ರ ಸಂಖ್ಯೆ ದಾಟಿ ಮುಂದೆ ಸಾಗುತ್ತಿದೆ.
ತಾಲೂಕಿನ ಆಶಾಕಿರಣ ಹಾಗೂ ನೊಂದವರ ಬಾಳಿನ ದಾರಿ ದೀಪವಾಗಿರುವ ಪಾವಗಡ ತಾಲ್ಲೂಕು ಸೇವಾ ಅಭಿವೃದ್ಧಿ ಟ್ರಸ್ಟ್ ಸಂಸ್ಥಾಪಕರು ಹಾಗೂ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ರಾದ ಎಸ್ ಅರ್ ರಾಘವೇಂದ್ರ ರವರು ಭಾನುವಾರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕೊರೋನ ಹಾಟ್ ಸ್ಪಾಟ್ ಗಳಿಗೆ ಸ್ಯಾನಿಟೈಸಾರ್ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡುತ್ತಾ, ಕೊರೋನ ವೈರಸ್ ಎನ್ನುವ ಸಾಂಕ್ರಾಮಿಕ ರೋಗವು ಈಗಾಗಲೇ ಹಲವು ಹಳ್ಳಿಗಳಿಗೆ ತಲುಪಿರುವುದರಿಂದ ಇದು ಸಮುದಾಯದ ಮಟ್ಟಕ್ಕೆ ತಲುಪುವ ಮುಂಚೆ ಪ್ರತಿ ಗ್ರಾಮಗಳಿಗೂ ತಮಿಳುನಾಡಿನ ಮಾದರಿಯಂತೆ ಸ್ಯಾನಿಟೈಸಾರ್ ಮಾಡುವುದು ಅನಿವಾರ್ಯವಾಗಿದೆ.ಈ ನಿಟ್ಟಿನಲ್ಲಿ ಇಂದು ಪಟ್ಟಣದ ಪೊಲೀಸ್ ಸ್ಟೇಷನ್ ತಾಲೂಕು ಪಂಚಾಯಿತಿ,ತಾಲ್ಲೂಕು ಪಂಚಾಯತಿ ಹಾಗೂ ಪ್ರಮುಖ ಸಾರ್ವಜನಿಕ ಕಛೇರಿಗಳಿಗೆ ಸ್ಯಾನಿಟರಿ ಮಾಡಲಾಗುವುದು. ಇದೇ ರೀತಿ ಪ್ರತಿ ಹಳ್ಳಿಗಳಿಗೂ ಡ್ರೋನ್ ಮುಖಾಂತರ ಸ್ಯಾನಿಟೈಸಾರ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೊರೋನ ವೈರಸ್ ದಾಳಿಗೆ ತತ್ತರಿಸಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಕಾರು ಚಾಲಕರಿಗೂ ಮತ್ತು ಅನುದಾನರಹಿತ ಶಾಲಾ ಶಿಕ್ಷಕರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಹಾಗೂ ಮಾಸ್ಕ್ ಗಳನ್ನು ವಿತರಣೆ ಮಾಡಲಾಯಿತು. ತಾಲೂಕಿನ ಸರಕಾರಿ ಸಾರ್ವಜನಿಕರ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಕಿರಣ್ ರವರ ಮನವಿ ಮೇರೆಗೆ 15 ಬೆಡ್ ಮತ್ತು 15 ಕಾರ್ಟೂನುಗಳನ್ನು ಆಸ್ಪತ್ರೆಗೆ ನೀಡಿ ಕೊರೋನ ಸೋಂಕಿತರಿಗೆ ನೆರವಾಗಿದ್ದಾರೆ.
ಈ ಸಂದರ್ಭದಲ್ಲಿ ಪಾವಗಡ ತಾಲೂಕು ಸೇವಾ ಅಭಿವೃದ್ಧಿ ಟ್ರಸ್ಟಿನ ಅಧ್ಯಕ್ಷರು ಬಿ.ಕೆ ಮುನಿಸ್ವಾಮಿ, ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ, ಮುಖಂಡರಾದ ಪ್ರಮೋದ್ ಕುಮಾರ್ ಪುರಸಭೆ ಸಿಬ್ಬಂದಿ ವರ್ಗದವರು ಶಂಶುದ್ದಿನ್. ಚಾಲಕರ ಯೂನಿಯನ್ ಅಧ್ಯಕ್ಷರಾದ ಶಿವಪ್ಪನಾಯಕ, ಗೌರವಾಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ರಾಮು, ಕಾರ್ಯದರ್ಶಿ ನರೇಶ್, ಸದಸ್ಯ ಮೂರ್ತಿ, ನಮ್ಮ ಹಕ್ಕು
ಗಿರೀಶ್, ರಂಗದಾಮಣ್ಣ , ಶ್ರೀಧರ್ ಗುಪ್ತ , ಗೌಡ ಹರಿನಾಥ್, ಮಧುಸೂದನ್ ಪತ್ರಕರ್ತರ ಸತ್ಯ ಲೋಕೇಶ್ ಬುಲೆಟ್ ವೀರಸೇನಾ ಯಾದವ್ . ಹಾಗೂ ಇನ್ನೂ ಅನೇಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಬುಲೆಟ್ ವೀರಸೇನಯಾದವ್