ಬೆಂಗಳೂರು ಏ26:- ಕೊರೋನಾ ಸೋಂಕು ದೇಶದಲ್ಲಿ ತೀವ್ರವಾಗಿ ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಮೇ 3 ರಂದು ಕೊನೆಯಾಗುತ್ತಿರು ಲಾಕ್ ಡೌನ್ ಕೆಲ ರಾಜ್ಯ ಗಳು ವಿಸ್ತರಿಸಿವೆ.
ದೆಹಲಿ,ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್,ಓಡಿಶಾ,ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರಗಳು ಮೇ16 ವರೆಗೂ ವಿಸ್ತರಿಸಿವೆ.
ಮೇ 3ಕ್ಕೆ ಲಾಕ್ ಡೌನ್ 2 ಕೊನೆಯಾಗುತ್ತಿರುವ ಹಿನ್ನೆಲೆ ಯಲ್ಲಿ ನಾಳೆ ಪ್ರಧಾನಿ ಮೋದಿ ಯವರು ದೇಶದ ಎಲ್ಲಾ ಮುಖ್ಯಮಂತ್ರಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಕೇಂದ್ರದ ನಿರ್ಧಾರಕ್ಕಾಗಿ ಕಾಯುತ್ತಿರುವ ರಾಜ್ಯಗಳು
ಕರ್ನಾಟಕ, ತಮಿಳುನಾಡು, ಆಂದ್ರ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳು ನಾಳಿ ಕೇಂದ್ರದ ನಿರ್ಧಾರಕ್ಕೆ ಕಾಯುತ್ತಿವೆ.
ರೆಡ್ ಜೋನ್ ಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ ಎನ್ನಲಾಗುತ್ತಿದೆ. ಎಲ್ಲರ ಚಿತ್ತ ನಾಳಿನ ಮೋದಿ ಮಾತಿನತ್ತ ಇದೆ.