74ನೇ ಸ್ವಾತಂತ್ರ್ಯ ದಿನ – ಕೆಂಪುಕೋಟೆಯ ವೇದಿಕೆಯಿಂದ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಷಣ ಭಾಷಣದ ಮುಖ್ಯಾಂಶಗಳು: ನನ್ನ ಪ್ರೀತಿಯ ದೇಶವಾಸಿಗಳೇ, ಈ ಮಹೋನ್ನತ ಸಂದರ್ಭದಲ್ಲಿ, ನಿಮ್ಮಲ್ಲರಿಗೂ ಶುಭಾಶಯಗಳು ಮತ್ತು ಅಭಿನಂದನೆಗಳು. ಕೊರೊನಾದ ಈ ಅಸಾಮಾನ್ಯವಾದ ಸಮಯದಲ್ಲಿ, ಕೊರೊನಾ ಯೋಧರು “ಸೇವಾ ಪರಮೋ ಧರ್ಮ’ ಎಂಬ ಮಂತ್ರದೊಂದಿಗೆ ಜೀವಿಸುತ್ತಿದ್ದಾರೆ. ನಮ್ಮ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಂಬುಲೆನ್ಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಯಕರ್ತರು, ಪೊಲೀಸರು, ಸೇವಾ ಸಿಬ್ಬಂದಿ ಮತ್ತು ಹಲವು ಜನರು ದಿನವಿಡೀ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪ್ರಾಕೃತಿಕ ವಿಪತ್ತುಗಳಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಆಗಿರುವ ಪ್ರಾಣಹಾನಿ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, ಅಗತ್ಯವಿರುವ ಈ ಸಮಯದಲ್ಲಿ ದೇಶವಾಸಿಗಳಿಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದರು. ಭಾರತದ ಸ್ವಾತಂತ್ರ್ಯ ಹೋರಾಟ ಇಡೀ ಜಗತ್ತಿಗೆ ಸ್ಫೂರ್ತಿ ನೀಡಿದೆ. ವಿಸ್ತರಣಾವಾದದ ಕಲ್ಪನೆಯು ಕೆಲವು ದೇಶಗಳನ್ನು ಗುಲಾಮರನ್ನಾಗಿ ಮಾಡಿತು. ಭೀಕರ ಯುದ್ಧಗಳ ನಡುವೆಯೂ ಭಾರತ ತನ್ನ ಸ್ವಾತಂತ್ರ್ಯ ಚಳವಳಿಯನ್ನು ಕ್ಷೀಣಿಸಲು ಬಿಡಲಿಲ್ಲ. ಕೋವಿಡ್ ಸಾಂಕ್ರಾಮಿಕದ ನಡುವೆಯೂ, 130 ಕೋಟಿ ಭಾರತೀಯರು ಸ್ವಾವಲಂಬಿಗಳಾಗಬೇಕೆಂಬ ಸಂಕಲ್ಪವನ್ನು ಕೈಗೊಂಡರು, ಮತ್ತು ‘ಆತ್ಮನಿರ್ಭರ ಭಾರತ್’ ಎಂಬುದು ಭಾರತದ ಮನಸ್ಸಿನಲ್ಲಿ ಮೂಡಿದೆ. ಈ ಕನಸು ಸಂಕಲ್ಪವಾಗಿ ಬದಲಾಗುತ್ತಿದೆ. 130 ಕೋಟಿ ಭಾರತೀಯರಿಗೆ ಆತ್ಮನಿರ್ಭರ ಭಾರತ್ ಇಂದು ‘ಮಂತ್ರ’ವಾಗಿ ಮಾರ್ಪಟ್ಟಿದೆ. ನನ್ನ ದೇಶವಾಸಿಗಳ ಸಾಮರ್ಥ್ಯ, ವಿಶ್ವಾಸ ಮತ್ತು ದಕ್ಷತೆಯ ಬಗ್ಗೆ ನನಗೆ ವಿಶ್ವಾಸವಿದೆ. ಒಮ್ಮೆ ನಾವು ಏನನ್ನಾದರೂ ಮಾಡಲು ನಿರ್ಧರಿಸಿದರೆ, ನಾವು ಆ ಗುರಿಯನ್ನು ಸಾಧಿಸುವವರೆಗೆ ವಿರಮಿಸುವುದಿಲ್ಲ. ಇಂದು, ಇಡೀ ಜಗತ್ತು ಪರಸ್ಪರ ಸಂಪರ್ಕಿತವಾಗಿದೆ ಮತ್ತು ಪರಸ್ಪರ ಅವಲಂಬಿತವೂ ಆಗಿದೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸುವ ಸಮಯ ಇದಾಗಿದೆ. ಇದಕ್ಕಾಗಿ ಭಾರತ ಸ್ವಾವಲಂಬಿಯಾಗಬೇಕು. ಕೃಷಿ, ಬಾಹ್ಯಾಕಾಶದಿಂದ ಆರೋಗ್ಯ ಆರೈಕೆಯವರೆಗೆ ಭಾರತವು ಸ್ವಾವಲಂಬಿ ಭಾರತ ನಿರ್ಮಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸುವಂತಹ ಕ್ರಮಗಳು ನಮ್ಮ ಯುವಕರಿಗೆ ಅನೇಕ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಮತ್ತು ಅವರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಹೆಚ್ಚಿನ ಅವಕಾಶಗಳನ್ನು ಒದಗಿಸುತ್ತದೆ ಎಂಬ ವಿಶ್ವಾಸ ನನಗಿದೆ. ಕೆಲವೇ ತಿಂಗಳುಗಳ ಹಿಂದೆ ನಾವು ಎನ್ -95 ಮಾಸ್ಕ್ ಗಳು, ಪಿಪಿಇ ಕಿಟ್ ಗಳು ಮತ್ತು ವೆಂಟಿಲೇಟರ್ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಈಗ ನಾವು ಸಾಂಕ್ರಾಮಿಕದ ಸಮಯದಲ್ಲಿ ಎನ್.05 ಮಾಸ್ಕ್ ಗಳು, ಪಿಪಿಇ ಕಿಟ್ ಗಳು ಮತ್ತು ವೆಂಟಿಲೇಟರ್ ಗಳನ್ನು ತಯಾರಿಸುವುದಷ್ಟೇ ಅಲ್ಲ ಅದನ್ನು ವಿಶ್ವಾದ್ಯಂತ ರಫ್ತು ಸಹ ಮಾಡುತ್ತಿದ್ದೇವೆ. ‘ಮೇಕ್ ಇನ್ ಇಂಡಿಯಾ’ ಜೊತೆಗೆ, ನಾವು ‘ಮೇಕ್ ಫಾರ್ ವರ್ಲ್ಡ್’ ಎಂಬ ಮಂತ್ರವನ್ನೂ ಅಳವಡಿಸಿಕೊಳ್ಳಬೇಕು. 110 ಲಕ್ಷ ಕೋಟಿ ರೂ.ಗಳ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ಯೋಜನೆ ನಮ್ಮ ಒಟ್ಟಾರೆ ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ನೀಡುತ್ತದೆ. ನಾವು ಈಗ ಬಹು-ಮಾದರಿ ಸಂಪರ್ಕ ಮೂಲಸೌಕರ್ಯಗಳತ್ತ ಗಮನ ಹರಿಸುತ್ತಿದ್ದೇವೆ. ನಾವು ಇನ್ನು ಮುಂದೆ ಹಗೇವಿನಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ; ನಾವು ಸಮಗ್ರ ಮತ್ತು ಅಂತರ್ಗತ ಮೂಲಸೌಕರ್ಯಗಳತ್ತ ಗಮನ ಹರಿಸಬೇಕಾಗಿದೆ. ವಿವಿಧ ವಲಯಗಳ ಸುಮಾರು 7,000 ಯೋಜನೆಗಳನ್ನು ಸಹ ಗುರುತಿಸಲಾಗಿದೆ. ಇದು ಮೂಲಸೌಕರ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲಾದೆ. […]
Continue Reading