file711tl8srddi14gny1hof1569588961

ರೇಷ್ಮೆ ಬೆಳಗಾರರು, ರೀಲರ್ಸ ಗೆ ಬಂಪರ್ ಕೊಡುಗೆ…!

STATE

ರೇಷ್ಮೆ ಅಡಮಾನ ಸಾಲವನ್ನ ಒಂದು ಲಕ್ಷ ರೂ. ನಿಂದ ಎರಡು ಲಕ್ಷ ರೂಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ನೂಲು ಖರೀದಿಯ ಬೇಡಿಕೆಯನ್ನು ಈಡೇರಿಸಲಾಗಿದೆ. ರೇಷ್ಮೆ ನೂಲು ಖರೀದಿಗಾಗಿ ರಾಜ್ಯ ಸರ್ಕಾರ 10 ಕೋಟಿ ರೂ. ಹಣ ಬಿಡುಗಡೆ

ಬೆಂಗಳೂರು ಮೇ ೧೫ :- ರೇಷ್ಮೆ ಬೆಳೆಗಾರರು ಹಾಗೂ ರೀಲರ್ಸ್ ಗೆ ಬಂಪರ್ ಕೊಡುಗೆ ನೀಡಿದ ರಾಜ್ಯ ಸರ್ಕಾರ. ಅಡಮಾನ ಸಾಲ ಏರಿಕೆ ಜೊತೆಗೆ ನೂಲು ಖರೀದಿಗು ಅವಕಾಶ ಆದೇಶ.

ವಾರದ ಹಿಂದಷ್ಟೆ ರೇಷ್ಮೆ ರೀಲರ್ಸ್ ಹಾಗೂ ಟ್ರೇಡರ್ಸ್ ಜೊತೆ ರೇಷ್ಮೆ ಇಲಾಖೆ ಸಚಿವ ಡಾ| ನಾರಾಯಣಗೌಡ ಸಭೆ ನಡೆಸಿದ್ದರು. ಸಭೆಯಲ್ಲಿ ರೀಲರ್ಸ್, ಅಡಮಾನ ಸಾಲ ಏರಿಕೆ ಹಾಗೂ ರೇಷ್ಮೆ ನೂಲು ಖರೀದಿ ಮಾಡುವ ಬಗ್ಗೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಸಚಿವ ನಾರಾಯಣಗೌಡ ಸಿಎಂ ಬಿಎಸ್ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಿದ್ದರು. ಪರಿಣಾಮವಾಗಿ ರೇಷ್ಮೆ ಅಡಮಾನ ಸಾಲವನ್ನ ಒಂದು ಲಕ್ಷ ರೂ. ನಿಂದ ಎರಡು ಲಕ್ಷ ರೂಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ನೂಲು ಖರೀದಿಯ ಬೇಡಿಕೆಯನ್ನು ಈಡೇರಿಸಲಾಗಿದೆ. ರೇಷ್ಮೆ ನೂಲು ಖರೀದಿಗಾಗಿ ರಾಜ್ಯ ಸರ್ಕಾರ 10 ಕೋಟಿ ರೂ. ಹಣ ಬಿಡುಗಡೆ ಮಾಡಿದೆ. ಪ್ರತಿ ರೀಲರ್ ನಿಂದ 20 ಕೆ.ಜಿ. ನೂಲು ಖರೀದಿಗೆ ತೀರ್ಮಾನಿಸಲಾಗಿದೆ.

2019 ರ ಏಪ್ರಿಲ್ 1 ರಿಂದ ಈ ವರೆಗೆ ಯಾವ ರೀಲರ್ಸ್, ರೇಷ್ಮೆಗೂಡು ಖರೀದಿ ಮತ್ತು ರೇಷ್ಮೆ ಮಾರಾಟದ ವಹಿವಾಟನ್ನು KSMB ಸಂಸ್ಥೆ ಹಾಗೂ ಓಪನ್ ಮಾರ್ಕೆಟ್ ನಲ್ಲಿ ಮಾಡಿರುತ್ತಾರೊ ಅಂತ ರೀಲರ್ಸ್ ಗಳಿಂದ ರೇಷ್ಮೆ ಖರೀದಿಗೆ ತೀರ್ಮಾನಿಸಲಾಗಿದೆ.

 ರೇಷ್ಮೆ ನೂಲು ಖರೀದಿ ತೀರ್ಮಾನ ಹಾಗೂ ಅಡಮಾನ ಸಾಲ ಏರಿಕೆ ಮಾಡಿರುವ ಕಾರಣ ರೇಷ್ಮೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.

ಮನವಿಗೆ ಸ್ಪಂದಿಸಿ, ರೈತರಿಗೆ ಅನುಕೂಲವಾಗುವಂತ ಘೋಷಣೆ ಮಾಡಿರುವ ಸಿಎಂ ಬಿ ಎಸ್  ಯಡಿಯೂರಪ್ಪ ಅವರನ್ನ ಸಚಿವ ನಾರಾಯಣಗೌಡ ಅಭಿನಂದಿಸಿದ್ದಾರೆ.