download 2 4

ಸಾಲಗಾರರಿಗೆ ಶುಕ್ರದೆಸೆ…!

National - ಕನ್ನಡ

ಬೆಂಗಳೂರು ಮೇ 22 :- ಲಾಕ್‌ ಡೌನ್‌ ಆದ ಹಿನ್ನಲೆಯಲ್ಲಿ  ವಿವಿಧ  ಬ್ಯಾಂಕ್‌ ಗಳಿಂದ ಸಾಲ ಪಡೆದ ಗ್ರಾಹಕರ ಮರುಪಾವತಿ ಅವಧಿಯನ್ನು ಆಗಸ್ಟ್‌ 31ರ ವರೆಗೆ ಮುಂದೂಡಿದೆ. ಇದರಿಂದ 6ತಿಂಗಳ ಕಾಲಾವಧಿ ಸಿಕ್ಕಂತಾಗಿದೆ.

ಲಾಕ್‌ ಡೌನ್‌ ಘೊಷಣೆಯಾದ ನಂತರ ಇಂದು ಮೂರನೆ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭಾರತೀಯ ರಿಸರ್ವ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಆರ್ಥಿಕ ಪುನಚ್ಚೇತನಕ್ಕೆ  ಕ್ರಮಗಳನ್ನು ಕೈಗೊಂಡಿದ್ದಾರೆ. ಕಳೆದ ಬಾರಿ ಅವರು ಎಲ್ಲಾ ಸಾಲದ ಮರುಪಾವತಿ ಕಂತು ಗಳಿಗೆ ಮೂರು ತಿಂಗಳು ಕಾಲಾವಕಾಶ ಹೆಚ್ಚಳ ಘೋಷಿಸಿದ್ದರು ಈಗ ಮತ್ತೆ ಇನ್ನೂ ಮೂರು ತಿಂಗಳು ಅದನ್ನು ವಿಸ್ತರಿಸಿದ್ದಾರೆ.

ಕೊರೋನಾ ಸೊಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಮುಂದುವರೆದಿರುವುದರಿಂದ ಸಾರ್ವಜನಿಕರ ಹಿತದೃಷ್ಠಿಯಿಂದ  ಆರ್‌ ಬಿ ಐ – ಇಎಂಐ  ಮುಂದೂಡುವ ಕ್ರಮ ಕ್ಕೆ ಮುಂದಾಗಿದೆ. ಇದರಿಂದ ಆರು ತಿಂಗಳು ಕಾಲಾವಧಿ ಹೆಚ್ಚಾಗಲಿದೆ,  ಆರು ತಿಂಗಳು  ಬಾಕಿ ಉಳಿದ  ಕಂತುಗಳ ಮೇಲಿನ ಬಡ್ಡಿ ಸೇರಿಸಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ.

ಆರ್ ಬಿ ಐ  ಆರ್ಥಿಕ ಪುನಚ್ಚೇತನ ಕ್ರಮಗಳನ್ನು ಕೈಗೊಂಡಿರುವ ಆರ್‌ ಬಿ ಐ ರೆಪೋದರ ಶೇಕಡ ೪ ಕ್ಕೆ ಇಳಿಕೆಮಾಡಿದೆ.  ರೆಪೋ ದರ ಎಂದರೆ ರಿಸರ್ವ ಬ್ಯಾಂಕ್‌  ದೇಶದ ವಾಣಿಜ್ಯ ಬ್ಯಾಂಕು ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ಧರ ವಾಗಿದೆ. ಇದು ಕಡಿಮೆ ಯಾದರೆ ಗ್ರಾಹಕರಿಗೆ ವಾಣಿಜ್ಯ ಬ್ಯಾಂಕ್‌ ಗಳು ಗ್ರಾಹಕರಿಗೆ ನೀಡುವ/ ನೀಡಿರುವ ಸಾಲದ ಬಡ್ಡಿ ಧರ ಕಡಿಮೆ ಆಗುವ ಸಾದ್ಯತೆ ಇದೆ.