C202005113497

ʻ ದೀದಿ ʼನಾಡಿಗೆ ʻಮೋದಿʼ ,ಎಲ್ಲರ ಚಿತ್ತ ಬಂಗಾಳ ದತ್ತ….!

National - ಕನ್ನಡ

ನವ ದೆಹಲಿ ಮೇ 21:-  ಅಂಫನ್‌ ಚಂಡಮಾರುತದಿಂದ ತತ್ತರಿಸಿರು ಪಶ್ಚಿಮ ಬಂಗಾಳದ ಪರಿಸ್ಥಿಯನ್ನು ಅವಲೋಕಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪಶ್ಚಿಮ ಬಂಗಾಳ ಒಡಿಶಾ ಪ್ರವಾಸ ಕೈಗೊಳ್ಳಲಿದ್ದಾರೆ. ದೇಶದಲ್ಲಿ ಎಲ್ಲರ ಚಿತ್ತ ಮೋದಿ-ದೀದಿ ಭೇಟಿ ಮೇಲೆ ಇರಲಿದೆ, ಇನ್ನು ಯುಪಿಎ ಅಧಿನಾಯಕಿ ಸೋನಿಯಾ  ಶುಕ್ರವಾರ ಕರೆದಿರುವ  ವಿರೋಧಪಕ್ಷ ನಾಯಕರ ವಿಡಿಯೋಕಾನ್ಫರೆನ್ಸ್‌ ಸಭೆ ಮಂಕಾಗುವ ಲಕ್ಷಣಗಳೇ ಹೆಚ್ಚಾಗಿವೆ.

ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಉಂಟಾಗಿರುವ ನಷ್ಟವನ್ನು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಪ್ರಧಾನಿ ಮೋದಿ. ಚಂಡಮಾರುತದಿಂದ ತತ್ತರಿಸಿರು ಬಂಗಾಳ ರಾಜ್ಯಕ್ಕೆ ಭೇಟಿ ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಹಿರಂಗವಾಗಿ ಮನವಿ ಮಾಡಿದ್ದರು

ಚಂಡಮಾರುತ ಉಂಟುಮಾಡಿರುವ ಅನಾಹುತಕ್ಕೆ ಸ್ಪಂದಿಸಿರುವ ಮೋದಿ ಇಡೀ ದೇಶ ಬಂಗಾಳ ಬೆಂಬಲಕ್ಕೆ ನಿಲ್ಲಲಿದೆ ಎಂದು ಟ್ವೀಟ್‌ ಮೂಲಕ ಭರವಸೆನೀಡಿದ್ದರು  ನಾಳೆ  ದೀದಿ ನಾಡಿನ ವೈಮಾನಿಕ ಸಮೀಕ್ಷೆ  ಸುದ್ದಿಯ ಮದ್ಯೆ ಕಾಂಗ್ರೇಸ್‌ ನಾಯಕಿಯ ಸಭೆ  ಎಷ್ಟು ಮಹತ್ವ ಪಡೆಯಲಿದೆ..?

ಪ್ರಚಾರದಲ್ಲಿ ನೆಲ ಕಚ್ಚಲಿದೆಯಾ ಕಾಂಗ್ರೆಸ್‌ ಸಭೆ…!

ಕೋವಿಡ್‌ ೧೯ ಹಿನ್ನಲೆಯಲ್ಲಿ  ವಲಸೆ ಕಾರ್ಮಿಕರ  ಸಮಸ್ಯೆ, ಕಾರ್ಮಿಕರ ಕಾನೂನಿಗೆ ತಿದ್ದುಪಡಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಕಾಂಗ್ರೇಸ್ ಸೋನಿಯಾ ಗಾಂಧಿ ಕರೆದಿರುವ ವಿಡಿಯೋ ಕಾನ್ಫರೆನ್ಸ್‌ ಸಭೆ ಯಶಸ್ಸುಕಾಣಲಿದೆಯಾ..? ಎಂಬ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ಗುಸು ಗುಸು ಎನ್ನುತ್ತಿವೆ.

ಲೋಕಸಭೆಯಲ್ಲಿ ವಿರೋಧ ಪಕ್ಷಸ್ಥಾನ ಸಿಗದೆ ದೇಶಾದ್ಯಂತ ನೆಲಕಚ್ಚಿರು ಕಾಂಗ್ರೆಸ್, ಒಂದು ಹುಲ್ಲು ಕಡ್ಡಿ ಸಿಕ್ಕರು ಮೇಲೇರಲು ಪರಿತಪಿಸುತ್ತಿದೆ. ಏಕಾಏಕಿ ಸೋನಿಯಾ ಕರೆದಿರುವ ಈ ಸಭೆ ಫಲಪ್ರದ ವಾಗುವ ಸಾಧ್ಯತೆ ಕಡಿಮೆ. ೧೭ ಪಕ್ಷಗಳಲ್ಲಿ ಮಾಯಾವತಿ, ಶರದ್‌ ಪವಾರ್‌, ಸ್ಟಾಲಿನ್‌, ದೇವೇಗೌಡರು, ಮಮತಾ ಬ್ಯಾನರ್ಜಿ ಸೇರಿದಂತೆ ವಿರೋಧ ಪಕ್ಷದ ಹಲವು ಮುಖಂಡರು ಪಾಲ್ಗೊಳಲಿದ್ದಾರೆ ಎನ್ನುತ್ತಿದೆ ಕಾಂಗ್ರೇಸ್‌ ನ ಮೂಲಗಳು.

ನೆಲ ಕಚ್ಚಿರುವ ಕಾಂಗ್ರೆಸ್‌ ಸಖ್ಯವನ್ನು ವಿರೋಧ ಪಕ್ಷಗಳು ಬೆಳಸುತ್ತಾರ..? ಸಭೆಯಿಂದ ದೂರ ದೂರ ಎನ್ನುತ್ತಾರ  ಎಲ್ಲದಕ್ಕೂ ನಾಳೆ ತೆರೆಬೀಳಲಿದೆ.

ದೇಶಾದ್ಯಂತ ಮಾಧ್ಯಮ ದ ದೃಷ್ಠಿ ಎಲ್ಲಾ  ಮೋದಿ-ದೀದಿ ಭೇಟಿಯ ಮೇಲೆ ಇರಲಿದೆ. ಇನ್ನು ಕಾಂಗ್ರೇಸ್‌ ಕರೆದಿರುವ ಸಭೆಯು ಸುದ್ದಿ ಪ್ರಾಮುಖ್ಯ ಪಡೆಯುವುದಂತೂ ಕನಸಿನ ಮಾತು. ಬಂಡೆಯ ಮೇಲೆ ಮಳೆ ಸುರಿದಂತಾಗಲಿದೆಯಾ ಕಾಂಗ್ರೆಸ್‌ ಸಭೆ…!