ಪಾವಗಡ :- ತಾಲ್ಲೂಕಿನಲ್ಲಿ ಸಂಜೆ ಗಾಳಿ ಜತೆಗೆ ಧಾರಕಾರ ಆಲಿಕಲ್ಲು ಮಳೆ ಸುರಿಯಿತು. ಇದರ ಪರಿಣಾಮ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗ ಗಳಲ್ಲಿ ಅನೇಕ ಮನೆಗಳ ಮೇಲ್ಚಾವಣೆ ಹಾರಿ ಹೋಗಿ ನಷ್ಟ ಉಂಟಾಗಿದೆ.
ಪಾವಗಡ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಸಾಗರ ದೋಪಾದಿಯಂತೆ ಹರಿದ ಸಂತಸ ಒಂದೆಡೆ ಯಾದರೆ, ಇತ್ತ ಪಟ್ಟಣದ ಕೋರ್ಟ್ ಮುಂಭಾಗದಲ್ಲಿ ಬಿದ್ದ ಆಲಿಕಲ್ಲು ಮಳೆ ರಭಸಕ್ಕೆ ನಿಂತ ಕಾರಿನ ಮೇಲೆ ಮರವೊಂದು ಬಿದ್ದು ಅವಾಂತರ ಸೃಷ್ಟಿ ಮಾಡಿದೆ. ಶಿರಾ ಮುಖ್ಯ ರಸ್ತೆಯಲ್ಲಿರುವ ನರಸಿಂಹನಾಯಕ ಎಂಬುವರ ಮನೆ ಹಂಚು ಹಾಗೂ ಕೆಂಚಮ್ಮ ನವರ ಮನೆಯ ಮೇಲ್ಚಾವಣೆಯ ಸೀಟ್ ಹಾರಿ ಹೋಗಿ ನಷ್ಟ ಉಂಟುಮಾಡಿದೆ..
ಈ ಕೂಡಲೇ ತಾಲ್ಲೂಕು ಆಡಳಿತ ವರ್ಗ ಗಮನಹರಿಸಿ ವರುಣಾನ ಅವಾಂತರಕ್ಕೀಡಾಗಿ ನಷ್ಟ ಅನುಭವಿಸಿದ ನೊಂದವರಿಗೆ ಪರಿಹಾರ ನೀಡಬೇಕಿದೆ.
ಸಂಜೆಯ ವೊತ್ತಿನಲ್ಲಿ ಸುರಿದ ಮಳೆರಾಯ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕಣ್ಣು ಬಿಟ್ಟಿದ್ದಾನೆ
ಇನ್ನು ತಾಲ್ಲೂಕಿನ ಇತರೆ ಹಳ್ಳಿಗಳಲ್ಲಿ ಸಾಧಾರಣ ಮಳೆ ಸುರಿದು ಭೂಮಿ ತಂಪಾಗಿದೆ. ಬರದ ನಾಡು ಖ್ಯಾತಿಯ ಪಾವಗಡ ಮುಂಗಾರು ಮಾರುತ ಆರಂಭಕ್ಕೆ ಮುನ್ನಾ ಮಳೆ ಬಂದು ಕೃಷಿ ಚಟುವಟಿಕೆಗೆ ಗ್ರೀನ್ ಸಿಗ್ನಲ್ ನೀಡಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.