IMG 20230506 WA0002

ಪಾವಗಡ:ತಿಮ್ಮರಾಯಪ್ಪನನ್ನ ಗೆಲ್ಲಿಸಿದರೆ ಸಚಿವನನ್ನಾಗಿ ಮಾಡಲಾಗುವುದು….!

DISTRICT NEWS ತುಮಕೂರು

ತಿಮ್ಮರಾಯಪ್ಪನನ್ನ ಗೆಲ್ಲಿಸಿದರೆ ಸಚಿವನನ್ನಾಗಿ ಮಾಡಲಾಗುವುದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.

ಪಾವಗಡ : ಪ್ರತಿ ಕುಟುಂಬಕ್ಕೆ ನೆಮ್ಮದಿ ಬದುಕು ತಂದುಕೊಡುವ ಶಕ್ತಿ ಜೆಡಿಎಸ್ ಪಕ್ಷಕ್ಕಿದೆಯೆಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಗುರುಭವನದ ಮೈದಾನದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನ ಮೂಲಭೂತ ಸಮಸ್ಯೆಗಳಾದ, ನಿರುದ್ಯೋಗ, ಕುಡಿಯುವ ನೀರಿನ ಸಮಸ್ಯೆ, ವಸತಿ ಸಮಸ್ಯೆಗಳನ್ನು ಸರಿಪಡಿಸಲು ಜೆಡಿಎಸ್ ಪಕ್ಷಕ್ಕೆ ಒಂದು ಬಾರಿ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮಕ್ಕೆ ಜನರಿಂದ ಅಭೂತಪೂರ್ವವಾದ ಮನ್ನಣೆ ದೊರೆತಿದೆ ಎಂದರು.
ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಎಕರೆಗೆ 10,000 ರೂಪಾಯಿ, ಭೂಮಿ ಇಲ್ಲದ ಕೃಷಿ ಕಾರ್ಮಿಕರಿಗೆ ತಿಂಗಳಿಗೆ 2000 ರೂಪಾಯಿ.
ವಿಧವಾ ಮತ್ತು ಅಂಗವಿಕಲರಿಗೆ ತಿಂಗಳಿಗೆ 2500ರೂಪಾಯಿ, 65 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ 5000 ರೂಪಾಯಿ ನೀಡಲಾಗುವುದೆಂದು ತಿಳಿಸಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದೆಂದು.
ನಿಮ್ಮ ಋಣ ತೀರಿಸಲು ನನಗೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಪಾವಗಡಕ್ಕೆ ಪ್ರತಿ ಬಾರಿಯೂ ಬಂದಾಗ ಇಲ್ಲಿನ ಜನರು ತನ್ನನ್ನು ಮನೆ ಮಗನಾಗಿ ಬರಮಾಡಿಕೊಳ್ಳುತ್ತಾರೆಂದು, ಅವರು ತೋರಿಸುವ ಪ್ರೀತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮ ಉದ್ದೇಶಿಸಿ ತಿಮ್ಮರಾಯಪ್ಪ ಮಾತನಾಡಿ.
ಜನ ಬಲದ ಮುಂದೆ ಹಣ ಬಲವು ನಿಲ್ಲುವುದಿಲ್ಲ ಎಂದು. ತಾನು ಬಡ ಕುಟುಂಬದಿಂದ ಬಂದಿದ್ದು ಸಾಮಾನ್ಯ ಜನರ ಕಷ್ಟಗಳನ್ನು ಅರಿತ ವ್ಯಕ್ತಿಯಾಗಿದ್ದೇನೆಂದರು.
ತನ್ನ ಬಳಿ ಹಣಬಲವಿಲ್ಲದಿದ್ದರೂ, ಜನಬಲ ಬೇಕಾದಷ್ಟಿದೆ ಎಂದರು.
ಜೆಡಿಎಸ್ ನ ಪಂಚರತ್ನ ಕಾರ್ಯಕ್ರಮಕ್ಕೆ ತಾಲೂಕಿನಲ್ಲಿ ವಿಶೇಷ ಸ್ಪಂದನೆ ದೂರೆತಿದೆ ಎಂದರು.

ಕಾರ್ಯಕ್ರಮ ಉದ್ದೇಶ ಆರ್ ಸಿ ಅಂಜಿನಪ್ಪ ಮಾತನಾಡಿ.
ಈ ಬಾರಿ ಚುನಾವಣೆಯು ಧರ್ಮ ಮತ್ತು ಅಧರ್ಮಗಳ ನಡುವಿನ ಸಮರವೆಂದರು.
ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ತಾಲೂಕಿನಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ.
ತಾಲೂಕಿಗೆ ಎಷ್ಟು ಸರ್ಕಾರಿ ಶಾಲೆಗಳು ಮೊರಾರ್ಜಿ ಶಾಲೆಗಳನ್ನು ತಂದಿದ್ದಾರೆ ಎಂದು ಪ್ರಶ್ನೆಸಿದರು.

25,000 ಮತಗಳ ಅಂತರದಿಂದ ತಿಮ್ಮರಾಯಪ್ಪ ಗೆದ್ದೆ ಗೆಲ್ಲುವರು ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷವು ಜನರ ನಡುವೆ ದ್ವೇಷ ವೈಶಮ್ಯ ಬಿತ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಘಟಕದ ಉಪಾಧ್ಯಕ್ಷ ತಿಮ್ಮಾರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಮರೆಡ್ಡಿ, ಎನ್ ಎ ಈರಣ್ಣ, ಗೋವಿಂದಬಾಬು, ರಾಜಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಯುನುಸ್, ಕಾವಲಗೆರೆ ರಾಮಾಂಜಿ, ಸಾಯಿ ಸುಮನ್, ಹನುಮಂತರಾಯಪ್ಪ, ಚನ್ನಮಲ್ಲಯ್ಯ, ಮನು ಮಹೇಶ್, ಜಿ ಎ ವೆಂಕಟೇಶ್, ಅಂಬಿಕಾ, ನಾರಾಯಣಮೂರ್ತಿ, ಎಸ್ ಕೆ ರೆಡ್ಡಿ, ನಾಗಬೂಷಣರೆಡ್ಡಿ, ಶಿವಪ್ಪನಾಯಕ, ಜಯಂತ್, ವಸಂತ್, ಗಗನ್, ರವೀಂದ್ರ, ಕೋಳಿ ಬಾಲಾಜಿ, ನಂಜುಂಡಸ್ವಾಮಿ, ಮುಂತಾದವರು ಉಪಸ್ಥಿತರಿದ್ದರು.