ಕೊರೊನಾ ವೈರಸ್ ತಡೆಗಟ್ಟುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರು ಜಪಾನಂದ ಸ್ವಾಮಿ ಯವರ ನಿಸ್ವರ್ಥ ಸೇವೆಯನ್ನು ,ಮಧುಗಿರಿ ಉಪವಿಭಾಗಾಧಿಕಾರಿ ಕೆ.ನಂದಿನಿ ದೇವಿ ಶ್ಲಾಘಿಸಿದರು.ಬಡವರ ನೊಂದವರ ಸೇವೆಯಲ್ಲಿ ಸ್ವಾಮೀಜಿ ಸದಾ ಇರುತ್ತಾರೆ ಎಂದರು
ಬಡವರ,ನೊಂದವರ ಸೇವೆಯಲ್ಲಿ ಜಪಾನಂದ ಸ್ವಾಮೀಜಿ :
ಪಾವಗಡ ಪಟ್ಟಣದಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮದ ನೈತೃತ್ವದಲ್ಲಿ ಮಂಗಳವಾರ ಆ ಯೋಜಿಸಿದ್ದ ಕೊರೊನಾ ವೈರಸ್ ತಡೆಗಟ್ಟುವ ಯೋಜನೆ ಮುಕ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೊರೊನಾ ತಡೆಗಟ್ಟುವಲ್ಲಿ ಹಾಗೂ ಸದಾ ಬಡವರ ನೊಂದವರ ಸೇವೆಯಲ್ಲಿ ತಮ್ಮನ್ನು ಸ್ವಾಮೀಜಿಯವರು ತೊಡಗಿಸಿಕೊಂಡಿದ್ದಾರೆ ಇದೊಂದು ಅಭಿನಂದನಾ ಪೂರ್ವಕವಾದದ್ದು ಈ ಸೇವಾ ಮನೋಭಾವನೆ ಹೀಗೆ ಸಾಗಲಿ ಎಂದು ಆಶಿಸಿದರು.
ಜಪಾನಂದ ಸ್ವಾಮೀಜಿಯವರು ಮಾತನಾಡಿ ಕೊರೊನಾ ವೈರಸ್ ರೋಗ ತಡೆಗಟ್ಟುವ ಸಲುವಾಗಿ 60 ದಿನಗಳಿಂದ ಆಸ್ರಮ ಹಾಗೂ ಇನ್ಪೋಸಿಸ್ ಸಂಸ್ಥೆಯಿಂದ ಪ್ರತಿದಿನ ಬೆಳಗಿನ ಉಪಹಾರ , ಕೂಲಿ ಕಾರ್ಮಿಕರು,ಹಮಾಲಿಗಳು, ಚಾಲಕರು, ಕಟ್ೞಡ ಕಾರ್ಮಿಕರು ಬೀದಿ ಬದಿ ವ್ಯಾಪಾರಿಗಳು ಹೀಗೆ ಅನೇಕ ವೃತ್ತಿ ಕ್ಷೇತ್ರದಲ್ಲಿ ಸಾಗುತ್ತಿದ್ದವರಿಗೆ ದಿನಕ್ಕೆ ತಲಾ ಇನ್ನೂರು ರೂಪಾಯಿ ಸಹಾಯ ಧನ, ಮೂವತ್ತು ಸಾವಿರ ಮಾಸ್ಕ್ಗಳನ್ನು , ಸ್ಯಾನಿಟೈಸರ್ ಗಳನ್ನು ವಿತರಿಸಲಾಯಿತು. ಬಾಣಂತಿಯರು, ನಿರ್ಗತಿಕರು, ಮಕ್ಕಳಿಗೆ ಹೀಗೆ ಹಲವರಿಗೆ 55000 ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. ಇನ್ನು ಮುಂದಿನ ಹಂತದಲ್ಲಿ ಶಾಲಾ ಮಕ್ಕಳಿಗೆ ಹತ್ತು ಸಾವಿರ ಮಾಸ್ಕ್ ಗಳನ್ನು ವಿತರಿಸುವ ಆಸಕ್ತಿಯನ್ನು ತಿಳಿಸಿದರು.
ತಹಶಿಲ್ದಾರ್ ವರದರಾಜು ಮಾತನಾಡಿ ಜಪಾನಂದ ಸ್ವಾಮೀಜಿಯವರು ಹಲ ವರ್ಷಗಳಿಂದ ಮಾಡುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳು ಅತ್ಯಮೂಲ ಹಾಗೂ ಅತ್ಯಗತ್ಯ ವಾಗಿವೆ. ಆಗಾಗಿ ಸ್ವಾಮೀಜಿಯವರು ವ್ಯಕ್ತಿಯಲ್ಲ ಅದೊಂದು ಶಕ್ತಿ. ನಮ್ಮ ಪಾವಗಡ ತಾಲ್ಲೂಕಿಗೆ ಲಭ್ಯವಾಗಿರೋ ಚೈತನ್ಯ ಎಂದರೆ ತಪ್ಪಾಗಲಾರದು ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ ಕೊರೊನಾ ಸ್ವಯಂ ಪ್ರೇರಣೆಯ ವಾರಿಯರ್ಸ್ಗಳಿಗೆ ಮತ್ತು ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಮೂವರು ಪದಾಧಿಕಾರಿಗಳಿಗೆ ಗೌರವ ಸೂಚಿಸಿಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ನವೀನ್ ಚಂದ್ರ, ಪಬ್ಲಿಕ್ ಪ್ರಾಸಿಕ್ಯೂಟರ್ ಮಂಜುನಾಥ್, ವಕೀಲರು ಯಜ್ಞ ನಾರಾಯಣ ಶರ್ಮ, ಆರ್ ಐ. ರಾಜ್ ಗೋಪಾಲ್ ಇತರರು ಇದ್ದರು.
ವರದಿ: ನವೀನ್