KSRTC: ಕೋವಿಡ್ ೧೯ ಲಾಕ್ ಡೌನ್ ನಿಂದ ಸಂಚಾರ ಕ್ಕೆ ಬ್ರೇಕ್ ಹಾಕಿದ್ದ ಸರ್ಕಾರ ಈಗ ಅಂತರ್ ರಾಜ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಆಂದ್ರ ಕ್ಕೆ ಹೋಗಲು ಬಸ್ ರೆಡಿಯಾಗಿದೆ.
ಬೆಂಗಳೂರು ಜೂನ್ ೧೫ :- ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ದಿನದಿಂದ ಬಸ್ ಸಂಚಾರವನ್ನು ಬಂದ್ ಮಾಡಲಾಗಿದ್ದ ಕೆ ಎಸ್ ಆರ್ ಟಿ ಸಿ ೧೭ ನೇ ತಾರೀಖಿನಿಂದ ಆರ್‌ಡಿನರಿ ( Non Ac Bus) ಬಸ್ ಗಳು ಮೊದಲ ಹಂತದ ಸಂಚಾರ ಆರಂಭಿಸಲಿವೆ ನಿರ್ಧರಿಸಲಾಗಿದೆ.
ಕೆ ಎಸ್ ಆರ್ ಟಿ ಸಿ ಬಸ್ ೧೭ ನೇ ತಾರೀಖಿನಿಂದ ಎಲ್ಲಿ- ಎಲ್ಲಿ ಗೆ ಹೋಗಲಿವೆ :
- ಬೆಂಗಳೂರುನಿಂದ ಅನಂತಪುರ, ಕಲ್ಯಾಣದುರ್ಗ, ತಿರುಪತಿ, ಮಂತ್ರಾಲಯ,ಪುಟ್ಟಬರ್ತಿ,ರಾಯದುರ್ಗ,ಚಿತ್ತೂರು,ಮದನಪಲ್ಲಿ,ವಿಜಯವಾಡ, ನೆಲ್ಲೂರು
- ಬಳ್ಳಾರಿಯಿಂದ ವಿಜಯವಾಡ,ಅನಂತಪುರ,ಕರ್ನೂಲ್, ಮಂತ್ರಾಲಯ, ರಾಯಚೂರಿನಿಂದ ಮಂತ್ರಾಲಯ.
- ಶಾಹಪುರದಿಂದ ಮಂತ್ರಾಲಯ ಮತ್ತು ಕರ್ನೂಲ್
ಆಂದ್ರಕ್ಕೆ ಹೋಗಲು ಬಸ್ ರೆಡಿ ಯಾಗಿದ್ದು ,ಮೇಲ್ಕಂಡ ಮಾರ್ಗಗಳಿಗೆ ಆನ್ ಲೈನ್ ಮುಖಾಂತರ ಮುಂಗಡ ಟಿಕೆಟ್ ಬುಕ್ ಮಾಡಬಹುದು ಎಂದು ಕೆ ಎಸ್ ಆರ್ ಟಿ ಸಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಲಾಗಿದೆ