ವೈ ಎನ್ ಹೊಸಕೋಟೆ: ಉತ್ತಮ ಪರಿಸರದಿಂದ ಆರೋಗ್ಯ
ವೈ.ಎನ್.ಹೊಸಕೋಟೆ: ಉತ್ತಮ ಪರಿಸರದಿಂದ ಆರೋಗ್ಯ ಕಾಣಬಹುದಾಗಿದೆ ಎಂದು ಭಗತ್ ಸಿಂಗ್ ಫೌಂಡೇಶನ್ ಕಾರ್ಯದರ್ಶಿ ಎ.ಎಸ್. ರಘುನಂದನ್ ತಿಳಿಸಿದ್ದಾರೆ.
ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮವನ್ನು ಶನಿವಾರ ಭಗತ್ ಸಿಂಗ್ ಫೌಂಡೇಶನ್ ಹಮ್ಮಿಕೊಳ್ಳಲಾಗಿತ್ತು.
ಮಾತನಾಡಿ ನಮ್ಮ ಫೌಂಡೇಶನ್ ವತಿಯಿಂದ 12 ವರ್ಷಗಳಿಂದ ವಿಶ್ವ ಪರಿಸರ ದಿನಾಚರಣೆಯಂದು ಗಿಡ ನಾಟಿ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ, ಇಂದು ನಮಗೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯೆಂದರೆ ಕೋರೋನಾ ಸೋಂಕು ಹೋಗಲು ಈ ಸಮಸ್ಯೆಯಿಂದ ದೂರವಾಗಲು ಗಾಳಿ ಮತ್ತು ಉತ್ತಮ ಪರಿಸರದ ಅವಶ್ಯಕತೆ ಇದೆ ಹಾಗಾಗಿ ನಾವು ಗಿಡಗಳನ್ನು ನಾಟಿ ಮಾಡಿ ಬೆಳಸುವ ಮೂಲಕ ಕೊರೋನಾನ್ನು ಸೋಂಕನ್ನು ದೂರ ಮಾಡಬಹುದಾಗಿದೆ.
ಆಸ್ಪತ್ರೆಯ ಆವರಣದಲ್ಲಿ ವಿವಿಧ ಬಗೆಯ 20ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಯಿತು. ಮತ್ತು ಗ್ರಾಮದಲ್ಲಿ ಮಧ್ಯಾಹ್ನ ಬಡಜನರಿಗೆ ಊಟ ನೀಡಿದರು.
ಈ ಸಂದರ್ಭದಲ್ಲಿ ಡಾ. ಲಿಂಗರಾಜು, ಡಾ. ರಾಮಾಂಜನೇಯಲು, ಪಿಎಸ್ಐ ಎಸ್.ಸಿ.ಭಾರತಿ, ಮುಖ್ಯ ಶಿಕ್ಷಕರಾದ ಐ.ಎ.ನಾರಾಯಣಪ್ಪ ಫೌಂಡೇಶನ್ ಅಧ್ಯಕ್ಷ ನವೀನ್ ಕುಮಾರ್, ಪದಾಧಿಕಾರಿಗಳಾದ ರಾಘವೇಂದ್ರ, ನೂರುದ್ದೀನ್, ಶಿವಕುಮಾರ್, ಲೋಕೇಶ್, ಹನುಮಂತರಾಯ, ಹಾಜರಿದ್ದರು.
ವರದಿ: ಸತೀಶ್