ರಾಜ್ಯದಲ್ಲಿ ಕೊರೋನಾ ಶಾಕ್: ಇಂದು 204 ಸೋಂಕು ಪ್ರಕರಂಗಳು ದಾಖಲು, 8 ಜನರು ಸಾವನ್ನಪ್ಪಿದ್ದರೆ, ಒಟ್ಟು 7734 ಪ್ರಕರಣಗಳು ದಾಖಲಾಗಿವೆ.
ಕೊರೋನಾ ಲಾಕ್ ಡೌನ್ ನಿರ್ಭಂದ ಗಳಿಗೆ ಜೂನ್ 30 ರ ನಂತರ ಮತ್ತಷ್ಟು ರಿಲಿಫ್ ಸಿಗುವ ಸಾಧ್ಯತೆ, ಕೊರೋನಾ ಸೋಂಕು ಸಮದಾಯಕ್ಕೆ ಹಬ್ಬಿಲ್ಲ, ಕೇಂದ್ರಕ್ಕೆ ರಾಜ್ಯ ಮಾಹಿತಿ ನೀಡಿದೆ.ಆದರೆ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೆ ಇದೆ, ರಾಜ್ಯ ಸರ್ಕಾರ ಮಾತ್ರ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ ಎನ್ನುವ ಮಾಹಿತಿ ಕೇಂದ್ರಕ್ಕೆ ನೀಡಿದೆ ಎನ್ನಲಾಗುತ್ತಿದೆ .
ಬೆಂಗಳೂರು ಜೂನ್ 17:- ಪ್ರಧಾನಿ ನರೇಂದ್ರ ಮೋದಿ ಯವರು ಇಂದು ದೇಶ ದ ವಿವಿಧ ರಾಜ್ಯ ದ ಮುಖ್ಯಮಂತ್ರಿ ಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ೧೯ ಸೋಂಕಿನ ಪ್ರಸ್ತುತ ಪರಿಸ್ತಿತಿಗಳ ಮಾಹಿತಿ ಪಡೆದರು. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭಾಗವಹಿಸಿ ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ವಿವರಿಸಿದರು.
ಇಂದಿನ ಸಭೆಯಲ್ಲಿ ಮತ್ತಷ್ಟು ಲಾಕ್ ಡೌನ್ ಸಡಲಿಕೆ ಮಾಡುವಂತೆ ಸಿ ಎಂ ಬಿಎಸ್ ವೈ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜೂನ್ ೩೦ ರ ನಂತರ ಮತ್ತಷ್ಟು ರಿಲೀಫ್ ಸಿಗಲಿದೆಯಂತೆ.
- ನಮ್ಮ ಮೆಟ್ರೋಗೆ ಶರತ್ತು ಬಧ್ಧ ಅನುಮತಿ ಸಿಗುವ ಸಾಧ್ಯತೆ
- ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಅವಕಾಶ
- ಕೆಲವು ಆರ್ಥಿಕ ವಲಯಗಳಿಗೆ ಸಡಲಿಕೆ ಸಾಧ್ಯತೆ
- ಜಿಮ್ ಸೇರಿದಂತೆ ಕ್ರೀಡಾಚಟುವಟಿಕೆ ಗೆ ಶರತ್ತು ಬದ್ದ ಅನುಮತಿ
ಲಾಕ್ ಡೌನ್ ಮುಂದುವರಿಕೆ…?
- ಸಿನಿಮಾ, ಮಲ್ಟಿಪ್ಲಕ್ಸ್ ನಿರ್ಭಂದ ಮುಂದುವರಿಕೆ
- ಶಾಲಾ ಕಾಲೇಜು ಸದ್ಯಕ್ಕೆ ಓಪನ್ ಇಲ್ಲ
- ಸ್ವಿಮಿಂಗ್ ಓಪನ್ ಇಲ್ಲ
ಕೊರೋನಾ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ, ಆದರೆ ರಾಜ್ಯ ಸರ್ಕಾರ ಲಾಕ್ ಡೌನ್ ಸಡಲಿಕೆಗೆ ಮನವಿ ಮಾಡಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ