ಮಾನವೀಯತೆ ತೋರಿದ,ಸಿ.ಕೆ.ಪುರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ….!
ಪಾವಗಡ: ರಸ್ತೆ ಬದಿಯ ಕಿಟಕಿಯಿಲ್ಲದ ಪಂಪ್ ಹೌಸ್ನಲ್ಲಿ ಒಂದು ಛಾಪೆ, ಹರಿದ ಬರ್ಮಡ ಕೊಳಕಾಗಿರೋ ಮೈ ಮೇಲಿನ ಬಟ್ಟೆಗಳು, ಒಂದಷ್ಟು ವಾಟರ್ ಕ್ಯಾನ್ಗಳನ್ನ ಇಟ್ಕೊಂಡು ತನಗೆ ಮನ ಬಂದಂತೆ ತೋಚಿದ್ದನ್ನ ಮಾತನಾಡುತ್ತ ಅನಾಥವಾಗಿ ಅಪರಿಚಿತ ವ್ಯಕ್ತಿಯೋರ್ವನ ಕಾಲು ಕೊಳೆತ ಸ್ಥಿತಿಯಲ್ಲಿ ಮಲಗಿರುವ ಸ್ಥಿತಿ ನೋಡಿದ್ರೆ ಕೆಲ ನಿಮಿಷಗಳ ಕಾಲ ಮನ ನೊಯ್ಯದೆ ಇರದು.
ಇಂಗ್ಲೀಷ್ ಮತ್ತು ಕನ್ನಡ ನಿರರ್ಗಳವಾಗಿ ಮಾತನಾಡುವ ಈ ನಿರ್ಗತಿಕ ಸಧ್ಯಕ್ಕೆ ವಾಸವಿದ್ದ ದ್ದು ಪಾವಗಡ ತಾಲ್ಲೂಕಿನ ಸಿ.ಕೆ.ಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚನ್ನಸಾಗರದಟ್ಟಿ ಗ್ರಾಮಕ್ಕೆ ತೆರಳುವ ನಡುವಿನ ಪಂಪ್ ಹೌಸಲ್ಲಿ
ನಾನು ಆನಂದ್ ಬೆಂಗಳೂರು ಜಯನಗರದ ಮೂಲದವನು ಎಂದು ಹೇಳಿಕೊಳ್ಳುವ ಈತ ಪಾವಗಡಕ್ಕೆ ಬಂದು ಎಂಟು ವರ್ಷಗಳಾಗಿವೆ . ರೈತರಿಗೆ ಹಣ್ಣು ತರಕಾರಿ, ಬೀಜಗಳನ್ನು ಭಿತ್ತನೆಗೆ ನೀಡ್ತೇನೆ ಎಂದು ಹೇಳಿಕೊಳ್ತಾರೆ.
ಈಗಾಗಲೇ ಉದ್ದಂಡಪ್ಪನಪಾಳ್ಯ. ಸಿ.ಕೆ.ಪುರ ಗ್ರಾಮದಲ್ಲಿ ಮನೆ ಬಾಡಿಗೆ ಇದ್ದೆ. ಮನೆ ಖಾಲಿ ಮಾಡಿಸಿದ ಹಿನ್ನೆಲೆ ಇಲ್ಲಿ ಉಳಿದಿದ್ದೇನೆ ಅಂತ ತುಂಬಾ ಬುದ್ದಿವಂತನ ರೀತಿಯಲ್ಲಿಯೇ ಪ್ರತಿಕ್ರಿಯೆ ನೀಡ್ತಾನೆ. ಆದರೆ ಈತನ ವಾಸ್ತವ ಸ್ಥಿತಿ ಗಮನಿಸಿದ್ರೆ ಮಧ್ಯ ಸೇವಿಸಿ, ಅಲ್ಲೆ ಮಲ ಮೂತ್ರ ಮಾಡಿಕೊಂಡು ನರಳಾಡುತ್ತಿರುವ ದೃಶ್ಯವಂತೂ ಇವರೇಳೊ ವಿಚಾರಕ್ಕೂ ಇರುವ ಸ್ಥಿತಿಗೂ ಒಂದಕ್ಕೊಂದು ಸಂಬಂಧವಿಲ್ಲವೇನೊ ಅನ್ನುವ ಅನುಮಾನ ಮೂಡಿದರು ..ಅದು ಸತ್ಯವಿರಬಹುದೇನೋ ಅನ್ನಿಸುತ್ತೆ.
ಈ ವಿಚಾರ ತಿಳಿದ ಕೂಡಲೇ ಸಿ.ಕೆ.ಪುರ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾಗಣ್ಣ ಅವರ ಗಮನಕ್ಕೆ ತರಲಾಯಿತು ಶೀಘ್ರವೇ ಸ್ಥಳಕ್ಕೆ ಬಂದ ಅಧಿಕಾರಿಗಳು ಆ ಅಪರಿಚಿತ ಪೂರ್ವಪರ ತಿಳಿದು ಅವರನ್ನು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕಳುಹಿಸುವ ಮಾನವೀಯ ಕಾರ್ಯವನ್ನು ಮಾಡಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದ್ದಾರೆ.
ಏನೇ ಆಗಲಿ ಮನುಷ್ಯ ಬದುಕು ಕಟ್ಟಿಕೊಳ್ಳುವ ನಡುವೆ ವೈಯಕ್ತಿಕ ಬದುಕಿನಲ್ಲಿ ಯಾವ್ಯಾವ ದುರ್ಘಟನೆಗಳು ಈ ರೀತಿ ಆಗಲು ಪರಿಣಾಮ ಬೀರಿರುತ್ತವೆಯೋ ಭಗವಂತನೇ ಬಲ್ಲ.
ವರದಿ: ನವೀನ್ ಕಿಲಾರ್ಲಹಳ್ಳಿ