IMG 20210611 WA0039

ಪಾವಗಡ: ಗಡಿನಾಡಿನ ಪತ್ರಕರ್ತರಾದ ದವಡಬೆಟ್ಟ ನಾಗರಾಜ್ ನಿಧನ

Uncategorized

 

ಗಡಿನಾಡಿನ ಪತ್ರಕರ್ತರಾದ ದವಡಬೆಟ್ಟ ನಾಗರಾಜ್ ನಿಧನ

ಪಾವಗಡ : ಪ್ರಜಾಭೂಷಣ ರಾಜ್ಯ ಪ್ರಶಸ್ತಿ ವಿಜೇತರಾದ ಹಿರಿಯ ಪತ್ರಕರ್ತ ದವಡಬೆಟ್ಟ ನಾಗರಾಜ್ ಕೋವಿಡ್​ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ತುಮಕೂರು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಮತ್ತು ಪಾವಗಡ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಅವರು, ರಾಜ್ಯ ಮಟ್ಟದಲ್ಲಿ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು, ಗಡಿನಾಡು ಪಾವಗಡ ತಾಲೂಕಿನಲ್ಲಿ ಇರುವ ಹಲವಾರು ಸಮಸ್ಯೆಗಳ ಬಗ್ಗೆ ವರದಿ ಮಾಡಿ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು
ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇವರ ನಿಧನಕ್ಕೆ ಶಾಸಕರಾದ ವೆಂಕಟರಮಣಪ್ಪ , ಮಾಜಿ ಶಾಸಕರಾದ ತಿಮ್ಮರಾಯಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್.ವಿ.ವೆಂಕಟೇಶ್, ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಪಾವಗಡ ಘಟಕದ ಎಲ್ಲಾ ಸದಸ್ಯರು , ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್.ಟಿ.ಖಾನ್, ಶ್ಯಾ ನಾ. ಪ್ರಸನ್ನಮೂರ್ತಿ.ಜಾನಪದ ಕವಿ . ಸಣ್ಣ ನಾಗಪ್ಪ, ಗಡಿನಾಡು ಮಿತ್ರ ದಿನಪತ್ರಿಕೆಯ ಸಂಪಾದಕರಾದ ರಾಮಾಂಜಿನಪ್ಪ, ಪ್ರಜಾವಾಹಿನಿ ಹಾಗೂ ಸ್ಮಾರ್ಟ್ ತುಮಕೂರು ಪತ್ರಿಕೆಯ ವರದಿಗಾರರಾದ ಬುಲೆಟ್ ವೀರಸೇನಯಾದವ್ ಸೇರಿದಂತೆ ತಾಲೂಕಿನ ಎಲ್ಲಾ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ

ವರದಿ: ಬುಲೆಟ್ ವೀರಸೇನಯಾದವ್