ಎರಡನೇ ಬಾರಿಗೆ ಬಿ ಎಸ್ ಯಡಿಯೂರಪ್ಪ ಜೈಲಿಗೆ ಹೋಗಬಾರದು…!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತ ಬಿಜೆಪಿ ನಾಯಕತ್ವದ ಕಿತ್ತಾಟದ ಪರ-ವಿರೋಧ ಚರ್ಚೆಗಳ ನಡುವೆ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದರು
ರಾಜ್ಯ ಬಿಜೆಪಿಯಲ್ಲಿ ಏನು ನಡೆಯುತ್ತಿದ್ದೆ ಎನ್ನುವುದನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗೆ ತಿಳಿಸಿದ್ದೇನೆ.ನಾನು ಬಹುಪರಾಗ್ ಹೇಳುವ ವ್ಯಕ್ತಿಯಲ್ಲ. ಏನು ನಡೆಯುತ್ತಿದೆ ಎನ್ನುವುದನ್ನು ಸವಿಸ್ತಾರವಾಗಿ ವಿವರಿಸಿದ್ದೇನೆ. ನನಗೆ ಯಾರ ಶಬಾಶ್ ಗಿರಿ ಬೇಡ
ನಮ್ಮ ಸಹಕಾರದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇರುವಂತಹ ವಿಚಾರ ಹೇಳಿ ಬೇರೆಯವರಿಗೆ ಅಪ್ಪಚ್ಚಿ ಆಗಬಹುದು. ಏನಾಗ್ತಿದೆ ಅನ್ನೋದನ್ನ ಹೇಳ್ತಾ ಬಂದಿದ್ದೇನೆ. ನಮ್ಮ ಪಕ್ಷದಲ್ಲೇ ಒಂದು ಲಕ್ಷಣ ರೇಖೆ ಇದೆ 75 ವರ್ಷ ವೀರಿದವರಿಗೆ ಆಡಳಿತ ವೇಗ ಕೊಡೊಲ್ಲ. ಯಡಿಯೂರಪ್ಪ ನವರು ಸಾಕಷ್ಟು ಬಳಲಿದ್ದಾರೆ. ಕೋವಿಡ್ , ಬಡತನ,ಅತಿವೃಷ್ಠಿ, ಅನಾವೃಷ್ಠಿ ಎಲ್ಲಾ ರಾಜ್ಯದಲ್ಲಿ ಇದೆ ಇದನ್ನು ಎದುರಿಸುವ ಸಮರ್ಥ ನಾಯಕತ್ವ ರಾಜ್ಯಕ್ಕೆ ಅಗತ್ಯವಿದೆ, ಯಡಿಯೂರಪ್ಪನವರಿಗೆ ಈಗ ಆ ಸಾಮರ್ಥ್ಯ ಇಲ್ಲ ಅವರು ಬಹಳ ಬಳಲಿದ್ದಾರೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ತನ್ನ ಪ್ರಭಾವಳಿಯಲ್ಲಿ ಮಸುಕಾಗುತ್ತಿದೆ. ಇದರಿಂದ ರಾಜ್ಯದ ಆಡಳಿದ ,ಅಭಿವೃದ್ದಿ ಮಸಕಾಗಿ ಹೋಗುತ್ತೆ ಇದರಿಂದ ಜನರಿಗೆ, ಸರ್ಕಾರಕ್ಕೆ,ಪಕ್ಷಕ್ಕೂ ಒಳ್ಳೆಯದಲ್ಲ. ಇದರಿಂದ ಯಾರೋ ಒಬ್ಬ-ಇಬ್ಬರಿಗೆ ಒಳ್ಳೆಯದಾಗಬಹುದು ಎಂದರು.
ನಾನು ಪಕ್ಷದ ಸಿದ್ದಾಂತ – ಕಾರ್ಯಕ್ರಮಗಳ ವಿರುದ್ಧ ಮಾತನಾಡಿಲ್ಲ, ನಾನು ಮಾತನಾಡಿರುವುದು ಪಕ್ಷದ ನೈತಿಕತೆ,ಪಾರದರ್ಶಕತೆ,ಪ್ರಸ್ತುತ ನಡೆಯುತ್ತಿರುವ ಬ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೇನೆ. ನನ್ನ ಮೇಲೆ ಕ್ರಮ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ .ರಾಜ್ಯದಲ್ಲೂ ನಾಯಕತ್ವ ಕುಸಿಯುತ್ತಿದೆ ಇದರಿಂದ ಪಕ್ಷಕ್ಕೆ ದೊಡ್ಡ ಹಾನಿ ಆಗಲಿದೆ, ನಾನು ಪಕ್ಷದ ಒಳತಿಗಾಗಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.
ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಟೆಂಡರ್
ನಿರಾವರಿಯೋಜನೆಯಲ್ಲಿ ೨೦ ಸಾವಿರ ಕೋಟಿ ಟೆಂಡರ್ ಕರೆಯಲು ತಯಾರಿಯಾಗಿದೆ, ಯಾವುದೇ ಹಣಕಾಸು ಇಲಾಖೆಯ ಅನುಮತಿ ಪಡೆಯದೆ ಟೆಂಡರ್ ಗೆ ಸಿದ್ದರಾಗಿದ್ದಾರೆ. ಭದ್ರಾ ಮೇಲ್ದಂಡೆ, ಕಾವೇರಿ ನಿರಾವರಿಯ ೨೦ ಸಾವಿರ ಕೋಟಿ ಯೋಜನೆಗಳಿವು. ವಿಜಯೇಂದ್ರ ಆಡಳಿತ ಅಸ್ತಕ್ಷೇಪ ನಾನು ಹೇಳುತ್ತಿಲ್ಲ,ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ.. ಯಾವ ಮಂತ್ರಿಯಾದರು ಸಮಾಧಾನವಾಗಿದ್ದಾರೆ.? ಎಲ್ಲಾ ಇಲಾಖೆಗಳಲ್ಲೂ ವಿಜಯೇಂದ್ರ ಹಸ್ತಕ್ಷೇಪವಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ 21473 ಕೋಟಿ ಕಾಮಗಾರಿ ಯ ಟೆಂಡರ್ ಗೆ ಸರ್ಕಾರದಲ್ಲಿ ಹಣ ಎಲ್ಲಿದೆ…? ಸುಮ್ಮನೆ ಕಾಮಗಾರಿ ಮಾಡಿ ಕೊಟ್ಟು ಕಿಕ್ ಬ್ಯಕ್ ಪಡೆದುಕೊಂಡು ಹೋದರೆ ಗುತ್ತಿಗೆದಾರರ ಪರಸ್ಥಿತಿ ಏನು..? . ಎಲ್ಲ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಬಗ್ಗೆ ರಾಜ್ಯಕ್ಕೇ ಗೊತ್ತಿದೆ. ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವೂ ಇದೆ. ಯಡಿಯೂರಪ್ಪ ಮಕ್ಕಳಿಂದ ಜೈಲಿಗೆ ಹೋಗಿದ್ದರು. ಈಗ ಮತ್ತೆ ಎರಡನೇ ಬಾರಿಗೆ ಬಿ ಎಸ್ ಯಡಿಯೂರಪ್ಪ ಜೈಲಿಗೆ ಹೋಗಬಾರದು. ವಿಜಯೇಂದ್ರ ದೆಹಲಿಗೆ ಪದೇಪದೆ ಹೋಗೋದು ಏಕೆ? ಇಡಿಯಲ್ಲಿ ಪ್ರಕರಣ ಇದೆ ಹಾಗಾಗಿ ದೆಹಲಿಗೆ ಹೋಗ್ತಾರೆ. ಇದು ಗುತ್ತಿಗೆದಾರರ ಕೇಂದ್ರೀಕೃತವಾದ ಸರ್ಕಾರ ಆಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ ಎಂದರು.
ಈಶ್ವರಪ್ಪ ಅವರು ರಾಜ್ಯಪಾಲರ ಬಳಿ ದೂರು ಕೊಟ್ಟಿದ್ದೇಕೆ?
1400 ಕೋಟಿ ನನ್ನ ಇಲಾಖೆಯ ಹಣ ಬಿಡುಗಡೆ ಮಾಡಿದ್ದಾರೆ. ನನ್ನ ಸಹಿ ಇಲ್ಲದೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಈಶ್ವರಪ್ಪ ದೂರು ನೀಡಿದ್ದಾರೆ. ಈಶ್ವರಪ್ಪ ಒಬ್ಬರು ಮಾತ್ರ ದೈರ್ಯ ಮಾಡಿ ದೂರು ಕೊಟ್ಟರು. ಬೇರೆ ಯಾವ ಸಚಿವರೂ ಸಹ ದೂರು ಕೊಡಲು ಹೋಗ್ತಿಲ್ಲ ಎಂದರು ವಿಶ್ವನಾಥ್.
ರಾಜ್ಯದ ಹಿತಾಸಕ್ತಿಯಿಂದ ನಾನು ಮಾತನಾಡುತ್ತಿದ್ದೇನೆ. ಹಿಂದಿನ ರಾಜಕೀಯ ಇತಿಹಾಸವನ್ನು ಕಂಡಿರುವ ನಾನು ಮುಂದೆ ಪಕ್ಷ ಕ್ಕೆ ಡ್ಯಾಮೇಜ್ ಹಾಗಬಾರದು ಎಂದು ಹೇಳುತ್ತಿದ್ದೇನೆ., ಇಲ್ಲಿ ಮೂರೂ ಪಕ್ಷಗಳು ಅಧಿಕಾರ ನಡೆಸುತ್ತಿವೆ ಇದು ಸತ್ಯ ಸಚಿವ ಸಿ.ಪಿ.ಯೋಗೇಶ್ವರ್ ಸರಿಯಾಗಿ ಹೇಳಿದ್ದಾರೆ. ಶೇ.80ರಷ್ಟು ಶಾಸಕರು ನಾಯಕತ್ವ ಬದಲಾವಣೆ ಕೇಳಿದ್ದಾರೆ. ಅರುಣ್ ಸಿಂಗ್ ಬಳಿ ಒಳಗೆ ಮಾತನಾಡಿರುವುದೇ ಬೇರೆ. ಹೊರ ಬಂದ ಬಳಿಕ ಹೇಳಿಕೆ ನೀಡೋದೇ ಬೇರೆ ಆಗಿರುತ್ತೆ. ಬಹುತೇಕರು ನಾಯಕತ್ವ ಬದಲಾವಣೆ ಬೇಕೆಂದು ಹೇಳಿದ್ದಾರೆ. ಎಲ್ಲರಿಗೂ ಎಲ್ಲವನ್ನೂ ಮಾತನಾಡಲು ಧೈರ್ಯ ಇಲ್ಲ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.