ವೈ ಎನ್ ಹೊಸಕೋಟೆ ಗ್ರಾಮ ಪಂಚಾಯತಿ ಅಕ್ರಮಗಳ ತನಿಖೆಗೆ ಆದೇಶ
ಬೆಂಗಳೂರು: ಸಪ್ತಸ್ವರ ಪತ್ರಿಕೆಯಿಂದ ವೈ ಎನ್ ಹೊಸಕೋಟೆ ಗ್ರಾಮ ಪಂಚಾಯತಿಯಲ್ಲಿ ತೊಘಲಕ್ ದರ್ಬಾರ್ ಎಂಬ ವರದಿ ಯನ್ನು ಪ್ರಕಟಿಸಿದ್ದೆವು. ಪಂಚಾಯತಿ ಕಾಯ್ದೆಯ ಸಂಪೂರ್ಣ ಉಲ್ಳಂಘನೆಯು ಪಾವಗಡ ತಾಲ್ಲೂಕಿನ 34 ಪಂಚಾಯತಿಯ ಪ್ರಸ್ತುತ ಸ್ಥಿತಿ..
ವೈ ಎನ್ ಹೊಸಕೋಟೆ ಗ್ರಾಮ ಪಂಚಾಯತಿ ಅವ್ಯವಸ್ಥೆಯ ಬಗ್ಗೆ ಪಾವಗಡ ತಾಲ್ಲೂಕು ಇ ಓ ಶಿವರಾಜಯ್ಯ ಅವರ ಗಮನಕ್ಕೆ ತಂದರು ಪ್ರಯೋಜನವಾಗಲಿಲ್ಲ. ನಂತರ ತುಮಕೂರು ಜಿಲ್ಲಾ ಪಂಚಾಯತ್ ಸಿ ಇ ಒ ಅವರಿಗೆ ಈ-ಮೈಲ್ ಮೂಲಕ ತಿಳಿಸಿದರು ಸಿಇಒ ಮೇಡಮ್ ಪ್ರತಿಕ್ರಿಯಿಸಲಿಲ್ಲ ನಂತರ ನಮ್ಮ ಪಯಣ ಬೆಂಗಳೂರಿನ ಕಡೆ……
ಸಪ್ತಸ್ವರ ಪತ್ರಿಕೆಯನ್ನು ರವಿಕುಮಾರ್ ಮುಖ್ಯ ಕಾರ್ಯದರ್ಶಿಗಳಿಗೂ ಹಾಗು ಎಲ್ ಕೆ ಅತೀಕ್ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.ಬೆಂಗಳೂರು ಇವರಿಗೂ ನೀಡಿ, ವೈ ಎನ್ ಹೊಸಕೋಟೆ ಗ್ರಾಮ ಪಂಚಾಯತಿ ಅಕ್ರಮಗಳ ಬಗ್ಗೆ ವಿವರಿಸಿ ತನಿಖೆಗೆ ಮನವಿ ಪತ್ರವನ್ನು ನೀಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ ಎಲ್ ಕೆ ಅತೀಕ್ ಅವರು ತನಿಖೆಗೆ ಆದೇಶಿದ್ದರು.
16-12-2021 ರಂದು ತನಿಖೆಗೆ ಆದೇಶವಾಗಿದೆ.
ಏನಿದು ಅಕ್ರಮ
- ವಾರ್ಡ್ ಸಭೆ ಮಾಡದಿರುವುದು
- ಗ್ರಾಮ ಸಭೆ ನಡೆಸದಿರುವುದು. ಕ್ರಿಯಾಯೋಜನೆ ತಯಾರಿಸದೆ ಬೇಕಾ ಬಿಟ್ಟಿ ಹಣ ಖರ್ಚು ಮಾಡಿರುವುದು,
- 27-7-21 ಸರ್ಕಾರದ ಆದೇಶದ ಅನ್ನಯ ಪಂಚಾಯತಿ ಅಸ್ತಿತ್ವಕ್ಕೆ ಬಂದ ಮೂರು ತಿಂಗಳೊಳಗೆ ಐದು ವರ್ಷದ ದೂರ ದೃಷ್ಠಿ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸುವುದು ಕಡ್ಡಾಯ ವಾಗಿರುತ್ತದೆ ಆದರೆ ಯೋಜನೆಯನ್ನು ತಯಾರಿಸಿಲ್ಲ ಇನ್ನು ಗ್ರಾಮದ ಅಭಿವೃದ್ಧಿ ಹೇಗೆ ಸಾಧ್ಯ…
- ನರೇಗಾ ಕಾಮಗಾರಿ ಅಕ್ರಮಗಳು, ಜಮಾ-ಬಂದಿ( ಖರ್ಚು-ವೆಚ್ಚ ನೀಡದಿರುವುದು)
- ಆರ್ ಟಿ ಐ ಕಾಯ್ದೆಯಲ್ಲಿ ಯಾರು ಮಾಹಿತಿ ಕೇಳಿದರು ಕೊಡುವುದಿಲ್ಲ..
- 14 ಮತ್ತು 15 ಹಣಕಾಸು ಯೋಜನೆಯಲ್ಲಿ ಭಾರಿ ಅಕ್ರಮ ನಡೆದಿದೆ (ಊದಾ: ಕೊರನಾ ಪೆನಾಯಿಲ್, ಬ್ಲೀಚಿಂಗ್ ಪೌಡರ್ ಗೆ ಲಕ್ಷಾಂತರ ರೂಪಾಯಿ ಖರ್ಚಾಗಿದೆ.)
- ಹದಿನಾಲ್ಕನೆ ಹಣಕಾಸು ಯೋಜನೆಯ ಅಕ್ರಮ
16-12-21 ರಂದು ತನಿಖೆ ಆದೇಶ ಹೊರ ಬಿದ್ದ ತಕ್ಷಣ ಪಂಚಾಯತಿ ಪಿಡಿಒ ಸಾಹೇಬರು ಸಾಮಾನ್ಯ ಸಭೆ ಕರೆದು ವಾರ್ಡ್ ಸಭೆ, ಗ್ರಾಮ ಸಭೆ ದಿನಾಂಕ ನಿಗದಿ ಮಾಡದೆ. ಪಿಡಿಒ ಅವರೇ ಸ್ವತಾ ದಿನಾಂಕ ನಿಗದಿ ಮಾಡಿ,23-12-21 ಮತ್ತು 24-12-21 ರಂದು ವಾರ್ಡ್ ಸಭೆ ಮಾಡುತ್ತಾರೆ.
30-12-21 ರಂದು ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಕೋರಮ್ ಇಲ್ಲದ ಗ್ರಾಮ ಸಭೆಯನ್ನು ಮಾಡಿ ಮುಗಿಸಿದ್ದಾರೆ. ಈಗ ನರೇಗ ಕಾಮಗಾರಿಗಳ ಅಕ್ರಗಳನ್ನು ಸರಿ ಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ.ಇನ್ನು ತನಿಖಾದಿಕಾರಿಗಳು ಏನು ಮಾಡುತ್ತಾರೆ ಅನ್ನುವುದನ್ನು ಕಾದು ನೋಡಬೇಕಿದೆ…..?
ವೈ ಎನ್ ಹೊಸಕೋಟೆ ಗ್ರಾಮ ಸಭೆ ಚಿತ್ರಣ
ಪಂಚಾಯತಿ ಗಳಿಗೆ ಬರುತ್ತಿರುವುದು ಕೇಂದ್ರಸರ್ಕಾರದ ಹಣ ಮುಂದೆ ಒಂದು ದಿನ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿರುವ ಹಣ ಕ್ಕೆ ಸರಿಯಾದ ಲೆಕ್ಕ ಕೇಳಬೇಕಲ್ಲವೆ…? ಕೇಳುವಂತೆ ಮಾಡಬೇಕಲ್ಲವೆ….?
ಪಾವಗಡ ತಾಲ್ಲೂಕಿನ 34 ಗ್ರಾಮ ಪಂಚಾಯತಿ ಹಣೆ ಬರಹ ಇದೇ ಆಗಿದೆ, ಪ್ರತಿ ಪಂಚಾಯತಿಯನ್ನು ಬ್ರಹ್ಮಾಂಡ ಬ್ರಷ್ಟಾಚಾರ ನಡೆಯುತ್ತಿದೆ. ತಾಲ್ಲೂಕು ಅಬಿವೃದ್ಧಿ ಅಧಿಕಾರಿ, ಜಿಲ್ಲಾ ಪಂಚಾಯತ್ ಸಿ ಇ ಓ ತಮಗೆ ಏನು ಗೊತ್ತಿಲ್ಲ ವೇನೊ ಎಂಬಂತ್ತೆ ಬ್ರಷ್ಟವ್ಯವಸ್ಥೆಯ ಪೋಷಕರಾಗಿದ್ದಾರೆ.
ವೈ ಎನ್ ಹೊಸಕೋಟೆಯ ದುಸ್ಥಿತಿ ಕೆಲವು ಚಿತ್ರಗಳು