ಪುರಸಭೆ ಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.
ಪಾವಗಡ : ಪಟ್ಟಣದ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯೆ 14ನೇ ವಾರ್ಡಿನ ಪಿ.ಹೆಚ್.ರಾಜೇಶ್ ಅಧ್ಯಕ್ಷರಾಗಿ ಮತ್ತು 3ನೇ ವಾರ್ಡಿನ ಗೀತಾ ಹನುಮಂತರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಪ್ರಕಟಿಸಿದರು.
ಪುರಸಭೆಯ ಅಧ್ಯಕ್ಷ ಸ್ಥಾನವು 14 ತಿಂಗಳುಗಳಿಂದ ಖಾಲಿಯಿದ್ದು, ಇತ್ತೀಚಿಗೆ ಚುನಾವಣಾ ಆಯೋಗ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ಪ್ರಕಟಿಸಿದ್ದು.
ಅಧ್ಯಕ್ಷ ಸ್ಥಾನಕ್ಕೆ ಪಿ ಎಚ್ ರಾಜೇಶ್, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಹನುಮಂತಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದು ಇತರೆಯವರು ನಾಮಪತ್ರ ಸಲ್ಲಿಸದ ಕಾರಣ
ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೇಶ್ ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಹನುಮಂತ ರಾಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿದರು
ಪುರಸಭೆಯಲ್ಲಿ 23 ಸದಸ್ಯರಿದು ಕಾಂಗ್ರೇಸ್ 22 ಜೆ.ಡಿಎಸ್-1, ಸದಸ್ಯರಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ಹೆಚ್.ವಿ. ವೆಂಕಟೇಶ್ ಮಾತನಾಡಿ,
ಮೊದಲಿನಿಂದಲೂ ಪಿ ಎಚ್ ರಾಜೇಶ್ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದು. ರಾಜೇಶ್ ಪುರಸಭಾ ಸದಸ್ಯನಾಗಿ ಮೂರು ಭಾರಿ ಹಾಗೆ ಆಗಿದ್ದರು. ಈ ಬಾರಿ ಅವರಿಗೆ ಪುರಸಭೆಯ ಅಧ್ಯಕ್ಷರಾಗಲು ಅವಕಾಶ ನೀಡಿರುವುದಾಗಿ ತಿಳಿಸಿದರು..
ಪಾವಗಡ ಪಟ್ಟಣದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಸಹ ಅದಕ್ಕೆ ಸ್ಪಂದಿಸಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ನೂತನ ಅಧ್ಯಕ್ಷ ಪಿ.ಹೆಚ್. ರಾಜೇಶ್ ಮಾತನಾಡಿ,
ನನ್ನ ವಾರ್ಡಿನ ಮತಬಾಂಧವರು ಮೂರು ಬಾರಿ ನನ್ನನ್ನು ಪುರಸಭಾ ಸದಸ್ಯರನ್ನಾಗಿ ನೇಮಿಸಿದ್ದಾರೆ.
ನನ್ನ ಕಾರ್ಯವೈಖರಿಯನ್ನು ಗುರುತಿಸಿ ನನಗೆ ಜವಾಬ್ದಾರಿಯುತ ಸ್ಥಾನವಾದ ಪುರಸಭಾ ಅಧ್ಯಕ್ಷರ ಸ್ಥಾನವನ್ನು ಕಲ್ಪಿಸಿಕೊಟ್ಟ ಮಾಜಿ ಸಚಿವರಾದ ವೆಂಕಟರಮಣಪ್ಪ ಮತ್ತು ಶಾಸಕರಾದ ಎಚ್ ವಿ ವೆಂಕಟೇಶ್ ರವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಈಗ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿದ್ದು ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸುದಾಗಿ ತಿಳಿಸಿದರು.ಈ ವೇಳೆ ಪುರಸಭಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಪುರಸಭೆಯ ಎಲ್ಲಾ ಸದಸ್ಯರು ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಜಾಫರ್ ಷರೀಫ,ಆರೋಗ್ಯಾಧಿಕಾರಿ ಷಂಷುದ್ದಾ ಹ, ಕಾಂಗ್ರೇಸ್ ಪಕ್ಷದ ಮುಖಂಡರಾದ ಶಂಕರ ರೆಡ್ಡಿ, ಮಾಜಿ ಪುರಸಭಾ ಆಧ್ಯಕ್ಷ ಗುರ್ರಪ್ಪ, ನಾನಿ, ಕೋಳಿ ಬಾಲಾಜಿ, ಸೇವಾ ನಾಯ್ಕ, ಮಾಜಿ ಪುರಸಭಾ ಅಧ್ಯಕ್ಷ ಅನಿಲ್, ಗೊರ್ತಿ ನಾಗರಾಜ್, ಇನ್ನೂ ಮುಂತಾದ ಪುರಸಭಾ ಸದಸ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.
ವರದಿ. ಶ್ರೀನಿವಾಸಲು. A