weaving eps2135

ಕೋವಿಡ್-19 – ವಿದ್ಯುತ್ ಕೈಮಗ್ಗ ನೇಕಾರರಿಗೆ ಪರಿಹಾರ ಧನ ಘೋಷಣೆ…

Genaral STATE
ಕೋವಿಡ್-19 – ವಿದ್ಯುತ್ ಕೈಮಗ್ಗ ನೇಕಾರರಿಗೆ ಪರಿಹಾರ ಧನ ಘೋಷಣೆ

ಬೆಂಗಳೂರು,  ಜೂನ್ 24  (ಕರ್ನಾಟಕ ವಾರ್ತೆ): ಕೋವಿಡ್-19 ಸಾಂಕ್ರಾಮಿಕ ರೋಗದ 2ನೇ ಅಲೆಯ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರವು ವಿವಿಧ ಚಟುವಟಿಕೆಗಳು/ ಕೈಗಾರಿಕೆಗಳ ಮೇಲೆ ನಿರ್ಬಂಧ ವಿಧಿಸಿದ್ದು, ವಿದ್ಯುತ್ ಮಗ್ಗ ಹಾಗೂ ಪೂರಕ ಚಟುವಟಿಕೆಗಳ ಕೈಗಾರಿಕೆಗಳ ಉದ್ಯೋಗದಲ್ಲಿ ತೊಡಗಿರುವ ವಿದ್ಯುತ್ ಮಗ್ಗ ನೇಕಾರರು/ ಕೆಲಸಗಾರರು ಸಂಕಷ್ಟದಲ್ಲಿರುವುದನ್ನು ಮನಗಂಡು ಪವರ್‍ಲೂಮ್ ಹಾಗೂ ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಕೆಲಸಗಾರರಿಗೆ ತಲಾ ರೂ.3000/- ಗಳಂತೆ ಆರ್ಥಿಕ ಪ್ಯಾಕೇಜ್‍ನ್ನು ಘೋಷಿಸಲಾಗಿದೆ.
ಈ ಯೋಜನೆಯಿಂದ ಸುಮಾರು 1.25 ಲಕ್ಷ ಕೆಲಸಗಾರರಿಗೆ ಅನುಕೂಲವಾಗಲಿದೆ. ಸರ್ಕಾರವು ಈಗಾಗಲೇ ಪರಿಹಾರ ನೀಡಲು ಆದೇಶವನ್ನು ಹೊರಡಿಸಿದ್ದು, ಪವರ್‍ಲೂಮ್ ವಲಯದ ಮತ್ತು ಪ್ರಿ- ಲೂಮ್ ವಲಯದ ಕೆಲಸಗಾರರಿಗೆ ತಲಾ ರೂ.3000/- ಗಳಂತೆ ಪರಿಹಾರಧನ ಪ್ರಸ್ತುತ ಫಲಾನುಭವಿಗಳಿಗೆ ತ್ವರಿತವಾಗಿ ನೇರ ನಗದು ವರ್ಗಾವಣೆ  (ಡಿಬಿಟಿ) ಮೂಲಕ ಪರಿಹಾರ ವಿತರಿಸಲಾಗುವುದು. ಉಳಿದ ಫಲಾನುಭವಿಗಳಿಗೆ ಪರಿಹಾರ ವಿತರಿಸಲು ಆನ್‍ಲೈನ್ ಸೇವಾಸಿಂಧು ಮೂಲಕ ಅರ್ಜಿಗಳನ್ನು ಪಡೆದು ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.