28 6 21 Medicine to THO

ಪಾವಗಡ : “ವೈದ್ಯರ ನಡೆ ಹಳ್ಳಿಯ ಕಡೆ”

DISTRICT NEWS ತುಮಕೂರು
ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಮುಂದುವರಿಕೆ 
 “ವೈದ್ಯರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮ ಇಂದು ಟಿ.ಎನ್.ಪೇಟೆ, ಹುಲಿಬೆಟ್ಟ ತಾಂಡ, ಬೊಮ್ಮತನಹಳ್ಳಿ, ಕುರುಬರಪಾಳ್ಯ, ದ್ಯಾಮಯ್ಯನಪಾಳ್ಯ, ಹನುಮಯ್ಯನಪಾಳ್ಯದಿಂದ ಆರಂಭವಾಯಿತು. ಈ ತಂಡವು ಪಾವಗಡ ತಾಲ್ಲೂಕಿನ ಅತ್ಯಂತ ಹಿಂದುಳಿದ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಹಾಗೂ ಕೋವಿಡ್19ರ ಬಗ್ಗೆ ಎಲ್ಲ ರೀತಿಯ ಮಾಹಿತಿಗಳನ್ನು ನೀಡಲಿದ್ದಾರೆ. ಇದರೊಂದಿಗೆ ವೈದ್ಯಕೀಯ ತಪಾಸಣೆಯನ್ನೂ ಸಹ ನಡೆಸಲಿದ್ದಾರೆ. ಔಷಧೋಪಚಾರಗಳನ್ನು ನೀಡುತ್ತಾ ತಮ್ಮ ಸೇವಾ ಕಾರ್ಯವನ್ನು ಪಾವಗಡ ತಾಲ್ಲೂಕಿನಲ್ಲಿ ಪೂಜ್ಯ ಸ್ವಾಮಿ ಜಪಾನಂದಜೀ ರವರ ಮನವಿಯಂತೆ ಡಾ.ಜಿ.ಪರಮೇಶ್ವರ್ ರವರು ತತ್‍ಕ್ಷಣ ಸ್ಪಂದಿಸಿ ಈ ಯೋಜನೆ ನೆರವೇರುವಂತೆ ಮಾಡಿರುತ್ತಾರೆ. ಪಾವಗಡ ತಾಲ್ಲೂಕಿನ ಆರೋಗ್ಯಾಧಿಕಾರಿಗಳಾದ ಡಾ.ತಿರುಪತಯ್ಯ ಹಾಗೂ ತಾಲ್ಲೂಕು ಪಂಚಾಯಿತಿಯ ಅಧಿಕಾರಿಗಳ ಸಹಕಾರದೊಂದಿಗೆ ಒಂದು ವಾರ ಕಾಲ ಈ ಕಾರ್ಯಕ್ರಮ ನೆರವೇರಲಿದೆ. ಕಾರ್ಯಕ್ರಮದ ವೇಳಾಪಟ್ಟಿ ಈಗಾಗಲೇ ತಯಾರಾಗಿದ್ದು ಅದರಂತೆಯೇ ಪ್ರತಿ ದಿನ ಈ ಭಯಾನಕ ಸ್ಥಿತಿಯಲ್ಲಿ ಸರಿಸುಮಾರು 10 ಜನ ವೈದ್ಯರ ತಂಡ ಗ್ರಾಮಾಂತರ ಪ್ರದೇಶಗಳಿಗೆ ಭೇಟಿ ನೀಡುತ್ತಿದೆ. ಸ್ವಾಮಿ ವಿವೇಕಾನಂದ ಗ್ರಾಮಾಂತರ ಆರೋಗ್ಯ ಕೇಂದ್ರದ ಸಹಕಾರ ಹಾಗೂ ಮಾರ್ಗದರ್ಶನದಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇಂದು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಪೂಜ್ಯ ಸ್ವಾಮಿ ಜಪಾನಂದಜೀ ರವರು ಡಾ.ಜಿ.ಪರಮೇಶ್ವರ್ ರವರ ಈ ಮಹತ್ತರವಾದ ಹಾಗೂ ವಿನೂತನ ಕಾರ್ಯ ಯೋಜನೆ ಪಾವಗಡಕ್ಕೆ ತಲುಪಿರುವುದು ನಿಜಕ್ಕೂ ಅತ್ಯಂತ ಉಪಯೋಗಕರ ಎಂದು ತಿಳಿಸಿದರು. ಈ ಕಾರ್ಯಕ್ರಮದ ಚಾಲನೆಯ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ತಿರುಪತಯ್ಯ ರವರು ಉಪಸ್ಥಿತರಿದ್ದರು. ವೇಳಾಪಟ್ಟಿಯನ್ನು ತಮಗೆ ಮಾಹಿತಿಗಾಗಿ ಲಗತ್ತಿಸಲಾಗಿದೆ.
ಇದೇ ಸಂದರ್ಭದಲ್ಲಿ ಕೋವಿಡ್ ಕೇಂದ್ರಗಳಿಗೆ ಔಷಧಿಗಳನ್ನು ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ಪರವಾಗಿ ಡಾ.ತಿರುಪತಯ್ಯ, ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.