276e1d7a 136a 4c78 aeea 58350d6c81c0

ಪಾವಗಡ : ಪಿಂಚಣಿ ಸಮಸ್ಯೆಗೆ ಪರಿಹಾರ…!

DISTRICT NEWS ತುಮಕೂರು

ವೈಎನ್ ಹೊಸಕೋಟೆ; ಪಿಂಚಣಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳು ದಾಖಲೆಗಳನ್ನು ಸ್ಥಳೀಯ ಗ್ರಾಮ ಸೇವಕರಿಗೆ ನೀಡಬೇಕೆಂದು ಎಂದು ಉಪ ತಹಶೀಲ್ದಾರ್ ಸತ್ಯನಾರಾಯಣ ತಿಳಿಸಿದರು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನುಕಂದಾಯ ಇಲಾಖೆ ವತಿಯಿಂದ ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು
ಮಾತನಾಡಿ ಅರ್ಹ ಫಲಾನುಭವಿಗಳು ದಾಖಲೆಗಳನ್ನು ನಮ್ಮ ಗ್ರಾಮ ಸೇವಕರಿಗೆ ನೀಡಬೇಕು ಅವರೇ ನಿಮ್ಮ ಮಂಜೂರಾತಿ ಪತ್ರವನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತಾರೆ, ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸರ್ಕಾರವು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಸುತ್ತದೆ ಹಾಗೂ ಹಳೆಯ ಪಿಂಚಣಿ ಪದ್ಧತಿಯಿಂದ ಹೊಸ ಪಿಂಚಣಿ ಪದ್ಧತಿಗೆ ಹೋದಾಗ ಹಲವು ಪಿಂಚಣಿ ಸ್ಥಗಿತವಾಗಿರುವ ಫಲಾನುಭವಿಗಳ ಮನೆಗಳಿಗೆ ಗ್ರಾಮ ಸೇವಕರು ಬರುತ್ತಾರೆ ಅವರಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಅಂಚೆ ರಸೀದಿ, ಯ ದಾಖಲೆಗಳನ್ನು ನೀಡಬೇಕು ಪಿಂಚಣಿ ತಮ್ಮ ಖಾತೆಗೆ ಬರುವಂತೆ ಮಾಡುತ್ತಾರೆ ಪಿಂಚಣಿಗೆ ಸಂಬಂಧಪಟ್ಟ ಯಾವುದೇ ಕುಂದು ಕೊರತೆಗಳಿದ್ದರೂ ನಮ್ಮ ಗಮನಕ್ಕೆ ತಂದರೆ ಪರಿಹರಿಸುವುದಾಗಿಎಂದು ಹೇಳಿದರು.

ಕಂದಾಯ ನಿರೀಕ್ಷಕರಾದ ಕಿರಣ್ ಕುಮಾರ್ ಮಾತನಾಡಿ ತಮ್ಮ ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಕೊಟ್ಟು ಸಮಸ್ಯೆಯನ್ನು ಪರಿಹರಿಸಿಕೊಳ್ಳಿ
ಪಿಂಚಣಿ ಅದಾಲತ್ ಮಾಡುವ ಉದ್ದೇಶ ಕಂದಾಯ ಇಲಾಖೆಯಲ್ಲಿ ಇರುವ ಯೋಜನೆಗಳ ಸಂಪೂರ್ಣ ಮಾಹಿತಿ ನೀಡುವುದು ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ಎಂದರು ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಂಗಮ್ಮ ನಾಗರಾಜು ಉದ್ಘಾಟಿಸಿದರು.
ಹೋಬಳಿಯ16 ವೃತ್ತಗಳ ಸುಮಾರು 161 ಪಿಂಚಣಿ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಲೆಕ್ಕಿಗರ ಅಮ್ಜದ್ ಖಾನ್, ಹೊಸಮನೆ, ರವಿ, ಯಮನಪ್ಪ ಗೌಡ ಬಿರಾದಾರ್, ವಿನಯ್ ಕುಮಾರ್, ಶ್ರೀಧರ್, ಬಿಲ್ಲವರ್ ಲಾಲ್ ಶೇಕ್, ಅಂಜನ್ ಮೂರ್ತಿ, 16 ವೃತ್ತದ ಎಲ್ಲಾ ಗ್ರಾಮ ಸೇವಕರು ಹಾಜರಿದ್ದರು.

ವರದಿ:ಸತೀಶ್ ವೈ.ಎನ್.ಹೊಸಕೋಟೆ