IMG 20210907 WA0000

ಪಾವಗಡ : ನೂತನ ಡಿಜಿಟಲ್ ಸೇವಾ ಕೇಂದ್ರ ಆರಂಭ…!

DISTRICT NEWS ತುಮಕೂರು

ನೂತನ ಡಿಜಿಟಲ್ ಸೇವಾ ಕೇಂದ್ರ ಆರಂಭ

ಪಾವಗಡ: ವೈ ಎನ್ ಹೊಸಕೋಟೆಯ ಭೀಮನಕುಂಟೆ ರಸ್ತೆಯಲ್ಲಿ ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ದಿ ಟ್ರಸ್ಟ್ ನ ವತಿಯಿಂದ ನೂತನ ಡಿಜಿಟಲ್ ಸೇವಾ ಕೇಂದ್ರವನ್ನು  ಟ್ರಸ್ಟ್ ನ ಮಾರ್ಗದರ್ಶಕರಾದ ರಾಘವೇಂದ್ರ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಯುವಶಕ್ತಿ ಒಂದಾದಾಗ ಮಾತ್ರ ಬದಲಾವಣೆ ಸಾಧ್ಯ. ನಾವು ಡಿಜಿಟಲ್ ಯುಗದಲ್ಲಿ ಇದ್ದೇವೆ. ಹಳ್ಳಿಯಲ್ಲಿ ನಡೆಯುವ ವಿಷಯವು ಸಾಮಾಜಿಕ ಜಾಲತಾಣಗಳ ಮೂಲಕ ದೇಶದಲ್ಲಿ ಸದ್ದು ಮಾಡುತ್ತದೆ. ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ನಿಮ್ಮ ಸೇವೆಗೆ ನಿರಂತರವಾಗಿ ನಿಮ್ಮ ಜೊತೆಯಲ್ಲಿ ಇರುತ್ತದೆ. ಮುಂಬರುವ ದಿನಗಳಲ್ಲಿ ನಮ್ಮ ಟ್ರಸ್ಟ್ ನಲ್ಲಿ ಜನತೆಗೆ ಸಹಕಾರಿ ಆಗುವ ಹಲವು ಯೋಜನೆಗಳನ್ನು ರೂಪಿಸುವುದು ನಮ್ಮ ಮುಂದಿದೆ. ನಮ್ಮ ಮೇಲೆ ಮತ್ತು ನಮ್ಮ ಟ್ರಸ್ಟ್ ನ ಮೇಲೆ ಹೆಚ್ಚಿನ ರೀತಿಯಲ್ಲಿ ಜನತೆಯ ಸಹಕಾರ ನೀಡ ಬೇಕಾಗಿದೆ.

ಈ ಕೇಂದ್ರದಲ್ಲಿ ರಿಯಾಯಿತಿ ಧರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಇಲಾಖೆಗಳ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜಾತಿ ಮತ್ತು ವರಮಾನ, ಪಹಣಿ, ಸಂಧ್ಯಾಸುರಕ್ಷಾ, ವಿಧವಾ ವೇತನ ಸೇರಿದಂತೆ ವಿವಿದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಇದೆ ಎಂದರು.

ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಹಾಗೂ ಮಹಾತ್ಮ ಗಾಂಧೀಜಿ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು

ಟ್ರಸ್ಟ್ ನ ಸ್ಥಳೀಯ ಪದಾಧಿಕಾರಿಗಳು ಮಾರ್ಗದರ್ಶಕರಾದ ಎಸ್.ಆರ್.ರಾಘವೇಂದ್ರ ರವನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಓಬಳೇಶಪ್ಪ, ನಾಗರಾಜಪ್ಪ, ಜಿ ಪಂ ಮಾಜಿ ಸದಸ್ಯರಾದ ಪೂಜಾರಿ ಚೌಡಪ್ಪ, ಡಾ: ರಾಮಾಂಜಿನೇಯ, ತಿಪ್ಪೇಸ್ವಾಮಿ, ಬಿ ಹೊಸಹಳ್ಳಿ ನಾಗರಾಜ್,ಚಿಕ್ಕಜಾಲೊಡು ತಿಪ್ಪೇಸ್ವಾಮಿ, ಹನುಮಂತರಾಯಪ್ಪ,  ನಂದೀಶ್, ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಶಶಾಂಕ್ , ಪದಾಧಿಕಾರಿಗಳಾದ ಕಲ್ಪನಾ, ಹರಿನಾಥ್, ಸುಧೀರ್, ಚನ್ನಕೇಶವ, ಪ್ರಕಾಶ್, ಭರತ್, ಲಕ್ಷ್ಮಣಮೂರ್ತಿ, ಚಂದ್ರಮೌಳಿ, ವಿಶ್ವ, ವೆಂಕಟೇಶ್, ದೇವರಾಜ್,ಇನ್ನು ಮುಂತಾದವರು ಹಾಜರಿದ್ದರು.