IMG 20230208 WA0062

ಪಾವಗಡ: ನರೇಗಾ ಯೋಜನೆಯಲ್ಲಿ ಅವ್ಯವಹಾರ,ಪ್ರತಿಭಟನೆ

DISTRICT NEWS ತುಮಕೂರು

ನರೇಗಾ ಯೋಜನೆಯಲ್ಲಿ ಅವ್ಯವಹಾರ,ಪ್ರತಿಭಟನೆ

 .

ಪಾವಗಡ: ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ನರೇಗಾದಲ್ಲಿ  ಅವ್ಯವಹಾರವಾಗಿದೆ ಎಂದು ತಾಲೂಕಿನ ಕನ್ನಮೇಡಿ ಗ್ರಾಮ ಪಂಚಾಯಿತಿ ಕಚೇರಿ ಬಳಿ ಕೂಲಿ ಕಾರ್ಮಿಕರು ಬುಧುವಾರ ಧರಣಿ ಸತ್ಯಾಗ್ರಹ ನಡೆಸಿದರು. 

  ನರೇಗಾ ಯೋಜನೆ ಅಡಿ ಕೆಲಸ ಮಾಡಿದ ತಮಗೆ ಇದುವರೆಗೂ ತಮ್ಮ ಖಾತೆಗೆ ಕೂಲಿ ಹಣ ಸಂದಾಯವಾಗಿಲ್ಲ, ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉತ್ತರ ನೀಡುತ್ತಿಲ್ಲ ಎಂದು, ಕಾರ್ಮಿಕರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿರು.

ನರೇಗಾ ಯೋಜನೆಯ ಅಡಿ ಪ್ರಭಾವಿಗಳಿಗೆ   ವಿವಿಧ ಕಾಮಗಾರಿಗಳನ್ನು ಹಾಕಿ ಕೊಡಲಾಗುತ್ತಿದೆ. ಆದರೆ ಬಡವರು ಜನಸಾಮಾನ್ಯರಿಗೆ ಕೆಲಸ ಮಾಡಿದ ಕೂಲಿಯನ್ನು ಸಹ ಖಾತೆಗೆ ಹಾಕದೆ ವಂಚಿಸುತ್ತಿದ್ದಾರೆ, ಎಂದು ಆಕ್ರೋಶವನ್ನು ಹೊರಹಾಕಿದರು. 

ಇಷ್ಟೊಂದು ಸಮಸ್ಯೆಗಳಿದ್ದರೂ ತಾಲೂಕು ಪಂಚಾಯಿತಿಯು ಗಾಡನಿದ್ರೆಯಲ್ಲಿದೆ, ಎಂದು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ, 

ಕರ ವಸೂಲಿಗಾರ, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಮಧ್ಯಾಹ್ನವಾದರೂ ಯಾರೊಬ್ಬರೂ ಕಚೇರಿಗೆ ಆಗಮಿಸುತ್ತಿಲ್ಲ. 

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕಾಲದಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂದು ದೂರಿದರು.

ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಂಡು ತಮ್ಮ ಕೂಲಿಯ ಹಣ ಖಾತೆಗೆ ಹಾಕಿಸಿಕೊಡುವಂತೆ ಕಾರ್ಮಿಕರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಮಟೆ ಸಂಸ್ಥೆಯ ತಾಲ್ಲೂಕು ಸಂಚಾಲಕ ಗಂಗರಾಜು, ವೆಂಕಟೇಶ್, ರಾಮಕೃಷ್ಣ, ಲತಾ, ಕೊತ್ತೂರು ಮಮತಾ, ಕೂಲಿ ಕಾರ್ಮಿಕರಾದ ನಾರಾಯಣಪ್ಪ, ಅನಿತಾ, ಪೂಜಾರಪ್ಪ, ಹನುಮಕ್ಕ, ಗ್ರಾಮಸ್ಥರು ಉಪಸ್ಥಿತರಿದ್ದರು.