IMG 20230209 WA0002

ಕೊರಟಗೆರೆ: ಸರ್ಕಾರಿ ಶಾಲಾ ಮಕ್ಕಳ ದುಸ್ಥಿತಿ….!

DISTRICT NEWS ತುಮಕೂರು

ಕೊರಟಗೆರೆ : ಶಾಲಾ ವಿಧ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ವಿದ್ಯಾರ್ಥಿವೇತನ , ಸಮವಸ್ತ್ರ. ಹಾಗೂ ಷೂಗಳನ್ನು ವಿತರಿಸಲು ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ .ಎಂದು ಕೊರಟಗೆರೆ ಶಾಸಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆರೋಪಿಸಿದರು.

ಅವರು ತಾಲೂಕಿನ ಪುರವರ ಹೋಬಳಿಯ ರಘುನಹಳ್ಳಿಯಲ್ಲಿ 14 ಲಕ್ಷ ರೂ ವೆಚ್ಚದ ಶಾಲಾ ಕಟ್ಟಡ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ಮಾಡಿ ಮಾತನಾಡಿದರು.

ಇತ್ತೀಚೆಗೆ ಕೇಂದ್ರ ಸರಕಾರ ಮಂಡಿಸಿದ ಬಜೆಟ್ ದೇಶದ ಜನರಿಗೆ ಪೂರಕವಾಗಿಲ್ಲ .ಮತ್ತೊಂದು ಬಜೆಟ್ ಮಂಡಿಸುವ ಅವಕಾಶವಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರಕ್ಕೆ ಬಹುಮತವಿದೆ ಆದರೆ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿಲ್ಲ.

ದೇಶದಲ್ಲಿ14 ರಾಜ್ಯಗಳು ಸೇರಿದಂತೆ ರಾಜ್ಯದಲ್ಲಿನ 1 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದಿಂದ ದೊರೆಯ ಬೇಕಾದ ಸವಲತ್ತುಗಳು ಸಕಾಲಕ್ಕೆ ದೊರೆಯುತ್ತಿಲ್ಲ. ಎಸ್ ಇ ಪಿ , ಟಿ ಎಸ್ ಪಿ. ಯೋಜನೆಗಳ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ , ಲೋಕೋಪಯೋಗಿ ಇಲಾಖೆಯಲ್ಲಿ ಸುಮಾರು 25ಸಾವಿರ ಕೋಟಿ ರೂಗಳು ಬಿಲ್ ಗಳು ಬಾಕಿ ಇವೆ ಎಂದು. ಗುತ್ತಿಗೆದಾರರ ಸಂಘನೆ ಆರೋಪಿಸಿದೆ. ಹಾಗಾದರೆ ಸರಕಾರದ ಅಷ್ಟೊಂದು ದೊಡ್ಡ ಮೊತ್ತ ಎಲ್ಲಿಗೆ ಹೋಯಿತು.

ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಎಸ್ ಇಪಿ .
ಮತ್ತು ಟಿ ಎಸ್ ಪಿ. ಯೋಜನೆಯ ಕಾನೂನನ್ನು ಜಾರಿಗೆ ತರಲಾಗಿತ್ತು. ರಾಜ್ಯದ ಒಟ್ಟು ಬಜೆಟ್ ನಲ್ಲಿ ಎರಡು ಸಮುದಾಯದವರಿಗೆ ಒಟ್ಟು 2.65 ಸಾವಿರ ಕೋಟಿ ರೂ ಗಳು ನಿಗಧಿಪಡಿಸಿದೆ .ಅದರಂತೆ ಶೇ.24 ರಷ್ಟು ವಿಶೇಷ ಅನುದಾನವನ್ನು ನೀಡಲೇ ಬೇಕು ಆದರೆ ಈ ಬಿಜೆಪಿ ಸರಕಾರ ಎರಡು ಸಮುದಾಯದವರಿಗೆ ನೀಡಬೇಕಾದ ಒಟ್ಟು 42 ಸಾವಿರ ಕೋಟಿ ರೂಗಳ ಅನುದಾನದಲ್ಲಿ ಈಗ 28 ಸಾವಿರ ಕೋಟಿ ರೂಗಳ ಪೈಕಿ ಸಾಮಾಜಿಕ ಅಭಿವೃದ್ಧಿ ಕಾಮಗಾರಿಗಳ ಅನುದಾನಕ್ಕಾಗಿ 8 ಸಾವಿರ ಕೋಟಿ ರೂಗಳನ್ನು ತೆಗೆದು ಎಲ್ಲಾ ಕೆಲಸ ಕಾರ್ಯಗಳನ್ನು ಉಳಿದ ಅನುದಾನದಲ್ಲಿಯೇ ಮಾಡಿಕೊಳ್ಳಿ ಎಂದು ಹೇಳುತ್ತಿರುವುದು ಸರಿಯೇ. ನಮಗೆ ಹೆಚ್ಚು ಹಣ ಒದಗಿಸುವಂತೆ ಸಿದ್ದರಾಮಯ್ಯ ಹಾಗೂ ನಾವುಗಳೆಲ್ಲಾರೂ ಸೇರಿ ಸದನದಲ್ಲಿ ಒತ್ತಾಯಿಸಿದ್ದೇವೆ .

ನಮ್ಮ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 13.5 ಸಾವಿರ ಕೋಟಿ ರೂಗಳಲ್ಲಿ ಎತ್ತಿನಹೊಳೆ ಯೋಜನೆಗೆ ಹಣ ನಿಗಧಿ ಮಾಡಲಾಗಿತ್ತು. ಆದರೆ ವರುಷಗಳು ಕಳೆದಂತೆ ಇದೇ ಕಾಮಗಾರಿಗಾಗಿ ವರ್ಷಕ್ಕೆ ಹೆಚ್ಚುವರಿಯಾಗಿ ಶೇ.15 ರಷ್ಟು ಹಣವನ್ನು ಭರಿಸುತ್ತಿರುವುದರಿಂದ. ಈಗ ಇದೇ ಯೋಜನೆಗೆ 20 ಸಾವಿರ ಕೋಟಿ ರೂಗಳು ತಲುಪಿದೆ. ಕಳೆದ ವರ್ಷ ಇದೇ ಬಿಜೆಪಿಯ ಸರಕಾರದವರು 500 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದು ಕಾಮಗಾರಿ ಪೂರ್ಣ ಗೊಳಿಸಲು ಸಾಧ್ಯವಾಗಲಿಲ್ಲ. ನಮ್ಮ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಂಡಿದ್ದರೆ ಸುಮಾರು 2.5 ಸಾವಿರ ಕೋಟಿ ರೂ ಗಳು ಉಳಿತಾಯವಾಗುತ್ತಿತ್ತು.

ಈ ಬಾರಿಯ ಬಜೆಟ್ ನಲ್ಲಿ ಸುಮಾರು 5 ಸಾವಿರ ಕೋಟಿ ರೂಗಳನ್ನು ನಿಗಧಿಪಡಿಸಿ ಕಾಮಗಾರಿ ಗಳು.ಪೂರ್ಣಗೊಳಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ. ನಾನು ಮಧುಗಿರಿಯ ಶಾಸಕನಾಗಿದ್ದಾಗ ತುಮಕೂರು ರಾಯದುರ್ಗಾ ರೈಲ್ವೆ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ ಕಾಮಗಾರಿಗಾಗಿ ಜಮೀನು ವಶಪಡಿಸಿಕೊಳ್ಳಲು ಅನುದಾನದ ಕೊರತೆ ಎದುರಾಗಿತ್ತು ಈಗ ಈ ಯೋಜನೆಗಾಗಿ ಸುಮಾರು 6.700ಕೋಟಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಿಗೆ
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಗಾಗಿ ಅಧಿಕಾರದಲ್ಲಿರುವ ಇವರು ಕಳೆದ ಎರಡು ಮೂರು ವರ್ಷಗಳ ಹಿಂದೆಯೇ ಸುಮಾರು 10 ಸಾವಿರ ಕೋಟಿ ರೂಗಳನ್ನು ಹಣ ಬಿಡುಗಡೆ ಮಾಡಿದ್ದರೆ ಇಷ್ಟೊತ್ತಿಗೆ ಆ ಕಾಮಗಾರಿಯೇ ಮುಗಿದು ಹೋಗುತ್ತಿತ್ತು .ಈ ಸರಕಾರದವರು ನೀರಾವರಿಗೆ ಹೆಚ್ಚಾಗಿ ಆದ್ಯತೆ ನೀಡುತ್ತಿಲ್ಲ .ಚುನಾವಣೆಯ ದೃಷ್ಟಿಯಿಂದ 5.300 ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದಾರೆಂದರು.

ಎತ್ತಿನ ಹೊಳೆ ಯೋಜನೆಯ ಅಂಗವಾದ ಬಫರ್ ಡ್ಯಾಂ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿಲ್ಲ ಆ ಯೋಜನೆಯಲ್ಲಿ ಸ್ವಲ್ಪ ಮಟ್ಟಿಗೆ ನವೀಕರಣ ಮಾಡಲಾಗುತ್ತಿದೆ ಅಷ್ಟೇ , ಇಲ್ಲಿನ ಜನರು ನನ್ನನ್ನು 35 ವರ್ಷಗಳಿಂದ ಬಲ್ಲವರಾಗಿದ್ದಾರೆ ಬರುವ ವಿಧಾನ ಸಭೆಯ ಚುನಾವಣೆಯು ನನಗೇನು ಕಷ್ಟಕರವಾಗಿಲ್ಲ ಈ ಬಗ್ಗೆ ಚುನಾವಣೆ ಘೋಷಣೆಯಾದಾಗ ಉತ್ತರ ನೀಡುತ್ತೇನೆ.

ಕ್ಷೇತ್ರದ ಜನರು ನನಗೆ ಕೊಟ್ಟ ಅಧಿಕಾರದ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ
ನಮ್ಮ ಕೊರಟಗೆರೆ ತಾಲೂಕಿನ 36 ಪಂಚಾಯತಿಗಳ ಪ್ರತಿ ಮನೆ ಮನೆಗೆ ಈ ಪುಸ್ತಕಗಳನ್ನು ತಲುಪಿಸಿ ಪಾರದರ್ಶಕವಾಗಿ ನಡೆದಿರುವ ಕೆಲಸ ಕಾರ್ಯಗಳ ಬಗ್ಗೆ ಜನರಿಗೆ ಲೆಕ್ಕ ಕೊಡುವ ಕಾರ್ಯವನ್ನು ಮಾಡುತ್ತಿದ್ದೆನೆಂದರು.

ಮುಖಂಡರಾದ ಭೈರಪ್ಪ , ಆಶ್ವಥನಾರಾಯಣ ರಮಾಬಾಯಿ , ನಿವೃತ ಶಿಕ್ಷಕ ನಾಗರಾಜು , ರಘುನಹಳ್ಳಿ ಸೋಮಣ್ಣ , ಹಾಗೂ ಇಸಿಓ ಕಾಂತಮ್ಮ. ಗೊಂದಿಹಳ್ಳಿ , ರಘುವನಹಳ್ಳಿಯ ಗ್ರಾಮಸ್ಥರು ಇದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯ ಲ್ಕೂರು