IMG 20210908 WA0032

ಯಲಹಂಕ: ಬೃಹತ್ ಲಸಿಕಾ ಕೇಂದ್ರ ಆರಂಭ….!

Genaral STATE

ಬೆಂಗಳೂರು:-  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಿರುವ “ಬೃಹತ್ ಲಸಿಕಾ ಕೇಂದ್ರ”ಕ್ಕೆ ಮಾನ್ಯ ಮುಖ್ಯ ಆಯುಕ್ತರು ಶ್ರೀ ಗೌರವ್ ಗುಪ್ತ ರವರು,, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಸ್ಥಳೀಯ ಶಾಸಕ ಎಸ್.ಆರ್.ವಿಶ್ವನಾಥ್ ರವರು ಇಂದು ಚಾಲನೆ ನೀಡಿದರು..

ಈ ವೇಳೆ ಯಲಹಂಕ ವಲಯ ಜಂಟಿ ಆಯುಕ್ತರು ಡಾ. ಅಶೋಕ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು..*

ಬಿಬಿಎಂಪಿ ಮತ್ತು ಕೇರ್ ಇಂಡಿಯಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ಸಾರ್ವಜನಿಕರಲ್ಲಿ ಕೋವಿಡ್ -19 ಸೋಂಕನ್ನು ತಡೆಗಟ್ಟುವ ಸಲುವಾಗಿ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆಗಳನ್ನು ನೀಡಲು ಬೃಹತ್ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ..

ಈ ಪೈಕಿ ಇಂದು ಯಲಹಂಕ ವಲಯದಲ್ಲಿ ಯಲಹಂಕ ಎನ್.ಇ.ಎಸ್ ವೃತ್ತದ ಬಳಿಯಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಿರುವ ‘ಬೃಹತ್ ಲಸಿಕಾ ಕೇಂದ್ರ’ವು ಕಾರ್ಯಾರಂಭಗೊಂಡಿದೆ..

*ಬೃಹತ್ ಲಸಿಕಾ ಕೇಂದ್ರದ ಪ್ರಮುಖ ಅಂಶಗಳು:*
1..*ವಾಕ್ ಇನ್ ವ್ಯವಸ್ಥೆ:*
• *ನೋಂದಣಿ(ಉಚಿತ ಲಸಿಕಾ ಕರಣ):* ವಿಶೇಷವಾಗಿ ಹಿರಿಯ ನಾಗರೀಕರಿಗೆ, ಮಹಿಳೆಯರಿಗೆ ಮತ್ತು ವಿಶೇಷ ಚೇತನರಿಗೆ ಲಸಿಕೆಯನ್ನು ಪಡೆಯುವ ಸಲುವಾಗಿ ನೋಂದಣಿ ಮಾಡಿಸಲು ಪಿಂಕ್ ಕೌಂಟರ್ ವ್ಯವಸ್ಥೆ ಮಾಡಲಾಗಿರುತ್ತದೆ.‌ ಅಂಗವಿಕಲರಿಗಾಗಿ ವೀಲ್ ಛೇರ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿರುತ್ತದೆ..
*ಲಸಿಕಾಕರಣ* ಜನದಟ್ಟನೆಯನ್ನು ತಡೆಗಟ್ಟಲು 4 ಲಸಿಕಾ ಬೂತ್ ಗಳನ್ನು ತೆರೆಯಲಾಗಿರುತ್ತದೆ. ಪಾಲಿಕೆಯ ಇತರೆ ಲಸಿಕಾ ಕೇಂದ್ರಗಳಿಗೆ ಹೊರತುಪಡಿಸಿದರೆ, ಬೃಹತ್ ಲಸಿಕಾ ಕೇಂದ್ರದಲ್ಲಿ ಅರ್ಹತೆ ಹೊಂದಿರುವ ಎಲ್ಲಾ ಫಲಾನುಭವಿಗಳಿಗೂ ಲಸಿಕೆಯನ್ನು ನೀಡಲಾಗುವುದು. ಹಾಗೂ ಗರ್ಭಣಿಯರಿಗೆ ಹಾಗೂ ಬಾಣಂತಿಯರಿಗೂ ಸಹ ಕೋವಿಡ್ ಲಸಿಕೆಯನ್ನು ನೀಡಲಾಗುವುದು..
*•ಲಸಿಕಾ ವ್ಯವಸ್ಥೆ..*
ಕೋವಿಡ್ ಲಸಿಕೆಯನ್ನು ಪಡೆದ ಫಲಾನುಭವಿಗಳಿಗೆ ಕಾಯುವ ಕೊಠಡಿಯಿದ್ದು, ಈ ವೇಳೆ ಲಸಿಕೆಯಿಂದ ಏನಾದರೂ ಪರಿಣಾಮ ಉಂಟಾಗುವ ಸಂಭವವಿದ್ದಲ್ಲಿ ಇಂತಹವರಿಗೆ ಚಿಕಿತ್ಸೆ ಹಾಗೂ ಆರೈಕೆಯನ್ನು ನೀಡುವ ಸಲುವಾಗಿ ವೈದ್ಯಾಧಿಕಾರಿಗಳನ್ನು ನೇಮಿಸಲಾಗಿರುತ್ತದೆ..
2‌…*ನೇರವಾಗಿ ಲಸಿಕೆ ಪಡೆಯುವ ವ್ಯವಸ್ಥೆ:*
ತಮ್ಮ ವಾಹನಗಳೊಂದಿಗೆ ಲಿಸಕಾ ಕೇಂದ್ರದ ಸ್ಥಳಕ್ಕೆ ಭೇಟಿ ಲಸಿಕೆ ಪಡೆಯಲು ಇಚ್ಛಿಸುವ ಫಲಾನುಭವಿಗಳಿಗೆ ಪ್ರತ್ಯೇಕ ಕೌಂಟರ್ ಸ್ಥಾಪಿಸಲಾಗಿದ್ದು, ವಾಹನಗಳಲ್ಲಿ ಕೋವಿಡ್ ಲಸಿಕೆ ಪಡೆಯುವಂತವರು ಅವರವರ ವಾಹನಗಳಲ್ಲಿಯೇ ನೋಂದಣಿ, ಪರಿಶೀಲನೆ ಮತ್ತು ಲಸಿಕೆಯನ್ನು ಪಡೆಯಬಹುದು.. ಲಸಿಕೆ ಪಡೆದ ನಂತರ ನಿಗದಿತ ಪಾರ್ಕಿಂಗ್ ಸ್ಥಳದಲ್ಲಿ 30 ನಿಮಿಷಗಳ ಕಾಲ ಕಾಯಬಹುದು..
3..*ಇತರೆ ಸೌಲಭ್ಯಗಳು:*
• ** ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ.
•** ಗೊಂದಲ ರಹಿತ ಮತ್ತು ಸರತಿ ಸಾಲಿನಲ್ಲಿ ಕಾಯದೆ ತ್ವರಿತವಾಗಿ ಲಸಿಕೆ ಪಡೆಯುವ ವ್ಯವಸ್ಥೆ..
•** ಸೆಲ್ಪಿ ಮತ್ತು ಪೋಟೋ ಕಾರ್ನರ್ ವ್ಯವಸ್ಥೆ..
•**ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ವಿಡಿಯೋ ಮತ್ತು ಪೋಸ್ಟರ್‌ಗಳ ಅಳವಡಿಕೆ..
•**ಲಸಿಕೆ ಪಡೆದ ನಂತರ ಫಲಾನುಭವಿಗಳಿಗೆ ಕೋವಿನ್ ಪೋರ್ಟಲ್‌ನಿಂದ ಡಿಜಿಟಲ್ ಪ್ರಮಾಣವನ್ನು ನೀಡಲಾಗುವುದು..
*ಪಾಲಿಕೆ ವ್ಯಾಪ್ತಿಯಲ್ಲಿರುವ 3ಬೃಹತ್ ಲಸಿಕಾ ಕೇಂದ್ರಗಳ ವಿವರ ಕೆಳಗಿನಂತಿದೆ,,,,,,:*
1..ಡಾ.B.R.ಅಂಬೇಡ್ಕರ್ ಭವನ, ಯಲಹಂಕ ವಲಯ..
2.. ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ಹಿಂಭಾಗ, ಪೂರ್ವ ವಲಯ.
3.. ಯಂಗ್ ಸ್ಟರ್‌ ಕಬ್ಬಡಿ ಕ್ಲಬ್ ಮೈದಾನ, ಮಲ್ಲೇಶ್ವರ, ಪಶ್ಚಿಮ ವಲಯ..