ಇಂಜಿನಿಯರ್ ದಿನಾಚರಣೆ ಅಂಗವಾಗಿ ಹೆಲ್ಪ್ ಸೊಸೈಟಿ ವತಿಯಿಂದ ಇಂಜಿನಿಯರ್ ಗಳಿಗೆ ಸನ್ಮಾನ
ಪಾವಗಡ ರಸ್ತೆ ಗುಂಡಿಗಳು ಸರಿಪಡಿಸುವಂತೆ ಮನವಿ
ಪಾವಗಡಸೆ 15 : ಮೈಸೂರಿನ ಪ್ರಖ್ಯಾತ ಜಾಲಸಾಗರ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿಸಿದ ಹಾಗೂ ದೇಶಕಂಡ ಶ್ರೇಷ್ಠ ಇಂಜಿನಿಯರ್ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಜನ್ಮದಿನ ಅಂಗವಾಗಿ ಇವರ ಜನ್ಮದಿನವನ್ನು ಇಂಜಿನಿಯರ್ ಗಳ ದಿನವೆಂದು ಆಚರಿಸಿ ಇಂಜಿನಿಯರ್ ಗಳನ್ನು ಗುರುತಿಸಿ ಸನ್ಮಾನಿಸುತ್ತಿರುವ ಹೆಲ್ಪ್ ಸೊಸೈಟಿ ಸೇವೆಗೆ ಅಭಾರಿ ಎಂದು ಪಾವಗಡ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಅನಿಲ್ ಕುಮಾರ್ ತಿಳಿಸಿದರು.
ಪಾವಗಡ ಪಟ್ಟಣದ ಪೆನುಕೊಂಡ ರಸ್ತೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ರವರ ಕಚೇರಿಯಲ್ಲಿ ಇಂಜಿನಿಯರ್ ಗಳಿಗೆ ಶಾಲು ಹೊದಿಸಿ ಸರಳ ಸನ್ಮಾನ ಮಾಡಿ ಮಾತನಾಡಿದ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರಾಷ್ಟ್ರ ಕಂಡ ಶ್ರೇಷ್ಠ ಇಂಜಿನಿಯರ್ ವಿಶ್ವೇಶ್ವರಯ್ಯ ನವರನ್ನು ನೆನಪಿಸಿಕೊಳ್ಳುವಂತ ಸುಸಂದರ್ಭ ಜನ್ಮದಿನ ಆಚರಿಸುತ್ತಿರುವುದು ಹೆಲ್ಪ್ ಸೊಸೈಟಿ ತಂಡಕ್ಕೆ ಹೆಮ್ಮೆ ಪಡುವಂತಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಾದ ಸಿರಾ ರಸ್ತೆ, ಪೇನುಕೊಂಡ ರಸ್ತೆ, ತುಮಕೂರು ರಸ್ತೆ ಗುಂಡಿಗಳಿಂದ ಕೂಡಿದ್ದು ಇದರಿಂದ ವಾಹನಗಳ ಅಪಘಾತ ವಾಗುತ್ತಿದ್ದು ಈ ಕೂಡಲೇ ಗುಂಡಿಗಳಿಗೆ ಜಲ್ಲಿ ಮತ್ತು ಡಾಂಬರು ಹಾಕಿ ಸರಿಪಡಿಸುವಂತೆ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜ, ಗೌತಮ್ ಮೂರ್ತಿ ಬೀಮಾ, ಸಾಯಿ, ಇನ್ನು ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಹಾಜರಿದ್ದರು
ವರದಿ: ಸತೀಶ್