IMG 20220207 WA0002

ಪಾವಗಡ:ಪಿಂಚಣಿ ಅದಾಲತ್

DISTRICT NEWS ತುಮಕೂರು

ಪಿಂಚಣಿ ಅದಾಲತ್

ವೈ.ಎನ್.ಹೊಸಕೋಟೆ: ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ನೀಡಿ ಪಿಂಚಣಿ ಸೌಲಭ್ಯ ಪಡೆಯಿರಿ ಎಂದು
ಗ್ರೇಟ್-2 ತಹಶೀಲ್ದಾರ್ ಬಿ.ಸುಮತಿ ತಿಳಿಸಿದರು.

ಹೋಬಳಿಯ ದೊಡ್ಡ ಹಳ್ಳಿ ಗ್ರಾಮದಲ್ಲಿ ಶನಿವಾರ ಶ್ರೀವರದ ಆಂಜನೇಯ ಸ್ವಾಮಿ ದೇವಾಲಯ ಆವರಣದಲ್ಲಿ ನಡೆದ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಾಗಲೇ ಪಿಂಚಣಿ ಸೌಲಭ್ಯವನ್ನು ಪಡೆದಿದ್ದು ತಾಂತ್ರಿಕ ಕಾರಣಗಳಿಂದ ಸ್ಥಗಿತವಾಗಿದ್ದ ರೆ ತಮ್ಮ ಪಿಂಚಣಿ ಆದೇಶ ಪತ್ರ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ನಕಲನ್ನು ನಾಡಕಚೇರಿ ಅಥವಾ ಗ್ರಾಮ ಲೆಕ್ಕಿಗರು ದಾಖಲೆಗಳನ್ನು ಸಲ್ಲಿಸಿ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಪಿಂಚಣಿಯ ಫಲಾನುಭವಿಗಳಿಗೆ ಒಟ್ಟು 70 ಜನರಿಗೆ ಆದೇಶ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಿಂಚಣಿ ಸೌಲಭ್ಯ ಕೋರಿ ಸುಮಾರು 45 ಅರ್ಜಿಗಳನ್ನು ಅಧಿಕಾರಿಗಳಿಗೆ ಸಲ್ಲಿಸಲಾಯಿತು

ಕಾರ್ಯಕ್ರಮದಲ್ಲಿ ಉಪ ತಹಸಿಲ್ದಾರ್ ಸತ್ಯನಾರಾಯಣ, ಚಿಕ್ಕ ಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವೆಂಕಟರಮಣಪ್ಪ, ಪಿಡಿಒ ಅಕ್ಕಲಪ್ಪ,
ರಾಜಸ್ವ ನಿರೀಕ್ಷಕರಾದ ಕಿರಣ್ ಕುಮಾರ್,
ಗ್ರಾಮ ಲೆಕ್ಕಿಗರದ ಅಮ್ಜದ್ ಅಲಿ ಖಾನ್ ,
ಅಂಜನಮೂರ್ತಿ, ಶ್ರೀಧರ್, ಮಧುಕುಮಾರ್, ದಿಲವರ್ ಲಾಲ್ ಶೇಕ್, ಗ್ರಾಮ ಸೇವಕರು ಹಾಜರಿದ್ದರು.