ಸಮಾಜವನ್ನು ತಿದ್ದುವಲ್ಲಿ ಪತ್ರಕರ್ತರ ಕೆಲಸ ಶ್ಲಾಘನೀಯ. ಶಾಸಕ ವೆಂಕಟರಮಣಪ್ಪ……..…..
ಪಾವಗಡ.. ಇಂದು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಪತ್ರಿಕಾ ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಶಾಸಕ ವೆಂಕಟರಮಣಪ್ಪ ಮಾತನಾಡುತ್ತಾ, ಪತ್ರಕರ್ತರು ಕ್ರಿಯಾಶೀಲರಾಗಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜ ವ್ಯವಸ್ಥೆಯಲ್ಲಿನ ಹಲವಾರು ಲೋಪದೋಷಗಳನ್ನು ಸರಿಪಡಿಸಬಹುದು ಎಂದರು. ಸಮಾಜವನ್ನು ತಿದ್ದುವಲ್ಲಿ ಪತ್ರಕರ್ತರ ಕೆಲಸ ಶ್ಲಾಘನೀಯ, ಅಧಿಕಾರಿಗಳು ಜನಪ್ರತಿನಿಧಿಗಳು ಹಾಗೂ ಸಮಾಜದಲ್ಲಿನ ಇತರೆ ವರ್ಗಗಳ ಜನರ ತಪ್ಪುಗಳನ್ನು ತಿದ್ದಿ ಸರಿಪಡಿಸುವ ಕೆಲಸ ಮಾಧ್ಯಮದವರದಾಗಿದೆ ಎಂದರು. ಪತ್ರಕರ್ತರು ಪ್ರಾಮಾಣಿಕತೆ, ಪಾರದರ್ಶಕತೆ, ನಿಷ್ಪಕ್ಷಪಾತವಾಗಿ ವರದಿಗಳನ್ನು ಮಾಡಬೇಕು ಆಗ ಮಾತ್ರ ಜನರಿಗೆ ಮಾಧ್ಯಮದ ಬಗ್ಗೆ ಗೌರವ ಮೂಡುತ್ತದೆ ಎಂದರು. ಆದರೆ ತಾಲೂಕಿನಲ್ಲಿ ಎರಡು ಮೂರು ಸಂಘಗಳಿವೆ ಎಲ್ಲರೂ ಒಂದೇ ಸಂಘದಲ್ಲಿ ಕಾರ್ಯನಿರ್ವಹಿಸಿ ಭಿನ್ನಾಭಿಪ್ರಾಯ ಮರೆತು ಸಂಘಟಿತರಾಗಬೇಕು ಎಂದರು. ನಂತರ ಜಪಾನಂದ ಸ್ವಾಮೀಜಿ ಮಾತನಾಡುತ್ತಾ,. ಪತ್ರಿಕಾ ಸಂಸ್ಥೆಗಳು ವರದಿಗಾರರನ್ನು ಆಯ್ಕೆ ಮಾಡಿಕೊಳ್ಳುವಾಗ ಅವರಿಗೆ ಅಗತ್ಯವಾದ ತರಬೇತಿ ನೀಡಿ ಪತ್ರಿಕೆಯ ಪಾವಿತ್ರತೆ ಬಗ್ಗೆ ವರದಿಗಾರರ ಜವಾಬ್ದಾರಿ ಬಗ್ಗೆ ತಿಳಿಸಬೇಕು, ಇಲ್ಲವಾದಲ್ಲಿ ವಾಹನ ಚಾಲನೆ ಬರದವರಿಗೆ ವಾಹನ ನೀಡಿ ಹಲವಾರು ಮಂದಿ ಜೀವಕೆ ಜೀವ ಹಾನಿ ಹೇಗೆ ಉಂಟಾಗುತ್ತದೋ ಅದೇ ರೀತಿ ತರಬೇತಿ ಪಡೆಯದೆ ಮಾಧ್ಯಮದಲ್ಲಿ ರಂಗದಲ್ಲಿ ಕಾರ್ಯನಿರ್ವಹಿಸುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಚಿ.ನಿ ಪುರುಷೋತ್ತಮ್ , ಪದಾಧಿಕಾರಿಗಳಾದ ಆರ್ ನಾಗರಾಜು, ರಘುರಾಮ್, ಗೋವಿಂದಪ್ಪ, ರಂಗನಾಥ್, ರಂಗಧಾಮ, ಹನುಮಂತರಾಯಪ್ಪ, ರಾಮಾಂಜನೇಯಲು, ಪ್ರಸನ್ನ ಮೂರ್ತಿ , ಕೆ.ಆರ್ ಜಯಸಿಂಹ ಇತರೆ ಮಾಧ್ಯಮ ಮಿತ್ರರು ಭಾಗವಹಿಸಿದ್ದರು.
ವರದಿ: ಶ್ರೀನಿವಾಸುಲು ಎ