IMG 20210916 WA0025

ಮ್ಯೂಸಿಕ್ ಥೆರಪಿ ಆ್ಯಪ್ ಬಿಡುಗಡೆ….!

BUSINESS

ಬೆಂಗಳೂರು ಸೆ 16:- ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ ಮ್ಯೂಸಿಕ್ ಥಳ ಎಲ
(ಸಂಗೀತದ ಮೂಲಕ ಚಿಕಿತ್ಸೆ) ನೀಡಬಹುದಾದ
‘ಎಕೋ’ ಆ್ಯಪ್’ ಬಿಡುಗಡೆ
** ಎಐ ಆಧಾರಿತ ಆ್ಯಪ್
** ಸಂಗೀತ ಚಿಕಿತ್ಸೆಯ ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಕ್ಷೇಮ ಸಾಧನ ***

ಡಿಜಿಟಲ್ ವೆಲ್‍ನೆಸ್ ಅಭಿವೃದ್ಧಿ ಪಡಿಸಿರುವ ‘ಎಕೋ’ ಆ್ಯಪ್ ಅನ್ನು ಬೆಂಗಳೂರಿನಲ್ಲಿ ಇಂದು ಶ್ರೀ ಭಾಸ್ಕರ್ ರಾವ್ (ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್) ಹಾಗೂ ಇನ್ನಿತರ ಗಣ್ಯರು ಸೇರಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಿಜಿಎನ್ ಎಚ್‌ಎಚ್‌ಎಲ್‌ಟಿ ಎಲ್‌ಎಲ್‌ಪಿಯ ಸಿಇಓ ಮತ್ತು ಸಹ ಸಂಸ್ಥಾಪಕಿ ಶ್ರೀಮತಿ ಸುಜಾತ ವಿಶ್ವೇಶ್ವರ ರವರು ಮಾತನಾಡುತ್ತಾ ‘ಎಕೋ’ ಆ್ಯಪ್ ಮನುಷ್ಯನ ಮನಸ್ಥಿತಿ, ಒತ್ತಡ ಮತ್ತು ಆತಂಕದ ಮಟ್ಟವನ್ನು ಅಳೆಯಲು ಮತ್ತು ಆತ್ಮವಿಶ್ವಾಸ, ಕಾರ್ಯಕ್ಷಮತೆ ಹಾಗೂ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಬಹಳ ಸಹಕಾರಿಯಾಗಿದೆ. ಅಲ್ಲದೇ ಭಾವನಾತ್ಮಕವಾಗಿ ನೆಮ್ಮದಿ ತರಲು ಕಸ್ಟಮೈಸ್ ಮಾಡಿದ ಸಂಗೀತ ಪ್ಲೇಪಟ್ಟಿಯನ್ನು ತಯಾರಿಸಲಾಗಿದ್ದು ಅದರಲ್ಲಿ ತಮಗೆ ಇಷ್ಟವಾಗುವ ಟ್ಯೂನ್‍ಗಳನ್ನು ಆರಿಸಿಕೊಳ್ಳಲು ಸಹ ಅವಕಾಶವಿರುತ್ತದೆ. ಆ್ಯಪ್ ಅನ್ನು ಕೃತಕ ಬುದ್ಧಿಮತ್ತೆ (ಎ ಐ) ತಂತ್ರಜ್ಞಾನದದಿಂದ ಅಭಿವೃದ್ದಿಪಡಿಸಲಾಗಿದೆ.IMG 20210916 122630

ಈ ಸಂಗೀತ ಚಿಕಿತ್ಸೆಯಲ್ಲಿ ಮನರಂಜನೆಗಿಂತ ಸಹಾನುಭೂತಿಯ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಇದು ಮನುಷ್ಯನ ನೋವುಗಳನ್ನು ನಿವಾರಿಸಲು ಸಹಕಾರಿಯಾಗಿರುವುದು ಮಾತ್ರವಲ್ಲದೇ ಮನಸ್ಸನ್ನು ಸರಿಪಡಿಸಲು, ಮನುಷ್ಯನ ಒಳನೋಟಗಳನ್ನು ಸಂಗ್ರಹಿಸಲು, ಒತ್ತಡದ ಮಟ್ಟವನ್ನು, ಆತಂಕವನ್ನು ಕಡಿಮೆ ಯಾಗಿಸಲೂ ಸಹ ಸಹಾಯ ಮಾಡುತ್ತದೆ. ಸಂಗೀತವು ವಿಜ್ಞಾನವನ್ನು ಮೀರಿದ ಏಕೈಕ ಕಲೆಯಾಗಿದೆ.

ಮತ್ತೆ ಮುಂದುವರೆದು ಮಾತನಾಡುತ್ತಾ ‘ಅಸಂಖ್ಯಾತ ದತ್ತಾಂಶ ವಿಜ್ಞಾನಿಗಳು, ಎಂಜಿನಿಯರ್‌ಗಳು, ಸಂಗೀತಗಾರರು, ಕಲಾವಿದರು, ಮನಶ್ಶಾಸ್ತ್ರಜ್ಞರು ಮತ್ತು ವಿಶ್ಲೇಷಕರ ಸಹಾಯದಿಂದ 3 ವರ್ಷದ ಅವಧಿಯಲ್ಲಿ ‘ಎಕೋ’ ನಿರ್ಮಿಸಲಾಗಿದೆ. 3 ವರ್ಷಗಳ ಅವಧಿಯಲ್ಲಿ ಸರಾಸರಿ 27 ಮಾನವ ಜೀವಿತಾವಧಿಯನ್ನು ಕಳೆದಿದೆ ಎಂದರು.
ಈ ಸಂದರ್ಭದಲ್ಲಿ ಜಯ ಅಮರನ್, ಡಾ. ಹರಿಕೃಷ್ಣ ಮಾರಮ್, ಡಾ. ಶ್ರೀನಿವಾಸ್ ವೇಗಿ, ಡಾ. ಸಿ.ಆರ್. ಸತೀಶ್ ಕುಮಾರ್, ಶ್ರೀಮತಿ ಭಾರತಿ ಪ್ರತಾಪ್ ಹಾಗೂ ಇನ್ನಿತರ ಗಣ್ಯರು ಹಾಜರಿದ್ದರು.