IMG 20210922 WA0063

ಅವ್ಯವಸ್ಥೆಯ ದೋಮ್ಮತಮರಿ ಗ್ರಂಥಾಲಯಕ್ಕೆ ಹೆಲ್ಪ್ ಸೊಸೈಟಿ ವತಿಯಿಂದ ಕಾಯಕಲ್ಪ..!

DISTRICT NEWS ತುಮಕೂರು

ಅವ್ಯವಸ್ಥೆಯ ದೋಮ್ಮತಮರಿ ಗ್ರಂಥಾಲಯಕ್ಕೆ ಹೆಲ್ಪ್ ಸೊಸೈಟಿ ವತಿಯಿಂದ ಕಾಯಕಲ್ಪ.

ಪಾವಗಡ ಸೆ 22 ಅವ್ಯವಸ್ಥೆಯಿಂದ ಕೂಡಿದ್ದ ದೋಮ್ಮತಮರಿ ಗ್ರಾಮಪಂಚಾಯಿತಿ ಸಾರ್ವಜನಿಕ ಗ್ರಂಥಾಲಯಕ್ಕೆ ಹೆಲ್ಪ್ ಸೊಸೈಟಿ ನೆರವನ್ನು ನೀಡಿ ಹೊಸ ಕಾಯಕಲ್ಪ ದಿಂದ ಇಂದು ಓದುಗರು ಖುಷಿಪಟ್ಟಾಂತಾಗಿದೆ ಎಂದು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ತಿಳಿಸಿದರು.

IMG 20210922 WA0062
ದೋಮ್ಮತಮರಿ ಗ್ರಾಮಪಂಚಾಯಿತಿ ಸಾರ್ವಜನಿಕ ಗ್ರಂಥಾಲಯ ಅವ್ಯವಸ್ಥೆಯಿಂದ ಕೂಡಿದ್ದ ಬಗ್ಗೆ ಕೆಲವು ದಿನಗಳ ಹಿಂದೆ ಸಾರ್ವಜನಿಕರ ಮನವಿ ಮೇರೆಗೆ ಅಂದು ಸ್ಥಳಕ್ಕಾಗಮಿಸಿ ಸದರಿ ಗ್ರಂಥಾಲಯಕ್ಕೆ ನೆರವನ್ನು ನೀಡಿದ ಕಾಯಕಲ್ಪದ ಪಲವಾಗಿ ಗ್ರಂಥಾಲಯ ಇಂದು ಸುಣ್ಣ ಬಣ್ಣ ಗಳಿಂದ ಕೂಡಿದ್ದು ಸಾರ್ವಜನಿಕರು ಹಾಗೂ ಓದುಗರು ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ರವರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

ಗ್ರಂಥಾಲಯಕ್ಕೆ ಇಂದು ಬೇಟಿ ನೀಡಿ ಮತ್ತಷ್ಟು ಪುಸ್ತಕಗಳನ್ನು ಸಹ ಹೆಲ್ಪ್ ಸೊಸೈಟಿ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಅನಿಲ್ ಕುಮರ್, ಗ್ರಂಥಾಲಯದ ಮೇಲ್ವಿಚಾರಕರು ಮಧ್ಲೇಟಿ ,ಸಾಯಿ ರೆಡ್ಡಿ ,ಭೀಮರಾಜ್, ಬಾಬು, ಅಜಿತ್ ಭಾಸ್ಕರ್ ,ಮಲ್ಲಿ ಚಂದ್ರ, ಅಂಜಿ, ಸಿದ್ದೇಶ್, ಶಿವಣ್ಣ, ಅನಿಲ್ ಕುಮಾರ್ ಮುಂತಾದವರು ಇದ್ದರು

ವರದಿ: ಸತೀಶ್