*ಪಶುಸಂಗೋಪನೆ ಇಲಾಖೆಗೆ ಕೇಂದ್ರದಿಂದ ಬಂಪರ್ ಕೊಡುಗೆ* : *ಸಚಿವ ಪ್ರಭು ಚವ್ಹಾಣ್*
ಬೆಂಗಳೂರು , ಸೆಪ್ಟೆಂಬರ್ 06 : ಕಳೆದ ಒಂದು ವರ್ಷದಿಂದ ಕೇಂದ್ರ ಪಶುಸಂಗೋಪನೆ ಇಲಾಖೆಯೊಂದಿಗೆ ಸಂವಹನ ನಡೆಸಿದ ಪರಿಣಾಮ ರಾಜ್ಯಕ್ಕೆ 275 ಪಶುಸಂಜೀವಿನಿ ಸಂಚಾರಿ ಪಶು ಚಿಕಿತ್ಸಾವಾಹನ ರಾಜ್ಯಕ್ಕೆ ದೊರಕಿವೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಪತ್ರಿಕಾಗೊಷ್ಟಿ ನಡೆಸಿದ ಸಚಿವರು ಈ ಕುರಿತಾಗಿ ಮಾಹಿತಿ ನೀಡಿದರು. ರಾಜ್ಯದಲ್ಲಿ ಪಶುಸಂಜೀವಿನಿ ಯಶಸ್ವಿಯಾಗಿದ್ದು ಎಲ್ಲ ತಾಲೂಕುಗಳಿಂದ ಬೇಡಿಕೆ ಹೆಚ್ಚು ಬರುತ್ತಿತ್ತು. ರೈತರ ಮನೆ ಬಾಗಿಲಿಗೆ ಸಂಚಾರಿ ಪಶು ಚಿಕಿತ್ಸಾವಾಹನ ತೆರಳಿ ಚಿಕಿತ್ಸೆ ನಿಡುತ್ತಿರುವುದರಿಂದ ರೈತರಿಗೆ ಈ ಯೋಜನೆ ಹೆಚ್ಚು ಉಪಯೋಗವಾಗಿದೆ.
ಅಲ್ಲದೇ ಎಲ್ಲ ತಾಲೂಕುಗಳಿಗೂ ಇದನ್ನು ವಿಸ್ತರಣೆ ಮಾಡಬೇಕು ಎಂದು ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಪಶುಸಂಗೋಪನೆ ಇಲಾಖೆಯ ಕೇಂದ್ರ ಸಚಿವರಾದ ಪರಶೋಷ್ತಮ್ ರೂಪಾಲ್, ಸಚಿವರಾದ ಸಂಜೀವ್ ಕುಮಾರ ಬಾಲ್ಯನ್ ಹಾಗೂ ಡಾ.ಎಲ್ ಮುರುಗನ್ ಅವರರೊಂದಿಗೆ ನಿರಂತರವಾಗಿ ಚರ್ಚೆ ನಡೆಸಿದ ಪರಿಣಾಮ ರಾಷ್ಟ್ರೀಯ ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದಕ್ಕೆ 275 ಪಶು ಚಿಕಿತ್ಸಾ ವಾಹನಗಳು ದೊರೆತಿವೆ ಎಂದರು.
ವಾಹನ ಒದಗಿಸಲು ಕೇಂದ್ರದಿಂದ ಒಟ್ಟು ರೂ.44 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಪ್ರತಿ ಪಶು ಚಿಕಿತ್ಸಾ ವಾಹನಕ್ಕೆ ರೂ.16 ಲಕ್ಷ ವೆಚ್ಚವಾಗಲಿದೆ. ವಾರ್ಷಿಕವಾಗಿ ವಾಹನ ನಿರ್ವಹಣೆ ಪಿಪಿಪಿ ಮಾದರಿಯಲ್ಲಿ ನಡೆಯಲಿದೆ.
ಪ್ರತಿ ವರ್ಷ ವಾಹನ ಹಾಗೂ ಸಿಬ್ಬಂದಿಯ ನಿರ್ವಹಣೆಗೆ ಹೆಚ್ಚುವರಿಯಾಗಿ ರೂ.50 ಕೋಟಿ ಅನುದಾನವನ್ನು ಕೇಂದ್ರ ಹಾಗೂ ರಾಜ್ಯದ ಪಾಲುದಾರಿಕೆಯಲ್ಲಿ ನೀಡಲಾಗಿದೆ. ರಾಜ್ಯದ ಪಾಲು ಶೇ 40 ಹಾಗೂ ಕೇಂದ್ರದ ಪಾಲು ಶೇ 60 ಇರಲಿದೆ.
ವಾಹನದಲ್ಲಿ ಒರ್ವ ಪಶುವೈದ್ಯರು, ಪಶುವೈದ್ಯಕೀಯ ಸಹಾಯಕ ಹಾಗೂ ನುರಿತ ಚಾಲಕ/ಪರಿಚಾರಕ ಇರಲಿದ್ದಾರೆ. ಪಶು ಕಲ್ಯಾಣ ಸಹಾಯವಾಣಿ ದೇಶದಲ್ಲೇ ಮೊದಲಬಾರಿಗೆ ರಾಜ್ಯದಲ್ಲಿ ಸ್ಥಾಪನೆ ಆಗಿದ್ದು ಅತ್ಯಂತ ಯಶಸ್ವಿಯಾಗಿ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪಶುಸಂಗೋಪನೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಇದಿಂದಾಗಿ ಪಶುಸಂಜೀವಿನಿ ರಾಜ್ಯಾದ್ಯಂತ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ.
*ರಾಜ್ಯದ ಯೋಜನಾ ಮಾದರಿ ದೇಶಕ್ಕೆ ವಿಸ್ತರಣೆ*
ದೆಹಲಿ ಪ್ರವಾಸದ ಸಮಯದಲ್ಲಿ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದಾಗ ಕರ್ನಾಟಕದಲ್ಲಿ ಕೈಗೊಂಡ ನೂತನ ಪ್ರಯೋಗ ರೈತರ ಮನೆ ಬಾಗಿಲಿಗೆ ಪಶುಸಂಜೀವಿನಿ ಕುರಿತು ಚರ್ಚೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಂದಿನ ಕೇಂದ್ರ ಪಶುಸಂಗೋಪನೆ ಸಚಿವರಾಗಿದ್ದ ಗಿರಿರಾಜ್ ಸಿಂಗ್ ರಾಜ್ಯದ ಈ ಯೋಜನೆಯನ್ನು ಶ್ಲಾಘನೆ ಮಾಡಿದ್ದರು. ಅಲ್ಲದೇ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿ ದೇಶದ ರೈತರ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಇದನ್ನು ದೇಶಾದ್ಯಂತ ವಿಸ್ತರಣೆ ಮಾಡಲು ಚರ್ಚೆ ನಡೆಸುವುದಾಗಿ ತಿಳಿಸಿದ್ದರು. ಸದ್ಯ ದೇಶದ 14 ರಾಜ್ಯಗಳಿಗೆ ಕೇಂದ್ರ ದಿಂದ ಸಂಚಾರಿ ಪಶುಶಸ್ತ್ರ ಚಿಕಿತ್ಸಾವಾಹನ ನೀಡಲಾಗಿದೆ. ರಾಜ್ಯದ ಯೋಜನಾ ಮಾದರಿ ದೇಶಕ್ಕೆ ವಿಸ್ತರಣೆ ಆಗುತ್ತಿರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
*ರಾಜ್ಯಕ್ಕೆ 50 ಲಕ್ಷ ಡೋಸ್*
ಸದ್ಯ ರಾಜ್ಯದಲ್ಲಿ ಕಾಲುಬಾಯಿ ರೋಗ ನಿಯಂತ್ರಣದಲ್ಲಿ ಪಶುಸಂಗೋಪನೆ ಇಲಾಖೆ ತೊಡಗಿದೆ. ಸದ್ಯ ಕೇಂದ್ರ ದಿಂದ ರಾಜ್ಯದಲ್ಲಿ ರೂ.50 ಲಕ್ಷ ಡೋಸ್ ದೊರೆತಿದ್ದು ರಾಜ್ಯದಲ್ಲಿ ಕಾಲುಬಾಯಿ ರೋಗ ಕಂಡಬಂದ ಪ್ರದೇಶದಲ್ಲಿ ಆದ್ಯತೆಯ ಮೇಲೆ ಲಸಿಕೆ ವಿತರಣೆ ತುರ್ತಾಗಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ರೋಗೋದ್ರೇಕ ಕಂಡುಬಂದ ಜಿಲ್ಲೆಗಳಲ್ಲಿ ರಿಂಗ್ ವ್ಯಾಕ್ಸಿನ್ ಗೆ ಹೆಚ್ಚು ಆದ್ಯತೆ ನೀಡಿ ಕಾಲುಬಾಯಿ ರೋಗವನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುತ್ತೇವೆ ಎಂದು ಸಚಿವರು ನುಡಿದರು.
ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಅತೀ ಶೀಘ್ರದಲ್ಲೆ ಸಮಯ ನಿಗದಿ ಪಡಿಸಿ ಸಂಚಾರಿ ಪಶುಶಸ್ತ್ರ ಚಿಕಿತ್ಸಾವಹನವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಟಾಟಾ ಕಂಪನಿ ಜೋತೆ ಮಾತುಕತೆ ನಡೆಸಲಾಗಿದ್ದು ಆದಷ್ಟು ಬೇಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚಾರಿ ಪಶುಶತ್ತ್ರ ಚಿಕಿತ್ಸಾವಾಹನ ಕಾರ್ಯನಿರ್ವಹಿಸಲಿವೆ.
ರೈತರ ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದ್ದಕ್ಕಾಗಿ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೆ, ಕೇಂದ್ರ ಪಶುಸಂಗೋಪನೆ ಸಚಿವರಾದ ಪರಷೋತ್ತಮ್ ರೂಪಾಲ್, ಸಚಿವರಾದ ಸಂಜೀವ್ ಕುಮಾರ್ ಮಾಲ್ಯನ್ ಹಾಗೂ ಅಂದಿನ ಪಶುಸಂಗೋಪನೆ ಸಚಿವರಾಗಿದ್ದ ಗಿರಿರಾಜ್ ಸಿಂಗ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ರಾಜ್ಯದ ಎಲ್ಲ ರೈತರ ಹಾಗೂ ಜಾನುವಾರು ಸಾಕಣೆದಾರರ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪಶುಸಂಗೋಪನೆ ಇಲಾಖೆ ನಿರ್ದೇಶಕರಾದ ಮಂಜುನಾಥ ಪಾಳೇಗಾರ, ಆಪ್ತಕಾರ್ಯದರ್ಶೀ ಡಾ. ಸಿ ಭಾಸ್ಕರ್ ನಾಯಕ್ ಹಾಗೂ ವಿಶೇಷ ಕರ್ತವ್ಯಾಧಿಕಾರಿಗಳಾದ ಡಾ. ಎಂ ಜಯಪ್ರಕಾಶ್ ಹಾಗೂ ಎಂ ಸಿದ್ದಲಿಂಗೇಶ್ ಅವರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕರ್ನಾಟಕ ಅನುಷ್ಠಾನಕ್ಕೆ ತಂದ ವಿನೂತನ ಯೋಜನೆ ಪಶುಸಂಜೀವಿಯ ಪರಿಕಲ್ಪನೆಯನ್ನು ದೇಶದ ಎಲ್ಲಾ ರಾಜ್ಯಗಳಿಗೆ ಕೇಂದ್ರದಿಂದ ವಿಸ್ತರಣೆ ಮಾಡುತ್ತಿರುವುದರ ಬಗ್ಗೆ ಸ್ವತಃ ಕೇಂದ್ರ ಪಶುಸಂಗೋಪನೆ ಸಚಿವರು ಕರೆ ಮೂಲಕ ತಿಳಿಸಿದ್ದಾರೆ. ಇದು ಕರ್ನಾಟಕಕ್ಕೆ ಹಾಗೂ ಪಶುಸಂಗೋಪನೆ ಇಲಾಖೆಗೆ ಅತ್ಯಂತ ಸಂತೋಷದ ಸಂಗತಿ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.