ಕಾಮಗಾರಿ ಗುಣಮಟ್ಟದ್ದಾಗಿರಲಿ : ಶಾಸಕ ವೆಂಕಟರಮಣಪ್ಪ
ವೈ.ಎನ್.ಹೊಸಕೋಟೆ: ಗ್ರಾಮ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಭೂಮಿ ಪೂಜೆ ಮತ್ತು ಉದ್ಘಾಟನೆ ಮಂಗಳವಾರ ಶಾಸಕ ವೆಂಕಟರಮಣಪ್ಪ ನೆರವೇರಿಸಿದರು.
ಈ ವೇಳೆ ಮಾತನಾಡಿ ತಾಲ್ಲೂಕಿನ ಸರ್ವಾಂಗೀಣ ಪ್ರಗತಿಗೆ ಹೆಚ್ಚು ಒತ್ತು ನೀಡುತ್ತಿದ್ದು, ಸರ್ಕಾರದ ವತಿಯಿಂದ ಹೆಚ್ಚಿನ ಯೋಜನೆಗಳನ್ನು ತಾಲ್ಲೂಕಿಗೆ ತರಲಾಗಿದೆ. ರಸ್ತೆ, ಶಾಲೆ, ಕಟ್ಟಡ, ಕುಡಿಯುವ ನೀರು ಇನ್ನಿತರೆಗಳ ಕ್ಷೇತ್ರಗಳಲ್ಲಿ ಕಾಮಗಾರಿಗಳು ಪ್ರಾರಂಭಗೊಂಡಿವೆ. ಗುತ್ತಿಗೆದಾರರು ಕಾಮಗಾರಿಯ ಗುಣಮಟ್ಟಕ್ಕೆ ಹೆಚ್ಚು ಗಮನ ನೀಡಬೇಕು ಎಂದು ತಿಳಿಸಿದರು.
ವೈ.ಎನ್.ಹೊಸಕೋಟೆ ಗ್ರಾಮದ ಆರ್.ವಿ. ಪಿ. ಕಾಲೇಜ್ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ,
ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಾಂಪೌಂಡ್ ನಿರ್ಮಾಣಕ್ಕೆ 20 ಲಕ್ಷ ವೆಚ್ಚ, ನೀಲಮ್ಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೊಠಡಿ ನಿರ್ಮಾಣಕ್ಕೆ 20 ಲಕ್ಷ, ಪಶುಚಿಕಿತ್ಸಾ ಕಛೇರಿ ಕಾಂಪೌಂಡ್ ನಿರ್ಮಾಣಕ್ಕೆ 4 ಲಕ್ಷ, ಬಳ್ಳಾರಿ ಮುಖ್ಯರಸ್ತೆಯಿಂದ ಸೂಲನಾಯಕನಹಳ್ಳಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗೆ 20 ಲಕ್ಷ , ಯರ್ರಮ್ಮನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 10 ಲಕ್ಷ ರೂಗಳ ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಇದೇ ವೇಳೆ ಸೂಲನಾಯಕನಹಳ್ಳಿಯಲ್ಲಿ ಲೋಕೋಪಯೋಗ ಇಲಾಖೆಯ ವತಿಯಿಂದ 11 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಶಾಲಾ ಕೊಠಡಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬಿ.ಇ.ಓ ಅಶ್ವಥನಾರಾಯಣ, ಎಇಇ ಸುರೇಶ್ ಕುಮಾರ್, ಮುಖ್ಯ ಇಂಜಿನಿಯರ್ ಅನಿಲ್ ಕುಮಾರ್, ಇಂಜನಿಯರ್ ಬಸಲಿಂಗಪ್ಪ, ಮುಖಂಡರಾದ ಎನ್.ಆರ್.ಅಶ್ವಥ್ ಕುಮಾರ್, ಇ.ವಿ.ಶ್ರೀಧರಪ್ಪ, ಷಂಶುದ್ಧೀನ್, ಎನ್.ಜಿ.ರಾಮು, ಶಿವಾನಂದಗುಪ್ತ, ಟಿ.ಎನ್.ಜಗನ್ನಾಥ, ಎಸ್.ಟಿ.ನಾಗರಾಜು, ಟಿ.ಆರ್.ವಿ ಪ್ರಸಾದ್, ಹೆಚ್.ಆನಂದ, ಜಯಕೀರ್ತಿ, ಎಂ.ಸಿ.ಜಯರಾಮ, ಸಾದಿಖ್ ಸಾಬ್, ಕೇಶವಮೂರ್ತಿ,ಹನುಮಂತರಾಯಪ್ಪ, ತಿಪ್ಪೇಸ್ವಾಮಿ.ಓ, ರಾಮಪ್ಪ, ಮಹಬೂಬ್ ಇದ್ದರು.
ವರದಿ : ಸತೀಶ್