ತುಂಗಭದ್ರಾ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಶಾಸಕ ಹೆಚ್.ವಿ ವೆಂಕಟೇಶ್.
ಪಾವಗಡ: ತಾಲ್ಲೂಕಿನ ಜನರ ಬಹುದಿನದ ಕನಸಾಗಿದ್ದ ತುಂಗಭದ್ರಾ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಶೀಘ್ರ ಮನೆ ಮನೆಗೆ ಕುಡಿಯುವ ನೀರು ಸರಬರಾಜಾಗಲಿದೆ ಎಂದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕನ್ಕಡ ರಾಜ್ಯೋತ್ಸವ ರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶೀಘ್ರವೇ ತಾಲೂಕಿನಲ್ಲಿರುವ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸಿ. ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುದಾಗಿ ತಿಳಿಸಿದರು.
ತಹಶೀಲ್ದಾರ್ ಡಿ ಎನ್ ವರದರಾಜು, ಮಾತನಾಡಿ,
ತಾಲ್ಲೂಕಿಗೆ ತನ್ನದೇ ಆದಂತಹ ಇತಿಹಾಸವಿದ್ದು. . ಸಾಹಿತ್ಯ, ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದವರು ಸಾಕಷ್ಟು ಮಂದಿ ತಾಲೂಕಿನಲ್ಲಿ ಇದ್ದಾರೆ ಎಂದರು.
ಸಾಹಿತ್ಯ ಪರಿಷತ್ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಜಿಲ್ಲಾಡಳಿತ ಗಡಿ ನಾಡಿನಲ್ಲಿರುವ ತಾಲ್ಲೂಕನ್ನು ಗುರುತಿಸಿ ಪ್ರತಿವರ್ಷ ಒಬ್ಬರಿಗಾದರೂ ಪ್ರಶಸ್ತಿ ನೀಡಬೇಕು. ಕನ್ನಡ ಭವನಕ್ಕೆ ನಿವೇಶನ ಕೊಡಿಸುವಲ್ಲಿ ಶಾಸಕರು, ಅಧಿಕಾರಿಗಳು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 20 ಮಂದಿಯನ್ನು ಅಭಿನಂದಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಕರಿಯಣ್ಣ ನಿಷಾದ್, ಪ್ರೇಮಜ್ಯೋತಿ. ಜಾನಪದ ಕಲೆ-ಡಿ ನಾಗರಾಜು, ಎನ್ ಮರಿಸ್ವಾಮಿ. ಕ್ರೀಡಾ ಕ್ಷೇತ್ರ-ಬಿ ಶ್ರೀನಿವಾಸ, ಎಂ. ಗಿರೀಶ. ರಂಗಭೂಮಿ- ಡಿ. ಟಿ. ನರಸಿಂಹಮೂರ್ತಿ. ಸಮಾಜ ಸೇವೆ- ಪೂಜಾರಪ್ಪ, ಶಶಿಕಳಾ, ವಿ.ಸಿ ಪುರುಷೋತ್ತಮರೆಡ್ಡಿ, ರಮೇಶಬಾಬು, ಕೆ.ನಾಗರತ್ನಮ್ಮ, ಕೊತ್ತೂರು ತಿಮ್ಮರಾಜಮ್ಮ ಮಾಕಂನಾರಾಯಣ ಶೆಟ್ಟಿ ಚಾರಿಟಬಲ್ ಟ್ರಸ್ಟ್.ಪೌರ ಕಾರ್ಮಿಕರು-ನರಸಿಂಹಪ್ಪ, ಮಾರಕ್ಕ. ಪತ್ರಿಕಾ ಮಾಧ್ಯಮ- ಕೆ ಆರ್ ಜಯಸಿಂಹ, ಫಾಸ್ಟಿನ್ ಮೈಕಲ್ ಪ್ರದೀಶ್, ಮಲ್ಲಿಕಾರ್ಜುನ. ಗಡಿನಾಡು ಕನ್ನಡ ಸೇವೆ- ರಾಮಯ್ಯನಪಾಳ್ಯ ಕನ್ನಡ ರಾಜ್ಯೋತ್ಸವ ವೇದಿಕೆ. ಪಾರಂಪರಿಕ ವೈದ್ಯ-ಜಿ ಎಸ್ ಬಸವರಾಜು ಅವರನ್ನು ಅಭಿನಂದಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಶಂಕರರೆಡ್ಡಿ, ನಾಗೇಂದ್ರರಾವ್ ನಾನಿ, ಪುರಸಭೆ ಸದಸ್ಯ ತೆಂಗಿನಕಾಯಿ ರವಿ, ರವಿ ಕುಮಾರ್, ಎಂ ಎ ಜಿ ಇಮ್ರಾನ್, ಎಂ ಎಸ್ ವಿಶ್ವನಾಥ್, ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ, ಕೃಷ್ಣರಾವ್, ಇನ್ ಸ್ಪೆಕ್ಟರ್ ಎಂ ಆರ್ ಸುರೇಶ್, ಗಿರೀಶ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಕೆ ಒ ಜಾನಕಿರಾಮ್, ಬಿಇಒ ಇಂದ್ರಾಣಮ್ಮ, ಬಿ ಆರ್ ಸಿ ಜಿ ವೆಂಕಟೇಶ್, ಮುಖ್ಯಾಧಿಕಾರಿ ಷಂಷುದ್ದಹ, ಕಂದಾಯ ನಿರೀಕ್ಷಕ ರಾಜಗೋಪಾಲ್, ರಾಜೇಶ್, ಐ ಎ ನಾರಾಯಣಪ್ಪ ಉಪಸ್ಥಿತರಿದ್ದರು
ವರದಿ. ಶ್ರೀನಿವಾಸಲು.ಎ