IMG 20211019 WA0030

ಪಾವಗಡ: ಈದ್ ಮಿಲಾದ್ ಆಚರಣೆ….!

DISTRICT NEWS ತುಮಕೂರು

ಈದ್ ಮಿಲಾದ್ ಆಚರಿಸಿದ ಹೆಲ್ಪ್ ಸೊಸೈಟಿ.

ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಹೆಲ್ಪ್ ಸೊಸೈಟಿ ತಂಡದಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಂಧುಗಳಿಗೆ ಬಟ್ಟೆ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೆಲ್ಪ್ ಸೊಸೈಟಿಯ ಅಧ್ಯಕ್ಷರಾದ ಮಾನಂ ಶಶಿಕಿರಣ್ ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳು, ಆಚರಣೆಗಳಲ್ಲಿ ಒಂದಾದ ಈದ್ ಮಿಲಾದ್ ಹಬ್ಬವನ್ನು ನಾವು ಆಯ್ದ ಕೆಲವು ಮುಸ್ಲಿಂ ಸಮುದಾಯದ ಬಂಧುಗಳಿಗೆ ಬಟ್ಟೆ ನೀಡಿ ಹಬ್ಬ ಆಚರಿಸಲಾಯಿತು. ವೇಳೆ ನಾಡಿನ ಸಮಸ್ತ ಮುಸ್ಲಿಂ ಸಮುದಾಯದವರಿಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಸಮಾಜಸೇವಕರಾದ ನರಸಿಂಹಮೂರ್ತಿ ಬೀದಿಬದಿ ವ್ಯಾಪಾರ ಸಂಘದ ಅಧ್ಯಕ್ಷರಾದ ಕುಮಾರ್, ಶಶಿಕಲಾ,113 ಸಂಘದ ಅಧ್ಯಕ್ಷರಾದ ರಫೀಕ್, ಹೆಲ್ಪ್ ಸೊಸೈಟಿ ಪದಾಧಿಕಾರಿಗಳಾದ ಮಂಜುನಾಥ್, ಸಾಯಿ, ಅನಿಲ್ ಕುಮಾರ್, ಸಾಗರ್, ಭೀಮರಾಜ್, ಬಲಮ್ಮಹಳ್ಳಿ ಬಾಬು, ಮುಸ್ಲಿಂ ಸಮುದಾಯದ ಮುಖಂಡರು ಮುಂತಾದವರು ಇದ್ದರು.

ವರದಿ: ಎ ಶ್ರೀನಿವಾಸುಲು