IMG 20211222 WA0000

ಪಾವಗಡ: ಲೋಕಾಯುಕ್ತ – ಸಾರ್ವಜನಿಕರ ಕುಂದು ಕೊರತೆ ಸಭೆ…!

DISTRICT NEWS ತುಮಕೂರು

ಪಾವಗಡ : ತಾಲೂಕು ಮಟ್ಟದ ಅಧಿಕಾರಿಗಳಾಗಿ ಸಾರ್ವಜನಿಕ ಜೀವನದಲ್ಲಿ ಎಲ್ಲಾ ರೀತಿಯ ಸರಕಾರಿ ಸೌಲಭ್ಯಗಳನ್ನ ಪಡೆಯುವ ನೀವು ಜನಸಾಮಾನ್ಯರಿಗೆ, ರೈತರಿಗೆ ಸಶಕ್ತರಿಗೆ ಸಕಾಲದಲ್ಲಿ ಅವರ ಕೆಲಸವನ್ನು ಮಾಡಿಕೋಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಜಿಲ್ಲಾ ಲೋಕಾಯುಕ್ತ ಎಸ್ಪಿ ವಲೀಪಾಷ ತಿಳಿಸಿದರು.

ಪಾವಗಡ ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಇಲಾಖೆಯ ವತಿಯಿಂದ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ನೀವು ಸ್ವಯಂಪ್ರೇರಿತವಾಗಿ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಗಮನಹರಿಸಬೇಕೆಂದು ಜನತೆಗೆ ನ್ಯಾಯ ದೋರಕಿಸಿ ಕೋಡುವ ಪ್ರಯತ್ನ ನಿಮ್ಮಿಂದ ಆಗಬೇಕು, ಇಲ್ಲವಾದಲ್ಲಿ ಎಲ್ಲಾ ಸರಕಾರಿ ಸೌಲಭ್ಯಗಳನ್ನ ಪಡೆಯುವ ನೀವು ಜವಬ್ದಾರಿಯುತವಾಗಿ ಕೆಲಸ ಮಾಡದಿದ್ದಲ್ಲಿ ಈ ಜನ್ಮದಲ್ಲಿ ಜನತೆಗೆ ನ್ಯಾಯದೋರಕಿಸಲು ಸಾಧ್ಯವೆ ಇಲ್ಲ ಎಂದರು.

ತಾಲೂಕು ವಿವಿಧ ಇಲಾಖೆಗಳ ಬಳಿ ರೈತರು, ಜನಸಾಮ್ಯಾನರು ಬಂದಾಗ ಕೂಡಲೇ ಎಲ್ಲಿ ಆ ಕೆಲಸ ಆಗುತ್ತದೆ ಎಂದು ಅವರಿಗೆ ತಿಳಿಸಬೇಕು, ಜನಸಾಮಾನ್ಯರನ್ನ ಪ್ರತಿದಿನ ಇಲಾಖೆಗಳ ಕಡೆ ತಿರುಗಿಸುವುದು ನಿಮ್ಮಿಂದಲೇ ನಿಲ್ಲುವಂತಾಗಬೇಕು ಎಂದು ಆ ಕೆಲಸ ಆಗುತ್ತದೆ ಎಂಬ ಮಾಹಿತಿ ಅವರಿಗೆ ನೀಡುವಂತಹ ಪ್ರಮಾಣಿಕ ಪ್ರಯತ್ನ ನಿಮ್ಮೇಲ್ಲರಿಂದ ಆದಾಗ ಮಾತ್ರ ನಮ್ಮ ಇಲಾಖೆಯ ಕಡೆ ಸಾರ್ವಜನಿಕರ ದೂರುಗಳು ಬರುವುದು ಕೂಡ ಕಡಿಮೆಯಾಗುತ್ತದೆ ಎಂದು ತಹಶೀಲ್ದಾರ್‍ರವರಿಂದ ಕೂಡ ಸಾರ್ವಜನಿಕರ ಕೆಲಸಗಳಿಗೆ ಆಡ್ಡಿ ಆಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು
ಡಿಎಸ್ಪಿ ರವೀಶ್‍ರವರು ಮಾತನಾಡಿ ಸರಕಾರಿ ಅಧಿಕಾರಿಗಳು ದರ್ಪವನ್ನ ಬಿಟ್ಟು ಗುರುವಾಗಬೇಕು, ನಾಲ್ಕು ಜನರಿಗೆ ಸಹಾಯ ಮಾಡುವ ಗುಣ ನಿಮ್ಮಲ್ಲಿರಬೇಕು ಎಲ್ಲಾ ರೀತಿಯ ಎಲ್ಲಾ ರೀತಿಯ ಸೌಲಭ್ಯಗಳನ್ನ ಪಡೆದು ಸಾರ್ವಜನಿಕರಿಗೆ ಸಕಾಲದಲ್ಲಿ ಕೆಲಸ ಕಾರ್ಯಗಳನ್ನ ಮಾಡಿಕೊಡದ ಪರಿಣಾಮ ನಮ್ಮಲ್ಲಿ ದೂರುಗಳ ಸಂಖ್ಯೆಯು ಕೂಡ ಹೆಚ್ಚಾಗುತ್ತಿರುವುದಕ್ಕೆ ನಿಮ್ಮೇಲ್ಲರ ಕರ್ತವ್ಯಲೋಪ ಸರಿಹೋಗದಿದ್ದಲ್ಲಿ ನಮ್ಮ ಕೆಲಸವನ್ನು ನಾವು ಮಾಡಬೇಕಿದೆ ಎಂದರು.
ತಹಶೀಲ್ದಾರ್ ಕೆ.ಆರ್.ನಾಗರಾಜುರವರು ಪಹಣಿಯ ತಿದ್ದುಪಡಿ ಹಾಗೂ ಗುಂಡಾರ್ಲಹಳ್ಳಿ ಗ್ರಾಮದಲ್ಲಿ ಬಡ ವ್ಯಕ್ತಿ ನಿರ್ಮಿಸಿದ ಮನೆಯನ್ನ ಭೂಕಬಳಿಕೆ ನ್ಯಾಯಾಲಕ್ಕೆ ದೂರು ನೀಡಿದ್ದು, ಮನೆ ಕಟ್ಟಿದ್ದ ವ್ಯಕ್ತಿಗೆ ಗ್ರಾಪಂ ಖಾತೆ ಕೂಡ ನೀಡಿದ್ದರು ಬಡವನಿಗೆ ತಹಶೀಲ್ದಾರ್ ವಿನಕಾರಣ ತೊಂದರೆ ನೀಡುತ್ತಿರುವ ಬಗ್ಗೆ ರೈತ ಸಂಘದ ಅದ್ಯಕ್ಷರಾದ ಪೂಜಾರಪ್ಪ ದೂರು ನೀಡಿದರು.
ಸಾಸಲಕುಂಟೆ ಗ್ರಾಮದ ನಾಗೇಂದ್ರ ಪ್ರತಾಪ್ ನಾಯಕ ಕೃಷಿ ಇಲಾಖೆಯಲ್ಲಿ ನಾಲ್ಕು ವರ್ಷ ಕಳೆದರು ಮಿನಿ ಟ್ಯಾಕ್ಟರ್ ವಿತರಣೆ ಮಾಡುತ್ತಿಲ್ಲವೆಂದು ಸಾಸಲಕುಂಟೆ ಗ್ರಾಪಂ ಇಂಜಿನಿಯರ್ ರಮೇಶ್ ಸಕಾಲದಲ್ಲಿ ನರೇಗ ಕೂಲಿ ಕಾರ್ಮಿಕರಿಗೆ ಎಸ್ಟಿಮೇಟ್, ಸ್ಕೇಚ್ ಕಾಫಿ ನೀಡದ ಬಗ್ಗೆ ಹಾಗೂ ಬಿಎಪ್‍ಟಿ ಆರ್ಯೆಂದ್ರರವರ ಲಂಚ ಪಡೆಯುವ ಬಗ್ಗೆ ವಿರುದ್ದ ಕೂಡ ದೂರು ಸಲ್ಲಿಕೆಯಾಗಿದೆ.
ತಾಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ 8 ದೂರುಗಳು ಸಲ್ಲಿಕೆಯಾಗಿವೆ.
ಸಭೆಯಲ್ಲಿ ತಹಶೀಲ್ದಾರ್ ಕೆ.ಆರ್.ನಾಗರಾಜು, ಪುರಸಭಾ ಮುಖ್ಯಾಧಿಕಾರಿ ಆರ್ಚನಾ, ಸಿಪಿಐಗಳಾದ ಲಕ್ಷ್ಮಿಕಾಂತ್, ಕಾಂತರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವತ್ತನಾರಾಯಣ, ಪಿಡಬ್ಯೂಡಿ ಅನಿಲ್‍ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸನಾಯ್ಕ್, ಎಸ್‍ಟಿ ಇಲಾಖೆಯ ಸಿದ್ದರಾಜು ಹಲವು ಅಧಿಕಾರಿಗಳು ಉಪಸ್ಥಿತರಿದ್ದರು

ವರದಿ: ಶ್ರೀನಿವಾಸುಲು ಎ