IMG 20211226 WA0007

ಕೊರೊನಾ: ರಾಜ್ಯದಲ್ಲಿ 10 ದಿನ ನೈಟ್ ಕರ್ಪ್ಯೂ ಜಾರಿ….

Genaral STATE

ರಾಜ್ಯದಲ್ಲಿ   10 ದಿನ ಕರ್ಪ್ಯೂ ಜಾರಿ ಜಾರಿ…

ಬೆಂಗಳೂರು : ಕೊರೊನಾ ಹೊಸ ಒಮ್ರಿಕಾನ್  ವೈರಸ್ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮವಾಗಿ 10 ದಿನ ನೈಟ್ ಕರ್ಪ್ ಜಾರಿಗೊಳಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಇಂದು ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಸಭೆ ನಡೆಸಿದರು.

ಹೊಸ ವರ್ಷಾಚರಣೆ ಬರುತ್ತಿರುವುದರಿಂದ ಜನರು ಹೆಚ್ಚಾಗಿ ಸೇರುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದರು ಎನ್ನಲಾಗಿದೆ.

IMG 20211226 WA0010

ನಂತರ ಆರೋಗ್ಯ ಸಚಿವ ಸುಧಾಕರ್ ಅವರು ಡಿಶಂಬರ್ 28 ರಿಂದ ಜನವರಿ 7 ವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಲಾಗುತ್ತಿದೆ ಎಂದು ಮಾಧ್ಯಮ ಗಳಿಗೆ ತಿಳಿಸಿದರು

*ರಾತ್ರಿ 10 ರಿಂದ  ಬೆಳಗ್ಗೆ 5 ಗಂಟೆಯ ವರೆಗೆ ನಿಯಮ ಜಾರಿಯಲ್ಲಿ ಇರುತ್ತದೆ.

*  ಹಗಲು ಸಮಯದಲ್ಲಿ  ಹೋಟಲ್, ರೆಸ್ಟೋರೆಂಟ್ , ಕ್ಲಬ್, ಪಬ್  ಗಳಲ್ಲಿ ಶೇಕಡ 50%  ಜನರಿಗೆ ಮಾತ್ರ ಅವಕಾಶ .

* ರಾತ್ರಿ 10 ಗಂಟೆಯ ಹೊಳಗೆ  ಸಭೆ, ಸಮಾರಂಭ ಸೇರಿದಂತೆ ಎಲ್ಲಾ ಕಾರ್ಯಕ್ರಮ ಗಳು ಮುಕ್ತಾಯ ವಾಗಬೇಕು.

* ರಾತ್ತಿ 10 ರ ನಂತರ ರಾಜ್ಯದಲ್ಲಿ ಎಲ್ಲಾ ಚಟುವಟಿಕೆ ಬಂದ್

* ಸರಕು ಸಗಾಣೆ ವಾಹನಗಳಿಗೆ ನಿರ್ಬಂಧವಿಲ್ಲ

* ರಾತ್ರಿ 10 ರ ನಂತರ ಸಿನಿಮಾ ಪ್ರದರ್ಶನಕ್ಕೆ ತಡೆ

* ಮದುವೆ ಸಮಾರಂಭ ಗಳಿಗೆ 300 ಜನರು ಭಾಗವಹಿಸಲು ಅವಕಾಶ.

* ಸಾರಿಗೆ ಸಂಚಾರ ಯಥಾಸ್ಥಿತಿ.

ಕಂದಾಯ ಸಚಿವ ಆರ್. ಅಶೋಕ, ಆರೋಗ್ಯ ಸಚಿವ ಡಾ. ಸುಧಾಕರ್, ಗೃಹ ಸಚಿವ ಆರಗ ಜ್ಞಾನೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು