ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ
ಮುಂಗಡ ಪತ್ರದಲ್ಲಿ ಸೂಕ್ತ
ನೀಲಿ ನಕಾಶೆಯನ್ನು ಹಾಕಿದ್ದಾರೆ – ಕೆ ಎಸ್ ಈಶ್ವರಪ್ಪ
ಬೆಂಗಳೂರು: – ಜನಸಾಮಾನ್ಯರ ಮೇಲೆ ಯಾವುದೆ ಹೊರೆ ಹಾಕದ ಜನಪರ ಮುಂಗಡ ಪತ್ರವನ್ನು ಮುಖ್ಯಮಂತ್ರಿಗಳು ಮಂಡಿಸಿರುವುದಕ್ಕೆ ಅವರನ್ನು ಅಭಿನಂದಿಸುವೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ ಎಸ್ ಈಶ್ವರಪ್ಪ ತಿಳಿಸಿದರು.
ಮನೆ ಮನೆಗೆ ಗಂಗೆ ಯೋಜನೆಗೆ ರಾಜ್ಯ ಸರ್ಕಾರದ ಪಾಲಾದ ₹7000ಕೋಟಿ ಯನ್ನು ನೀಡಲು ಉದ್ದೇಶಿಸಿರುವುದನ್ನು ಸ್ವಾಗತಿಸುತ್ತೇನೆ
23-24ರೊಳಗೆ ಗ್ರಾಮೀಣ ಕರ್ನಾಟಕದ 25ಲಕ್ಷ ಮನೆಗಳಿಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವ ಗುರಿಯನ್ನು ತಲುಪಲಾಗುವುದು
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹ 1,600 ಕೋಟಿ ಮೀಸಲಿಟ್ಟಿರುವುದು ರಸ್ತೆಗಳ ಅಭಿವೃದ್ಧಿಗೆ ಸಹಾಯಕವಾಗುವುದು.
ಪಂಚಾಯತಿಯ ಕೆರೆಗಳ ಅಭಿವೃದ್ಧಿಗೆ ನೂರು ಕೋಟಿ ಹಣವು ಜಲಸಂವರ್ಧನೆಗೆ ಅನುಕೂಲವಾಗುವುದು.
ಸಮಾಜದ ಎಲ್ಲಾ ವರ್ಗದವರನ್ನು ಗಮನದಲ್ಲಿರಿಸಿಕೊಂಡು ಮುಂಗಡ ಪತ್ರವನ್ನು ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.
ಕೋವಿಡ್ ಸಂಕಟವನ್ನು ಯಶಸ್ವಿ ಯಾಗಿ ಎದುರಿಸಿ ರಾಜ್ಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಿರುವ ಮುಖ್ಯಮಂತ್ರಿಗಳು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ಚೊಚ್ಚಲ ಮುಂಗಡ ಪತ್ರದಲ್ಲಿ ಸೂಕ್ತ ನೀಲಿ ನಕಾಶೆಯನ್ನು ಹಾಕಿದ್ದಾರೆ ಎಂದು ಸಚಿವರು ತಿಳಿಸಿದರು.
.