IMG 20220316 WA0006

ಪಾವಗಡ: ಕಲೆ ಉಳಿಯಲು ಪ್ರೋತ್ಸಾಹ ಅಗತ್ಯ…

DISTRICT NEWS ತುಮಕೂರು

ಕಲೆ ಉಳಿಯಲು ಪ್ರೋತ್ಸಾಹ ಅಗತ್ಯ

ವೈ.ಎನ್.ಹೊಸಕೋಟೆ : ಗ್ರಾಮೀಣ ಸೊಗಡಿನ ಜೀವಾಳವಾದ ಕಲೆಗಳು ಉಳಿಯಲು ಸಹಕಾರ ಮತ್ತು ಪ್ರೋತ್ಸಾಹ ಅಗತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು.

ದೊಮ್ಮತಮರಿಯ ಶ್ರೀ ಮಲ್ಲಿಕಾರ್ಜುನ ಕಲಾ ಸಂಘವು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗ್ರಾಮದ ಸರ್ಕಾರಿ ಬಾಲಕರ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಗಡಿ ಜಾನಪದ ಕಲೋತ್ಸವ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಹಳ್ಳಿಯಲ್ಲೂ ಕಾಲಾವಿಧರಿದ್ದಾರೆ. ಅವರಲ್ಲಿರುವ ಕಲೆ ಈ ನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಆದರೆ ಇಂದು ಅವಕಾಶಮತ್ತು ಪೋಷಣೆ ಇಲ್ಲದೆ ಸೊರಗುತಿದೆ. ಸರ್ಕಾರ ಕಲಾ ಮೇಳಗಳ ಮೂಲಕ ಕಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದು ಸಂತಸದ ವಿಷಯ ಎಂದರು.

ವೈದ್ಯರಾದ ಡಾ.ಪ್ರೇಮಯೋಗಿ ಮಾತನಾಡಿ ಪಾಶ್ಚಾತ್ಯ ಸಂಸ್ಕೃತಿಯ ರಾಕ್ ಅಂಡ್ ರೋಲ್‌ಗಳ ಪ್ರದರ್ಶನದ ವೇಳೆ ದೈಹಿಕ ಶ್ರಮ ಮತ್ತು ಮಾನಸಿಕ ಒತ್ತಡ ಹೆಚ್ಚಾ ಅಹಿತ ಎನಿಸುತ್ತದೆ. ಆದರೆ ದೇಶೀಯ ಕಲೆಗಳ ಭರತನಾಟ್ಯ, ಕೂಚುಪುಡಿ ಇನ್ನಿತರೆ ಕಲೆಗಳ ಪ್ರದರ್ಶನ ವೇಳೆ ಕಲಾವಿದರಿಗೂ ಮತ್ತು ನೋಡುಗರಿಗೂ ದೇಹ ಮತ್ತು ಮನಸ್ಸಿಗೆ ಉಲ್ಲಾಸ ಮತ್ತು ಉತ್ಸಾಹ ದೊರೆಯುತ್ತದೆ ಎಂದರು.

ಸಾಹಿತಿ ಸಣ್ಣನಾಗಪ್ಪ ಮಾತನಾಡಿ ಜಾನಪದ ವೈವಿದ್ಯತೆ ಈ ದೇಶದ ವಿಶಿಷ್ಟ ಸಂಸ್ಕೃತಿಯ ಪ್ರತೀಕ. ಒಂದು ವೇಳೆ ಕಲಾವಿದ ಮತ್ತು ಕಲೆ ನಶಿಸಿದರೆ ಒಂದು ಸಂಸ್ಕೃತಿ ನಾಶವಾದಂತಾಗುತ್ತದೆ ಎಂದು ತಿಳಿಸುತ್ತಾ ಹಾಡುಗಳ ಮೂಲಕ ಸಭೆಯನ್ನು ರಂಜಿಸಿದರು.

ಕಲಾವಿದರಾದ ಮರಿಸ್ವಾಮಿ, ಹನುಮಂತನಹಳ್ಳಿ ಶಿವಣ್ಣ, ಗಂಗಯ್ಯರವರಿಂದ ಜಾನಪದ ಮತ್ತು ರಂಗಗೀತೆಗಳ ಸುಗಮಸಂಗೀತ ನೆರವೇರಿತು.

ಚಿಲಿಪಿಲಿ ಗೊಂಬೆ ಕುಣಿತ, ಭರತನಾಟ್ಯ, ವೀರಗಾಸೆ ನೃತ್ಯ ಪ್ರದರ್ಶನಗೊಂಡವು.

ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ನಾಗಮಣಿ ರೇವಣ್ಣ, ಸಂಘಟನೆಯ ಮಲ್ಲಿಕಾರ್ಜುನ, ಭಗತ್ ಪೌಂಡೇಷನ್ ಅಧ್ಯಕ್ಷ ನವೀನ್ ಶರಣ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಅಂತರಗಂಗೆ ಶಂಕರಪ್ಪ, ಯೋಗಶಿಕ್ಷಕ ಎನ್.ಜಿ.ಶ್ರೀನಿವಾಸ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಎನ್.ಆರ್.ಅಶ್ವಥಕುಮಾರ್, ಹೋಬಳಿ ಕಸಾಪ ಅಧ್ಯಕ್ಷ ಹೊ.ಮ.ನಾಗರಾಜು, ಮುಖ್ಯಶಿಕ್ಷಕ ಐ.ಎ.ನಾರಾಯಣಪ್ಪ,ಇದ್ದರು.

ವರದಿ: ಸತೀಶ್