IMG 20220321 WA0034 1

KSRTC:ಯಾವ ಪುರುಷಾರ್ಥ ಕ್ಕೆ ಪಾವಗಡ ಡಿಪೋ…

Genaral STATE

ತಾಲೂಕಿನ ಹಲವಾರು ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲ……….               

                                    

ಪಾವಗಡ.   ಪಳವಳ್ಳಿ ಕಟ್ಟೆ ಮೇಲೆ ಘೋರ ಬಸ್ ದುರಂತ ಸಂಭವಿಸಿ, ಆರು ಜನ ಮರಣ ಹೊಂದಿದ್ದು, 30ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ್ದಾರೆ, ಆಸ್ಪತ್ರೆಗೆ ಸಾರಿಗೆ ಸಚಿವ ಶ್ರೀರಾಮುಲು ಭೇಟಿ ನೀಡಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ನಂತರ ತಾಲೂಕಿಗೆ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು. ಸಚಿವರ ಹೇಳಿಕೆಯಿಂದ‌ ಎಚ್ಚತ್ತ ಡಿಪೋ ಮೆನೇಜರ್ ಅಪಘಾತ ಸಂಭವಿಸಿದ ಮಾರ್ಗವಾದ ವೈ ಎನ್ ಹೊಸಕೋಟೆ- ಪಾವಗಡ ಮಾರ್ಗದಲ್ಲಿ ಮಾತ್ರ ಸತತವಾಗಿ ಬಸ್ ಗಳು ಸಂಚರಿಸಲು ಆರಂಭಿಸಿವೆ.

ವೈ ಎನ್ ಹೊಸಕೋಟೆ ಪಾವಗಡ ತಾಲ್ಲೂಕಿನಲ್ಲಿ ದೊಡ್ಡ ಹೋಬಳಿ, ಇಲ್ಲಿ ಜನಸಂಖ್ಯೆ ಹೆಚ್ಚಿದೆ ಆದರೆ ಅಪಘಾತ ನಡೆಯುವುದಕ್ಕೆ ಮುಂಚೆ ಪಾವಗಡ ಡಿಪೋದಿಂದ ಕೇವಲ ಒಂದು ಬಸ್ ಮಾತ್ರ ಸಂಚರಿಸುತ್ತಿತ್ತು. ಅದು ಬೆಂಗಳೂರು ಮಧ್ಯಾಹ್ನ 3:30 ಕ್ಜೆ ಬಿಟ್ಟು ರಾತ್ರಿ ವೈ ಎನ್ ಹೊಸಕೋಟೆ ಗೆ ಬರುತ್ತಿತ್ತು. ನೆಲಮಂಗಲ ಡಿಪೋ ದಿಂದ ಹೆಚ್ಚು ಬಸ್ ಗಳು ಬೆಂಗಳೂರಿನಿಂದ – ವೈ ಎನ್ ಹೊಸಕೋಟೆ ಗೆ‌ ಬರುತ್ತಿವೆ.

ಯಾವ ಪುರುಷಾರ್ಥ ಕ್ಕೆ ಪಾವಗಡ ಡಿಪೋ…

ಪಾವಗಡ ಡಿಪೋ ದಿಂದ ತಾಲ್ಲೂಕಿನ ಗ್ರಾಮೀಣ ಭಾಗ ಜನರಿಗೆ ಏನು ಪ್ರಯೋಜನ ವಿಲ್ಲ, ಕಾರಣ ಖಾಸಗಿ ಬಸ್ ಗಳ ಮಾಲೀಕರ ಲಾಬಿ, ತಾಲ್ಲೂಕಿನ ರಾಜಕೀಯ ನಾಯಕರ – ಖಾಸಗಿ ಬಸ್ ಮಾಲಿಕರ ಮೇಲಿನ‌ ಪ್ರೀತಿ

IMG 20220321 WA0034
ಕೆಎಸ್ ಆರ್ ಟಿ ಸಿ ಪ್ರದರ್ಶನ
IMG 20220321 WA0035

ಎಷ್ಟು ದಿನ ಈ ನಾಟಕ ಪ್ರದರ್ಶನ….?

ಕಳೆದ ಎರಡು ದಿನದಿಂದ ಸತತವಾಗಿ ಪಾವಗಡ ದಿಂದ ವೈ ಎನ್ ಹೊಸಕೋಟೆ ಗೆ ಕೆಂಪು ಬಸ್ ಗಳು ಬರುತ್ತಿವೆ ಈ ನಾಟಕ ಎಷ್ಟು ದಿನ ನಡೆಯುತ್ತೆ ಕಾದು ನೋಡಬೇಕು….

ಬಸ್ ದುರಂತ ನಡೆದು ಇಂದಿಗೆ 3ನೇ ದಿನವಾಗಿದ್ದು  ಬಸ್ ವ್ಯವಸ್ಥೆಯಲ್ಲಿ ಯಾವುದೇ    ಬದಲಾವಣೆ ಕಂಡು ಬರದೇ ಇರುವುದು ಶೋಚನೀಯ ಸಂಗತಿಯಾಗಿದೆ.                             

IMG 20220321 WA0033

ಗುಮ್ಮಗಟ್ಟ ತಾಲೂಕಿನಿಂದ 28 ಕಿಲೋಮೀಟರ್ ದೂರದಲ್ಲಿದ್ದು, ದೊಮ್ಮತಮರಿಯಿಂದ ಗುಮ್ಮಗಟ್ಟ ಎಂಟು ಕಿಲೋಮೀಟರ್ ದೂರದಲ್ಲಿದ್ದು, ಸುಮಾರು ವರ್ಷಗಳಿಂದ ಯಾವುದೇ ಬಸ್ ವ್ಯವಸ್ಥೆ ಇಲ್ಲ ಎಂದು, ಗುಮ್ಮಘಟ್ಟ ಗ್ರಾಮದ ಆದಿನಾರಾಯಣ  ಬೇಸರ ವ್ಯಕ್ತಪಡಿಸಿ , ಮಾತನಾಡುತ್ತಾ,

ದೊಮ್ಮತಮರಿಯಿಂದ ಬೊಡರ ಹಳ್ಳಿ, ಅಕ್ಕಮ್ಮನಹಳ್ಳಿ, ಚೆನ್ನಮ್ಮ ರೆಡ್ಡಿಹಳ್ಳಿ, ಗುಮ್ಮಗಟ್ಟ ಹಳ್ಳಿಗಳಿಗೆ ಹಲವಾರು ವರ್ಷಗಳಿಂದ ಯಾವುದೇ ಬಸ್ ವ್ಯವಸ್ಥೆ ಇಲ್ಲವೆಂದು, ದಿನನಿತ್ಯ ಶಾಲಾ ಕಾಲೇಜುಗಳಗೆ, ಹಾಗೂ ದೈನಂದಿನ ಕೆಲಸಗಳಿಗೆ ಪಾವಗಡಕ್ಕೆ ಹೋಗುವವರು , ದ್ವಿಚಕ್ರ ವಾಹನ, ಲಗೇಜ್ ಆಟೋ ವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಬಂದಿದೆ, ಹಲವಾರು ಬಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಡಿಪೋ ಮ್ಯಾನೇಜರ್ ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದರು.                                                           

ಪಾವಗಡ ದಿಂದ ಹುಸೇನ್ ಪುರಕ್ಕೆ ಕೇವಲ ಒಂದೇ ಒಂದು ಸರ್ಕಾರಿ ಬಸ್ ಇದೆ ಎಂದು, ದಿನನಿತ್ಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ  ಹಲವಾರು ಕೂಲಿ ಕಾರ್ಮಿಕರು ದಿನನಿತ್ಯ ಸರಿಯಾದ ಸಮಯಕ್ಕೆ ಬಸ್ ಬರದೇ ಇರುವ ಕಾರಣ ದ್ವಿಚಕ್ರ ವಾಹನ ಹಾಗೂ ಆಟೋಗಳ ಮೇಲೆ ಅವಲಂಬಿಸುವ ಪರಿಸ್ಥಿತಿ ಉಂಟಾಗಿದೆ ಎಂದು 10ನೇ ತರಗತಿ ವಿದ್ಯಾರ್ಥಿ ಚರಣ್ ತಿಳಿಸಿದ್ದಾನೆ. ಪರೀಕ್ಷೆ  ಸಮೀಪಿಸುತ್ತಿರುವುದರಿಂದ ಸರಿಯಾದ ವೇಳೆಗೆ ಬಸ್ ಇಲ್ಲದೆ ಇರುವುದರಿಂದ ತುಂಬಾ ತೊಂದರೆಯಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.                                                  ತಾಲೂಕಿನ ಇನ್ನೂ ಹಲವಾರು ಹಳ್ಳಿಗಳಿಗೆ ಇಂದಿಗೂ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದು ಶೋಚನೀಯ ಸಂಗತಿಯಾಗಿದೆ. ಈ ಬಗ್ಗೆ ಪಾವಗಡದ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಹನುಮಂತರಾಯಪ್ಪ ರವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿದಾಗ ಅವರು ಮಾತನಾಡುತ್ತಾ, ಖಾಸಗಿ ಬಸ್ ದುರಂತದ ನಂತರ ಪಾವಗಡ ಮತ್ತು ವೈಎನ್ ಹೊಸಕೋಟೆ ಗೆ ಏಳು ಸರ್ಕಾರಿ ಬಸ್ ಗಳನ್ನು ಹಾಕಿರುವುದಾಗಿ ತಿಳಿಸಿದರು. ಪಾವಗಡ ಡಿಪೋದಲ್ಲಿ 42 ಬಸ್ ಗಳು ಇವೆ ಎಂದು. ಒಂದು ಬಸ್ಸು ದಿನಾಲು 4 ಟ್ರಿಪ್ ಹೊಡೆಯುತ್ತದೆ ಎಂದರು. ಖಾಸಗಿ ಬಸ್ ದುರಂತ ನಂತರ ಸರ್ಕಾರಿ ಬಸ್ಸುಗಳು ಟ್ರಿಪ್ ಗಳನ್ನು ಹೆಚ್ಚಿಸಿರುವುದಾಗಿ ಮಾಹಿತಿ ನೀಡಿದರು.     

ವರದಿ: ಶ್ರೀನಿವಾಸುಲು ಎ